ಶಾಲೆ-ಕಾಲೇಜು ಪ್ರಾರಂಭಕ್ಕೆ ಗ್ರೀನ್ ಸಿಗ್ನಲ್: ಹೊಸ ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ
ಶಾಲಾ-ಕಾಲೇಜು ಪ್ರಾರಂಭಿಸಬಹುದು ಎಂದು ಹೇಳಿರುವ ಕೇಂದ್ರ ಸರ್ಕಾರ ಅದಕ್ಕೆ ಸಂಬಂಧಪಟ್ಟ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಅದು ಈ ಕೆಳಗಿನಂತಿದೆ.
ನವದೆಹಲಿ, (ಅ.05): ಅನ್ಲಾಕ್-0.5 ಹಂತದಲ್ಲಿ ಶಾಲೆ-ಕಾಲೇಜು ಪ್ರಾರಂಭಕ್ಕೆ ಅವಕಾಶ ನೀಡಿರುವ ಕೇಂದ್ರ ಸರ್ಕಾರ, ಅದರ ನಿರ್ಧಾರವನ್ನು ಆಯಾ ರಾಜ್ಯ ಸರ್ಕಾರಗಳಿಗೆ ಬಿಟ್ಟಿದೆ.
ಅಕ್ಟೋಬರ್ 15ರ ನಂತರ ಶಾಲೆ ಪ್ರಾರಂಭಿಸಬಹುದು ಎಂದು ಹೇಳಿರುವ ಕೇಂದ್ರ ಸರ್ಕಾರ ಅದಕ್ಕೆ ಸಂಬಂಧಪಟ್ಟ ಕೆಲ ಮಾರ್ಗಸೂಚಿಯನ್ನು ಇಂದು (ಸೋಮವಾರ) ಬಿಡುಗಡೆ ಮಾಡಿದೆ.
ರಾಜ್ಯದಲ್ಲಿ ಶಾಲಾ-ಕಾಲೇಜು ಪ್ರಾರಂಭ ಯಾವಾಗ? ಮಹತ್ವದ ಮಾಹಿತಿ ನೀಡಿದ ಸಚಿವರು
ವಿದ್ಯಾರ್ಥಿಗಳು ಶಾಲೆಗೆ ಹೋಗುವ ಬಗ್ಗೆ ಸ್ವಯಂ ನಿರ್ಧಾರ ತೆಗೆದುಕೊಳ್ಳಬೇಕು. ಹಾಗೇ ಅವರ ಪಾಲಕರ ಲಿಖಿತ ಒಪ್ಪಿಗೆ ಇರಬೇಕು. ಅದರಲ್ಲೂ ಕಂಟೇನ್ಮೆಂಟ್ ಝೋನ್ಗಳಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳು, ಶಿಕ್ಷಕರಿಗೆ ಶಾಲೆಗೆ ಹಾಜರಾಗಲು ಅವಕಾಶ ಇಲ್ಲ. ವಿದ್ಯಾರ್ಥಿಗಳು ಆನ್ಲೈನ್ ಕಲಿಕೆಯನ್ನೂ ಆರಿಸಿಕೊಳ್ಳಬಹುದು. ಇದನ್ನೂ ಹಾಜರಾತಿಗೆ ಮಾನ್ಯ ಮಾಡಲಾಗುವುದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
"
* ಶಾಲಾ-ಕಾಲೇಜುಗಳಲ್ಲಿ ಕಾರ್ಯಪಡೆಗಳು ರಚನೆಯಾಗಬೇಕು. ತುರ್ತು ಹಾರೈಕೆ ತಂಡ, ಪ್ರತಿಕ್ರಿಯೆ/ಸಹಾಯ ನೀಡುವ ಫೋರ್ಸ್, ಸ್ವಚ್ಛತಾ ತಂಡಗಳನ್ನು ರಚಿಸಿ ಜವಾಬ್ದಾರಿ ನೀಡಬೇಕು.
* ಮಕ್ಕಳು ಕುಳಿತುಕೊಳ್ಳುವ ಆಸನಗಳ ವ್ಯವಸ್ಥೆಗೆ ಸೂಕ್ತ ಯೋಜನೆ ರೂಪಿಸಿಕೊಂಡು, ಸಾಮಾಜಿಕ ನಿಯಮ ಅಂತರ ಪಾಲನೆಯಾಗುವಂತೆ ನೋಡಿಕೊಳ್ಳಬೇಕು.
* ಸಾಧ್ಯವಾದರೆ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಪ್ರತ್ಯೇಕವಾಗಿಸಿ. ಅದರಲ್ಲೂ ಪ್ರತ್ಯೇಕ ಸಮಯವನ್ನು ಅಳವಡಿಸಿ ಎಂದೂ ಮಾರ್ಗಸೂಚಿಯಲ್ಲಿ ಸಲಹೆ ನೀಡಲಾಗಿದೆ.
* ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸಿ, ಮಕ್ಕಳಿಗೆ ಬಡಿಸುವಾಗ ತೀವ್ರ ಮುನ್ನೆಚ್ಚರಿಕೆ ವಹಿಸಬೇಕು.
* ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿಯ ರಾಷ್ಟ್ರೀಯ ಮಂಡಳಿಯ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್ ಪಾಲನೆ ಮಾಡಬೇಕು.
* ಶಾಲೆ ಶುರುವಾಗಿ 2-3 ವಾರದವರೆಗೂ ಯಾವುದೇ ಮೌಲ್ಯಮಾಪನ ಇರುವುದಿಲ್ಲ. ಐಸಿಟಿ (ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ) ಮತ್ತು ಆನ್ಲೈನ್ ಕಲಿಯನ್ನೇ ಪ್ರೋತ್ಸಾಹಿಸಬೇಕು ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.