Asianet Suvarna News Asianet Suvarna News

Unisex Uniforms: ಕೇರಳ ಸರ್ಕಾರಿ ಶಾಲೆಯ ಪ್ರಯತ್ನಕ್ಕೊಂದಿರಲಿ ಚಪ್ಪಾಳೆ!

ಸಾಮಾನ್ಯವಾಗಿ ಶಾಲೆಗಳಲ್ಲಿ ಒಂದೇ ತೆರನಾದ ಸಮವಸ್ತ್ರಗಳಿರುತ್ತವೆ. ಆದರೆ, ಕೇರಳದ ಸರ್ಕಾರಿ ಶಾಲೆಯೊಂದು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಲಿಂಗ ಸಾಮಾನತೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಬಾಲಕ ಮತ್ತು  ಬಾಲಕಿಯರಿಬ್ಬರಿಗೂ ಒಂದೇ ರೀತಿಯ, ಒಂದೇ ವಿನ್ಯಾಸದ ಸಮವಸ್ತ್ರ(Unisex Uniforms) ಪರಿಚಯಿಸಿದೆ. ಶಾಲೆಯ ಈ ಪ್ರಯತ್ನವು ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ.

Unisex uniforms introduced in Valayanchirangara government school of Kerala
Author
Bengaluru, First Published Nov 29, 2021, 4:35 PM IST

ಕೇರಳ (Kerala) ದ ಶಾಲೆಯೊಂದರಲ್ಲಿ ಯಾವುದೇ ಲಿಂಗ ತಾರತಮ್ಯವಿಲ್ಲದೇ ಎಲ್ಲ ಮಕ್ಕಳಿಗೂ ಒಂದೇ ವಿನ್ಯಾಸದ ಸಮವಸ್ತ್ರ (Uniform) ನಿಯಮ ಜಾರಿಗೆ ತರಲಾಗಿದೆ. ಈ ಮೂಲಕ ಶಾಲೆಯು ದೇಶದ ಇತರೆ ಎಲ್ಲ ಸ್ಕೂಲ್ ಗಳಿಗೆ ಮಾದರಿಯಾಗಿದೆ. ಕೊಚ್ಚಿ (Kochi) ಯ ವಲಯಂಚಿರಂಗರ ಸರ್ಕಾರಿ ಪ್ರಾಥಮಿಕ ಶಾಲೆ (School) ಯು ತನ್ನ ಎಲ್ಲ ವಿದ್ಯಾರ್ಥಿಗಳಿಗೆ ಸಾಮಾನ್ಯವಾದ ಲಿಂಗ-ತಟಸ್ಥ ಸಮವಸ್ತ್ರವನ್ನು ಅಳವಡಿಸಿಕೊಂಡಿದೆ. ಬಾಲಕ (Boys) – ಬಾಲಕಿ (Girls) ಯರಿಗೆ ಸಾಮಾನ್ಯ ಸಮವಸ್ತ್ರ ರೂಪಿಸಲಾಗಿದ್ದು, ಜೆಂಡರ್ ನ್ಯೂಟ್ರಲ್ ಸಮವಸ್ತ್ರದ ಮೂಲಕ ಲಿಂಗ ಸಮಾನತೆಯ ಆಶಯಕ್ಕೆ ಹೊಸ ಆಯಾಮ ನೀಡಲಾಗಿದೆ. 2018ರಲ್ಲಿ ಶಾಲೆಯಲ್ಲಿ ಜೆಂಡರ್-ನ್ಯೂಟ್ರಲ್ ನೀತಿಯನ್ನು ಜಾರಿ ಮಾಡಲಾಯಿತು. ಅದರಂತೆ ಶಾಲೆಯ ಮುಖ್ಯಶಿಕ್ಷಕಿ ಎಲ್ಲ ವಿದ್ಯಾರ್ಥಿಗಳಿಗೂ ಷರ್ಟ್ ಮತ್ತು ಮೋಟುಪ್ಯಾಂಟ್ (ಥ್ರೀಫೋರ್ತ್) ಕಡ್ಡಾಯಗೊಳಿಸಿದ್ದಾರೆ. ಸಮಾನ ಸಮವಸ್ತ್ರದ ಮೂಲಕ ವಿದ್ಯಾರ್ಥಿಗಳಲ್ಲಿ ಯಾವುದೇ ರೀತಿಯ ಅಸಮಾನತೆಯ ಭಾವನೆ ಬಾರದಂತೆ ನೋಡಿಕೊಳ್ಳುವ ಪ್ರಯತ್ನವಾಗಿದೆ. ಕೇರಳದ ಈ ಸರ್ಕಾರಿ ಶಾಲೆಯ ಒಂದೇ ವಿನ್ಯಾಸದ ಸಮವಸ್ತ್ರ ಯೋಜನೆಯು ಇತರ ಶಾಲೆಗಳಿಗೆ ಸ್ಫೂರ್ತಿಯಾಗಿದೆ ಎಂದು ಹೇಳಬಹುದು.

ಸಾಮಾನ್ಯವಾಗಿ ಶಾಲೆಗಳಲ್ಲಿ ಬಾಲಕರಿಗೆ ಮತ್ತು ಬಾಲಕಿಯರಿಗೆ ಬೇರೆ ಬೇರೆ ವಿನ್ಯಾಸದ ಒಂದೇ ತರಹದ ಯೂನಿಫಾರ್ಮ್ ಇರುತ್ತದೆ. ಆದರೆ, ಕೇರಳ ಶಾಲೆಯಲ್ಲಿ ಏನು ಮಾಡಲಾಗಿದೆ ಎಂದರೆ, ಲಿಂಗ ತಾರತಮ್ಯವನ್ನು ಸರಿದೂಗಿಸಲು ಬಾಲಕ ಮತ್ತು ಬಾಲಕಿಯರಿಬ್ಬರಿಗೂ ಒಂದೇ ವಿನ್ಯಾಸದ ಸಾಮಾನ್ಯ ಸಮವಸ್ತ್ರ (Unisex Uniforms) ಪರಿಚಯಿಸಿದೆ. ಆ ಮೂಲಕ ಬಾಲ್ಯದಲ್ಲಿ ಮಕ್ಕಳ ಮಧ್ಯೆ ಲಿಂಗ ಸಮಾನತೆಯನ್ನು ಬೆಳೆಸುವ ಪ್ರಯತ್ನವನ್ನು ಕೇರಳದ ಈ ಸರ್ಕಾರಿ ಶಾಲೆಯಲ್ಲಿ ಮಾಡಲಾಗಿದೆ. ಶಾಲೆಯ ಈ ಪ್ರಯತ್ನಕ್ಕೆ ಕೇರಳದಲ್ಲಿ ಮಾತ್ರವಲ್ಲದೇ ದೇಶಾದ್ಯಂತಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

students scholarship: ಪದವಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

ಈ ಶಾಲೆ ಜಾರಿ ಮಾಡಿರುವ ನೀತಿಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗಳು ನಡೀತಾ ಇವೆ. ಉತ್ತಮ ದೃಷ್ಟಿಕೋನ ಹೊಂದಿರುವ ಶಾಲೆ ಇದು. ಶಾಲೆಯಲ್ಲಿ ಸುಧಾರಣೆ ತರಬೇಕು ಎಂದು ಯೋಚಿಸಿದಾಗ ಲಿಂಗ ಸಮಾನತೆಯ ಬಗ್ಗೆಯೂ ಸಾಕಷ್ಟು ಚರ್ಚೆ ಮಾಡಲಾಯಿತು. ಹೀಗಾಗಿ ಸಮವಸ್ತ್ರದಲ್ಲಿ ಸುಧಾರಣೆ ತರಲು ಪ್ರಯತ್ನಿಸಿದೆವು. ಈ ಬಗ್ಗೆ ಏನು ಮಾಡಬೇಕು ಎಂದು ಯೋಚಿಸುತ್ತಿದ್ದಾಗಲೇ ಸ್ಕರ್ಟ್ಗಳ ಕಾರಣಕ್ಕೆ ವಿದ್ಯಾರ್ಥಿನಿಯರು ತೊಂದರೆ ಅನುಭವಿಸುವುದು ನನ್ನ ಗಮನಕ್ಕೆ ಬಂತು. ಸಮವಸ್ತ್ರ ಬದಲಿಸುವ ಬಗ್ಗೆ ಎಲ್ಲರೊಡನೆ ಮಾತನಾಡಿದೆ. ಶೇ 90ರಷ್ಟು ಪೋಷಕರು ಈ ಚಿಂತನೆ ಒಪ್ಪಿಕೊಂಡರು. ಮಕ್ಕಳು ಸಹ ಖುಷಿಯಾದರು. ಈ ವಿಷಯ ಈಗ ದೇಶದ ಮಟ್ಟದಲ್ಲಿ ಚರ್ಚೆಯಾಗುತ್ತಿರುವುದು ನನಗೆ ಸಂತೋಷ ಎನಿಸುತ್ತಿದೆ  ಅಂತಾರೆ 2018ರಲ್ಲಿ ಶಾಲೆಯಲ್ಲಿ ಹೊಸ ಸಮವಸ್ತ್ರ ಅನುಷ್ಠಾನಕ್ಕೆ ತಂದ ಹಿಂದಿನ ಮುಖ್ಯಶಿಕ್ಷಕಿ ಸಿ.ರಾಜಿ (C Raji).

ಇದು 105 ವರ್ಷಗಳಷ್ಟು ಹಳೆಯದಾದ ಶಾಲೆ (School). ಆದ್ದರಿಂದ, ಯಾರಿಂದಲೂ ಇದಕ್ಕೆ ವಿರೋಧ ವ್ಯಕ್ತವಾಗಲಿಲ್ಲ. ಶೈಕ್ಷಣಿಕ ಸಮಿತಿಯ ನಿರ್ಧಾರವನ್ನು ಎಲ್ಲರೂ ಒಪ್ಪಿಕೊಂಡರು. ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಮನ್ನಣೆ ಸಿಕ್ಕಿತ್ತು ಎಂದು ಶಾಲಾ ಆಡಳಿತ ಸಮಿತಿ ಮಾಜಿ ಅಧ್ಯಕ್ಷ ಎನ್.ಪಿ.ಅಜಯಕುಮಾರ್ (N P Ajaykumar) ಹೇಳಿದರು.

Good news for SSLC Students: ಶೇ. 20 ರಷ್ಟು ಪಠ್ಯ ಕಡಿತಕ್ಕೆ ಮುಂದಾದ ಶಿಕ್ಷಣ ಇಲಾಖೆ

754 ವಿದ್ಯಾರ್ಥಿಗಳ ಸಾಮರ್ಥ್ಯ ಹೊಂದಿರುವ ಎರ್ನಾಕುಲಂ (Ernakulum)  ಜಿಲ್ಲೆಯ ಪೆರುಂಬವೂರ್ (Perumbavoor)  ಬಳಿಯ ವಲಯಂಚಿರಂಗರ (Valayanchirangara) ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ತಮ್ಮ ವಿದ್ಯಾರ್ಥಿಗಳಿಗೆ ಹೊಸ ಲಿಂಗ ತಟಸ್ಥ ಸಮವಸ್ತ್ರವನ್ನು ಪರಿಚಯಿಸಿದೆ. ಈ ಬಗ್ಗೆ ಈಗ ದೇಶಾದ್ಯಂತ ಚರ್ಚೆಯಾಗುತ್ತಿರುವುದಕ್ಕೆ ಹೆಮ್ಮೆ ಅನಿಸುತ್ತಿದೆ ಅನ್ನೋದು ಆ ಶಾಲೆಯ ಶಿಕ್ಷಕರ ಮಾತು.

Follow Us:
Download App:
  • android
  • ios