ಕೊರೋನಾ ಉಲ್ಬಣ: 1 ರಿಂದ 12ನೇ ತರಗತಿಗಳಿಗೆ ರಜೆ ಘೋಷಣೆ
ಕೊರೋನಾ ವೈರಸ್ ಸೋಂಕು ಉಲ್ಬಣ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ 1 ರಿಂದ 12ನೇ ತರಗತಿಗಳನ್ನು ಬಂದ್ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಲಕ್ನೋ, (ಏ.12): ಕೋವಿಡ್ ದೇಶದಲ್ಲಿ ಮತ್ತೆ ಭೀತಿಯನ್ನು ಮೂಡಿಸಿದೆ. ಕೋವಿಡ್ ಸೋಂಕಿನ ಮೊದಲ ಅಲೆಯಲ್ಲಿ ದೇಶದ ನಾಗರಿಕ ವ್ಯವಸ್ಥೆ ತತ್ತರಿಸಿ ಹೋಗಿದೆ.
ಈಗ ದೇಶದಲ್ಲಿ ಮತ್ತೆ ಕೋವಿಡ್ ನ ರೂಪಾಂತರಿ ಸೋಂಕು ದೇಶವ್ಯಾಪಿ ಆತಂಕ ಸೃಷ್ಟಿಸಿದೆ. ಕೆಲ ನಗರಗಳಲ್ಲಿ ಲಾಕ್‌ಡೌನ್, ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ.
ಇನ್ನು, ಕೊರೋನಾ ವೈರಸ್ ಸೋಂಕು ಉಲ್ಬಣ ಹಿನ್ನೆಲೆ ಏಪ್ರಿಲ್ 30ರ ವರೆಗೂ ರಾಜ್ಯದಲ್ಲಿ 1 ರಿಂದ 12ನೇ ತರಗತಿಗಳು ಬಂದ್ ಮಾಡಿ ಉತ್ತರ ಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ.
1ರಿಂದ 8ನೇ ತರಗತಿ ಪರೀಕ್ಷೆ: ಮಹತ್ವದ ನಿರ್ಧಾರ ಕೈಗೊಂಡ ಮಹಾ ಸರ್ಕಾರ
ಉತ್ತರ ಪ್ರದೇಶದಲ್ಲಿ ಒಂದೇ ದಿನ 15,353 ಕೊರೋನಾ ಕೇಸ್ಗಳು ವರದಿಯಾದ ಸರ್ಕಾರ ಈ ಮಹತ್ವದ ನಿರ್ಧಾರವನ್ನ ಕೈಗೊಂಡಿದೆ. ಆದರೆ ವೇಳಾಪಟ್ಟಿಯ ಪ್ರಕಾರ ಪರೀಕ್ಷೆಗಳು ನಡೆಯಲಿವೆ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.
ಮಾತ್ರವಲ್ಲದೇ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ನಿತ್ಯ ಶಾಲೆ ಹಾಗೂ ಕಾಲೇಜುಗಳಲ್ಲಿ ಹಾಜರಿರಬೇಕು ಎಂದು ಸೂಚನೆ ನೀಡಲಾಗಿದೆ.
ಉತ್ತರ ಪ್ರದೇಶದಲ್ಲಿ ಒಂದೇ ದಿನ 15,353 ಕೊರೊನಾ ಕೇಸ್ಗಳು ವರದಿಯಾಗಿದ್ದು ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 6,92,092 ಆಗಿದೆ. ರಾಜ್ಯದಲ್ಲಿ ಪ್ರಸ್ತುತ 71,241 ಸಕ್ರಿಯ ಕೊರೊನಾ ಕೇಸ್ಗಳಿವೆ. ಹಾಗೂ ಇಲ್ಲಿಯವರೆಗೆ 6,11,622 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ರಾಜ್ಯದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ತರಬೇಕು ಅಂತಾ ಯೋಗಿ ಆದಿತ್ಯನಾಥ್ ಸರ್ಕಾರ ನೈಟ್ ಕರ್ಫ್ಯೂ ಜಾರಿಗೆ ತಂದಿದೆ.