UPSC 9 ರ‍್ಯಾಂಕ್ ಅಪಲಾ ಮಿಶ್ರಾಗೆ ಸ್ಫೂರ್ತಿ ನೀಡಿದ್ದು 'ಗೋಡೆ ಬರಹ' !
* UPSC ಫಲಿತಾಂಶದಲ್ಲಿ 9ನೇ Rank ಗಳಿಸಿಕೊಂಡಿದ್ದ ಅಪಲಾ
* ಸಂದರ್ಶನದಲ್ಲಿಯೂ ಅತಿ ಹೆಚ್ಚು ಅಂಕ ಸಂಪಾದನೆ
* ದಾಖಲೆ ಬರೆದ ಶರ್ಮಾರಿಗೆ ಸ್ಫೂರ್ತಿ ಸಿಕ್ಕಿದ್ದು ಎಲ್ಲಿಂದ
ನವದೆಹಲಿ(ಅ. 01) ಡಾ. ಅಪಲಾ ಮಿಶ್ರಾ.. ಯುಪಿಎಸ್‌ಸಿಯಲ್ಲಿ ಮತ್ತೊಂದು ದಾಖಲೆ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಪ್ರಕಟವಾದ UPSC ಫಲಿತಾಂಶದಲ್ಲಿ 9ನೇ Rank ಗಳಿಸಿಕೊಂಡಿದ್ದರು. ಇದೀಗ ಅಂಕಪಟ್ಟಿ ರಿಲೀಸ್ ಆಗಿದ್ದು ಅಲ್ಲಿಯೂ ದಾಖಲೆ ಬರೆದಿದ್ದಾರೆ.
ಸಂದರ್ಶನ ರೌಂಡ್ ನಲ್ಲಿ ಅತಿ ಹೆಚ್ಚು ಅಂಕ ಗಳಿಸಿ ದಾಖಲೆ ಬರೆದಿದ್ದಾರೆ. ಕಳೆದ ವರ್ಷದ ದಾಖಲೆ 212 ಅಂಕವನ್ನು ಮುರಿದಿರುವ ಮಿಶ್ರಾ 215 ಅಂಕ ಗಳಿಸಿದ್ದಾರೆ.
ನಲವತ್ತು ನಿಮಿಷದ ಸಂದರ್ಶನದಲ್ಲಿ ಮಿಶ್ರಾ ಪಾಲ್ಗೊಂಡಿದ್ದರು. ಸಂದರ್ಶನಕ್ಕೂ ಮುನ್ನ ಸ್ವಲ್ಪ ಅಳುಕಿದ್ದರೂ ಅವರು ಕೇಳಿದ ಎಲ್ಲ ಬಗೆಯ ಪ್ರಶ್ನೆಗಳಿಗೂ ಉತ್ತರ ನೀಡಿದೆ ಎಂದು ಡಾಕ್ಟರ್ ಹೇಳುತ್ತಾರೆ.
ಸಂದರ್ಶನ ರವಂಡ್ ಬಹಳ ಮುಖ್ಯವಾಗುತ್ತದೆ. ನಿಮ್ಮ ಕೌಶಲ್ಯ ಮತ್ತು ಸಾಮರ್ಥ್ಯವನ್ನು ಅಳೆಯುತ್ತದೆ ಎನ್ನುತ್ತಾರೆ. ಅಂಕಿಅಂಗಳನ್ನು ಸರಿಯಾಗಿ ವಿವರಣೆ ನೀಡಿ.. ಪ್ಯಾನಿಕ್ ಆಗದೆ ನಂಬಿಕೆ ಮತ್ತು ಆತ್ಮವಿಶ್ವಾಸಿಂದ ವರ್ತಿಸಿ ಎಂದು ಸಲಹೆ ನೀಡುತ್ತಾರೆ.
ಯುಪಿಎಸ್‌ಸಿಯಲ್ಲಿ ಬೆಳಗಿದ ಮಲೆನಾಡ ಪ್ರತಿಭೆ
ಅಪಲಾ ಅವರ ತಂದೆ ಸೇನೆಯಲ್ಲಿ ಅಧಿಕಾರಿಯಾಗಿದ್ದವರು. ಇದೇ ಕಾರಣಕ್ಕೆ ಅವರು ಪ್ರತಿಯೊಂದು ವಿಚಾರವನ್ನು ಸ್ಪರ್ಧಾತ್ಮಕವಾಗಿಯೇ ನೋಡಿಕೊಂಡು ಬಂದಿದ್ದರು. ನಾನು ಮೊದಲ 50 ಸ್ಥಾನದೊಳಗೆ ಬರುತ್ತೇನೆ ಎಂದು ಬರೆದು ಅದನ್ನು ಗೋಡೆಗೆ ಅಂಟಿಸಿಕೊಂಡಿದ್ದರು.
ಪ್ರತಿದಿನ ಈ ಭಿತ್ತಿಪತ್ರ ನೋಡುತ್ತಲೇ ಅಧ್ಯಯನ ಮಾಡುತ್ತಿದ್ದರು. ಹೊಸ ಸ್ಫೂರ್ತಿಗೆ ಇದು ಕಾರಣವಾಗುತ್ತಿತ್ತು. ದಿನಕ್ಕೆ 8 ರಿಂದ 10 ಗಂಟೆ ಅಧ್ಯಯನ ಮಾಡುತ್ತಿದ್ದ ಮಿಶ್ರಾ ಅರ್ಧಗಂಟೆಗೂ ಅಧಿಕ ಕಾಲ ಟೆನ್ನಿಸ್ ಆಡುವುದನ್ನು ಮರೆಯುತ್ತಿರಲಿಲ್ಲ.
ತಂದೆಯಿಂದ ಪ್ರೇರಣೆ ಪಡೆದುಕೊಂಡ ನನಗೆ ದೇಶ ಸೇವೆ ಮಾಡುವುದು ಮುಖ್ಯ ಗುರಿಯಾಗಿತ್ತು. ಹಾಗಾಗಿ ನಾಗರಿಕ ಸೇವೆಯನ್ನು ಆಯ್ಕೆ ಮಾಡಿಕೊಂಡೆ ಎಂದು ಹೇಳುತ್ತಾರೆ.