UPSC ಸಿವಿಲ್ ಸರ್ವಿಸ್ ಫಲಿತಾಂಶ ಬಿಡುಗಡೆ, ಶ್ರುತಿ ಶರ್ಮಾ ದೇಶಕ್ಕೆ ಫಸ್ಟ್

ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ ಪರೀಕ್ಷೆ, 2021 ರ ಅಂತಿಮ ಫಲಿತಾಂಶವನ್ನು ಪ್ರಕಟಿಸಿದೆ. ಶ್ರುತಿ ಶರ್ಮಾ ದೇಶಕ್ಕೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

UPSC Civil Service final result 2021 declared gow

ಬೆಂಗಳೂರು (ಮೇ.30): ಕೇಂದ್ರ ಲೋಕಸೇವಾ ಆಯೋಗವು (Union Public Service Commission - UPSC) ಸಿವಿಲ್ ಸರ್ವೀಸಸ್ ಪರೀಕ್ಷೆ, 2021 ರ ಅಂತಿಮ ಫಲಿತಾಂಶವನ್ನು ಪ್ರಕಟಿಸಿದೆ. ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್ - upsc.gov.in ನಿಂದ ಪರಿಶೀಲಿಸಬಹುದು.  ಅಭ್ಯರ್ಥಿಗಳ ರ್ಯಾಂಕ್ ಪಟ್ಟಿ ನೋಡಲು ಇಲ್ಲಿ ಕ್ಲಿಕ್ ಮಾಡಿ

 ಕರ್ನಾಟಕದ 24 ಅಭ್ಯರ್ಥಿಗಳು ಸೇರಿ ಒಟ್ಟು 685 ಅಭ್ಯರ್ಥಿಗಳು ಪಾಸ್ ಆಗಿದ್ದಾರೆ.  ಇಂದು ಪ್ರಕಟವಾದ ಅಂತಿಮ ಫಲಿತಾಂಶದಲ್ಲಿ ಶ್ರುತಿ ಶರ್ಮಾ ದೇಶಕ್ಕೆ ನಂ.1 ಸ್ಥಾನ ಪಡೆದುಕೊಂಡಿದ್ದಾರೆ. ಈ ವರ್ಷ ಎಲ್ಲಾ ಮೊದಲ ಮೂರು ಸ್ಥಾನಗಳನ್ನು ಬಾಲಕಿಯರೇ ಪಡೆದುಕೊಂಡಿದ್ದಾರೆ. ಶ್ರುತಿ ಸೇಂಟ್ ಸ್ಟೀಫನ್ಸ್ ಕಾಲೇಜು ಮತ್ತು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿನಿಯಾಗಿದ್ದು, ಜಾಮಿಯಾ ಮಿಲಿಯಾ ಇಸ್ಲಾಮಿಯಾ ರೆಸಿಡೆನ್ಶಿಯಲ್ ಕೋಚಿಂಗ್ ಅಕಾಡೆಮಿಯಲ್ಲಿ UPSC ನಾಗರಿಕ ಸೇವೆಗಳ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ.

ಎಸ್ಸೆಸ್ಸೆಲ್ಸಿಯಲ್ಲಿ 610ಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ

UPSC CSE ಪೂರ್ವಭಾವಿ ಪರೀಕ್ಷೆಯನ್ನು ಅಕ್ಟೋಬರ್ 10, 2021 ರಂದು ನಡೆಸಲಾಗಿತ್ತು ಮತ್ತು ಪರೀಕ್ಷೆಯ ಫಲಿತಾಂಶಗಳನ್ನು ಅಕ್ಟೋಬರ್ 29 ರಂದು ಬಿಡುಗಡೆ ಮಾಡಲಾಗಿತ್ತು. ಮುಖ್ಯ ಪರೀಕ್ಷೆಯನ್ನು ಜನವರಿ 7 ರಿಂದ 16, 2022 ರವರೆಗೆ ನಡೆಸಲಾಗಿತ್ತು ಮತ್ತು ಫಲಿತಾಂಶಗಳನ್ನು ಮಾರ್ಚ್ 17, 2022 ರಂದು ಘೋಷಿಸಲಾಗಿತ್ತು. ಸಂದರ್ಶನವು ಕೊನೆಯ ಸುತ್ತಿನ ಪರೀಕ್ಷೆಯಾಗಿದ್ದು, ಏಪ್ರಿಲ್ 5 ರಂದು ಪ್ರಾರಂಭವಾಗಿತ್ತು ಮತ್ತು ಮೇ 26 ರಂದು ಮುಕ್ತಾಯವಾಗಿತ್ತು. 

UPSC ಸಿವಿಲ್ ಸರ್ವೀಸಸ್ 2021 ಗಾಗಿ ಒಟ್ಟು 749 ಖಾಲಿ ಹುದ್ದೆಗಳನ್ನು ಸೂಚಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ ಈಗ ಲಭ್ಯವಿದೆ. ಅಗತ್ಯವಿದ್ದರೆ, UPSC ನಂತರ ಮೀಸಲು ಪಟ್ಟಿಯನ್ನು ಬಿಡುಗಡೆ ಮಾಡಬಹುದು.

ಮೊದಲು 10 ಸ್ಥಾನ ಪಡೆದ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ
1 ಶ್ರುತಿ ಶರ್ಮಾ
2 ಅಂಕಿತಾ ಅಗರ್ವಾಲ್
3 ಗಾಮಿನಿ ಸಿಂಗ್ಲಾ
4 ಐಶ್ವರ್ಯಾ ವರ್ಮಾ
5 ಉತ್ಕರ್ಷ ದ್ವಿವೇದಿ
6 ಯಕ್ಷ್ ಚೌಧರಿ
7 ಸಮ್ಯಕ್ ಎಸ್ ಜೈನ್
8 ಇಶಿತಾ ರಾಠಿ
9 ಪ್ರೀತಮ್ ಕುಮಾರ್
10 ಹರ್ಕೀರತ್ ಸಿಂಗ್ ರಾಂಧವಾ

PM CARES For Children ದಾವಣಗೆರೆಯ ಅನಾಥ ಮಕ್ಕಳಿಗೆ 10 ಲಕ್ಷ ಬಾಂಡ್ 

2020 ರಲ್ಲಿ, ಒಟ್ಟು 761 ಅಭ್ಯರ್ಥಿಗಳು ಯುಪಿಎಸ್‌ಸಿ ಸಿಎಸ್‌ಇ ಅಂತಿಮ ಪರೀಕ್ಷೆಯನ್ನು ಉತ್ತೀರ್ಣರಾಗಿದ್ದರು, ಅದರಲ್ಲಿ 545 ಪುರುಷರು ಮತ್ತು 216 ಮಹಿಳೆಯರು. ಪರೀಕ್ಷೆಯಲ್ಲಿ ಶುಭಂ ಕುಮಾರ್ ಪ್ರಥಮ, ಜಾಗೃತಿ ಅವಸ್ಥಿ ದ್ವಿತೀಯ, ಅಂಕಿತಾ ಜೈನ್ ತೃತೀಯ ಸ್ಥಾನ ಪಡೆದಿದ್ದರು. 

Latest Videos
Follow Us:
Download App:
  • android
  • ios