ಚೆನ್ನೈ, (ಜ.10): ಸರ್ಕಾರ ವಿದ್ಯಾರ್ಥಿಗಳಿಗೆ ಆನ್​ಲೈನ್ ಕ್ಲಾಸ್​ಗೆ ಹಾಜರಾಗಲು ಸಹಾಯವಾಗಲಿ ಎಂದು ದಿನವೊಂದಕ್ಕೆ 2 ಜಿ.ಬಿ. ಡೇಟಾವನ್ನ ಉಚಿತವಾಗಿ ನೀಡುತ್ತಿದೆ.

ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಶಾಲಾ- ಕಾಲೇಜುಗಳನ್ನು ಮುಚ್ಚಲಾಗಿದ್ದು ವಿದ್ಯಾರ್ಥಿಗಳು ಆನ್​ಲೈನ್​ ಮೂಲಕವೇ ತರಗತಿಗಳಿಗೆ ಹಾಜರಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. 

ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್: ಶೈಕ್ಷಣಿಕ ದಾಖಲೆಗಳ ಭದ್ರತೆಗೆ ಡಿಜಿ ಲಾಕರ್ ವ್ಯವಸ್ಥೆ

ಇನ್ನು ಕೆಲವು ವಿದ್ಯಾರ್ಥಿಗಳು ಮೊಬೈಲ್, ಲ್ಯಾಪ್​ಟಾಪ್​ ಇಲ್ಲದೇ ಆನ್​ಲೈನ್ ತರಗತಿಗೂ ಹಾಜರಾಗದಂತಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ವಿದ್ಯಾರ್ಥಿಗಳಿಗೆ ದಿನವೊಂದಕ್ಕೆ 2 ಜಿ.ಬಿ. ಯಂತೆ ಉಚಿತ ಡೇಟಾ ನೀಡಲು ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ. 

ತಮಿಳುನಾಡು ರಾಜ್ಯದ ಸರ್ಕಾರಿ ಮತ್ತು ಸರ್ಕಾರದ ನೆರವು ಪಡೆದ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜುಗಳು, ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಕಾಲೇಜುಗಳು ಮತ್ತು ಸ್ಕಾಲರ್​ಶಿಪ್-ಫಂಡೆಡ್ ಖಾಸಗಿ ಕಾಲೇಜುಗಳ ಒಟ್ಟು 9,69,047 ವಿದ್ಯಾರ್ಥಿಗಳು ಇದರ ನೆರವು ಪಡೆಯಲಿದ್ದಾರೆ. ಇದೇ ತಿಂಗಳಿನಿಂದ ಏಪ್ರಿಲ್ ತಿಂಗಳವರೆಗೂ  ವಿದ್ಯಾರ್ಥಿಗಳಿಗೆ ಈ ಉಚಿತ ಡೇಟಾ ಲಭ್ಯವಾಗಲಿದೆ.