NEET PG Exam 2022 Postponed: ಮಾರ್ಚ್ 12ಕ್ಕೆ ನಿಗದಿಯಾಗಿದ್ದ ನೀಟ್–ಪಿಜಿ ಪರೀಕ್ಷೆ ಮುಂದೂಡಿದ ಆರೋಗ್ಯ ಸಚಿವಾಲಯ
ಮಾರ್ಚ್ 12ಕ್ಕೆ ನಿಗದಿಯಾಗಿದ್ದ ನೀಟ್ ಪಿಜಿ ಪರೀಕ್ಷೆಯನ್ನು 6 ರಿಂದ 8 ವಾರಗಳ ಕಾಲ ಮುಂದೂಡಲಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ಈ ಆದೇಶ ಹೊರಡಿಸಿದೆ.
ಬೆಂಗಳೂರು(ಫೆ.4): ಕೇಂದ್ರ ಆರೋಗ್ಯ ಸಚಿವಾಲಯ (Union Health Ministry) ನೀಟ್ ಪಿಜಿ (NEET PG) ಪರೀಕ್ಷೆಯನ್ನು ಮುಂದೂಡಿದೆ. ಮಾರ್ಚ್ 12ಕ್ಕೆ ನಿಗದಿಯಾಗಿದ್ದ ನೀಟ್ ಪಿಜಿ ಪರೀಕ್ಷೆಯನ್ನು 6 ರಿಂದ 8 ವಾರಗಳ ಕಾಲ ಮುಂದೂಡಿದೆ. 2022ರ ನೀಟ್ ಪರೀಕ್ಷೆಯ ( National Eligibility Entrance Test) ದಿನಾಂಕವನ್ನು ಮುಂದೂಡುವಂತೆ ಕೋರಿ ಎಂಬಿಬಿಎಸ್ ವಿದ್ಯಾರ್ಥಿಗಳು ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದು, ಇದರ ಬೆನ್ನಲ್ಲೇ ಸರ್ಕಾರ ಪರೀಕ್ಷೆಯನ್ನು ಮುಂದೂಡಿದೆ. ಫೆ. 4ರಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಸೂರ್ಯಕಾಂತ್ ಅವರ ಪೀಠ ಅರ್ಜಿಯ ವಿಚಾರಣೆ ನಡೆಸಲಿದೆ.
ವಾಸ್ತವದಲ್ಲಿ, ಈ ಪರೀಕ್ಷೆಯನ್ನು ಮುಂದೂಡಬೇಕೆಂದು ವಿದ್ಯಾರ್ಥಿಗಳು ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದರು. ಕಳೆದ ವರ್ಷ ಅಂದರೆ 2021ರ NEET ಪಿಜಿ ಕೌನ್ಸೆಲಿಂಗ್‌ನ ದಿನಾಂಕಗಳು ಮತ್ತು ಈ ವರ್ಷದ ಪರೀಕ್ಷೆಯ ದಿನಾಂಕಗಳು ಪರಸ್ಪರ ಘರ್ಷಣೆಯಾಗುತ್ತಿವೆ ಹೀಗಾಗಿ ಪರೀಕ್ಷೆಗಳನ್ನು ಮುಂದೂಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದರು.
ವಿದ್ಯಾರ್ಥಿಗಳ ಬೇಡಿಕೆಗಳನ್ನು ನ್ಯಾಯಯುತವೆಂದು ಪರಿಗಣಿಸಿ ಆರೋಗ್ಯ ಸಚಿವಾಲಯ ಇದೀಗ ಪರೀಕ್ಷೆಯನ್ನು 6-8 ವಾರಗಳ ಕಾಲ ಮುಂದೂಡಿದೆ. ಆದರೆ, ಪರೀಕ್ಷೆಯ ಮುಂದಿನ ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲ. ಈ ಬಗ್ಗೆ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವಾಲಯ ತಿಳಿಸಿದೆ.
Gangavati: ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾದ್ರೂ ವೈದ್ಯಕೀಯ ಕಾಲೇಜು ಪ್ರವೇಶಕ್ಕೆ ಆರ್ಥಿಕ ಬಿಕ್ಕಟ್ಟು
ಕೋವಿಡ್ ಸೂಕ್ತ ನಡವಳಿಕೆ ಕಾಪಾಡುವುದು ಸೇರಿದಂತೆ ಎಲ್ಲಾ ಶಿಷ್ಟಾಚಾರಗಳನ್ನು ಅನುಸರಿಸಿ ಮತ್ತು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ಪರೀಕ್ಷೆ ಆಯೋಜಿಸಲಾಗುವುದು. ಜತೆಗೆ, ಅಭ್ಯರ್ಥಿಗಳು ಮತ್ತು ಪರೀಕ್ಷಾ ಸಿಬ್ಬಂದಿಗೆ ಹೆಚ್ಚುವರಿ ಸಂರಕ್ಷಣಾ ಕ್ರಮಗಳನ್ನು ಕೈಗೊಂಡು ಸುರಕ್ಷಿತವಾಗಿ ಪರೀಕ್ಷೆಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ಈ ಹಿಂದೆ ಕೇಂದ್ರ ಸರಕಾರ ಹೇಳಿತ್ತು.
ಪ್ರತಿ ವರ್ಷ 15 ಲಕ್ಷಕ್ಕೂ ಹೆಚ್ಚು ವೈದ್ಯಕೀಯ ಆಕಾಂಕ್ಷಿಗಳು ನೀಟ್ ಪರೀಕ್ಷೆ ಬರೆಯುತ್ತಾರೆ. ನೀಟ್ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ, ಶಿಕ್ಷಣ ಸಚಿವಾಲಯವು ಈ ಮೊದಲು ವೈದ್ಯಕೀಯ ಪ್ರವೇಶ ಪರೀಕ್ಷೆ, ನೀಟ್, 2022 ಬೋರ್ಡ್ ಪರೀಕ್ಷೆಯ ಪಠ್ಯಕ್ರಮದಲ್ಲಿ ಕಡಿತವನ್ನು ಲೆಕ್ಕಿಸದೆ ಎನ್‌ಟಿಎ ನಿರ್ಧರಿಸಿದ ಪಠ್ಯಕ್ರಮದ ಪ್ರಕಾರ ನಡೆಯಲಿದೆ ಎಂದು ಸ್ಪಷ್ಟಪಡಿಸಿತ್ತು. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ವೆಬ್‌ಸೈಟ್ - neet.nta.nic.in ರಲ್ಲಿ ಪರಿಶೀಲಿಸಬಹುದಾಗಿದೆ.
ದುಬಾರಿ ಶುಲ್ಕದ ಭಯಕ್ಕೆ ಮೊದಲ ನೀಟ್ ಸೀಟು ಕೈಬಿಟ್ಟ ವಿದ್ಯಾರ್ಥಿನಿ, ಎರಡನೇ ಬಾರಿ ಪರೀಕ್ಷೆಯಲ್ಲಿ ಯಶಸ್ವಿ!
ನೀಟ್ ಪರೀಕ್ಷೆಯಲ್ಲಿ ಮುಧೋಳದ ಕೂಲಿಕಾರನ ಮಗ ದೇಶಕ್ಕೇ ಪ್ರಥಮ..!: ವೈದ್ಯಕೀಯ ವಿಭಾಗದ ಸೂಪರ್ ಸ್ಪೆಷಾಲಿಟಿ ‘ನೀಟ್’ ಪರೀಕ್ಷೆಯಲ್ಲಿ(Super Specialty NEET Exam) ಬಾಗಲಕೋಟೆ(Bagalkot) ಜಿಲ್ಲೆ ಮುಧೋಳ ತಾಲೂಕು ರನ್ನಬೆಳಗಲಿಯ ಕೂಲಿಕಾರನ ಮಗ ಡಾ.ಚಿದಾನಂದ ಕಲ್ಲಪ್ಪ ಕುಂಬಾರ(Dr Chidanand Kallappa Kumbar) ಎರಡು ವಿಷಯಗಳಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ರನ್ನಬೆಳಗಲಿಯ ಬಡ ಕುಟುಂಬದ ಕಲ್ಲಪ್ಪ- ಕಸ್ತೂರಿ ದಂಪತಿಯ ಪುತ್ರ ಡಾ.ಚಿದಾನಂದ ಕುಂಬಾರ ಅವರು 2021ನೇ ಸಾಲಿನ ಸೂಪರ್ ಸ್ಪೆಷಾಲಿಟಿ ನೀಟ್ ಪರೀಕ್ಷೆಯಲ್ಲಿ ಎಂಡಿ ಗ್ಯಾಸ್ಟ್ರೋ ಎಂಟರಾಲಜಿ (Digestive system)ಯಲ್ಲಿ 400ಕ್ಕೆ 340 ಅಂಕ ಮತ್ತು ಎಂಡಿ ಹೆಪಟಾಲಜಿ (Liver Specialist)ಯಲ್ಲಿ 400ಕ್ಕೆ 330 ಅಂಕಗಳಿಸಿ ಈ ಎರಡು ವಿಭಾಗದಲ್ಲಿ ದೇಶಕ್ಕೆ(India) ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.
Bagalkot: ನೀಟ್ ಪರೀಕ್ಷೆಯಲ್ಲಿ ಮುಧೋಳದ ಕೂಲಿಕಾರನ ಮಗ ದೇಶಕ್ಕೇ ಪ್ರಥಮ..!