Shivamogga: ವಿಶ್ವಾಸಿ ಬ್ರಾಹ್ಮಣರ ಬುದ್ಧಿಶಕ್ತಿ ಜಗತ್ತು ಮೆಚ್ಚಿ​ದೆ: ಸೋದೆ ಶ್ರೀ

ಎಂದೂ ವಿಶ್ವಾಸ ದ್ರೋಹ ಮಾಡದ ಬ್ರಾಹ್ಮಣರು ತಮ್ಮ ಪಾಂಡಿತ್ಯ, ಬುದ್ಧಿಶಕ್ತಿಯಿಂದ ಕೆಲಸ ಮಾಡುತ್ತಾರೆ ಎಂಬುದನ್ನು ಜಗತ್ತು ಒಪ್ಪಿಕೊಂಡಿದೆ ಎಂದು ಉಡುಪಿಯ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಮಹಾಸ್ವಾಮಿಗಳು ನುಡಿದರು.

The world admired the wisdom of the Brahmins: Sode Shri at shimogga rav

ಶಿವಮೊಗ್ಗ (ಜ.20) : ಎಂದೂ ವಿಶ್ವಾಸ ದ್ರೋಹ ಮಾಡದ ಬ್ರಾಹ್ಮಣರು ತಮ್ಮ ಪಾಂಡಿತ್ಯ, ಬುದ್ಧಿಶಕ್ತಿಯಿಂದ ಕೆಲಸ ಮಾಡುತ್ತಾರೆ ಎಂಬುದನ್ನು ಜಗತ್ತು ಒಪ್ಪಿಕೊಂಡಿದೆ ಎಂದು ಉಡುಪಿಯ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಮಹಾಸ್ವಾಮಿಗಳು ನುಡಿದರು.

ನಗ​ರದ ಬಿ.ಎಚ್‌. ರಸ್ತೆಯ ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ಜಿಲ್ಲಾ ಬ್ರಾಹ್ಮಣ ಮಹಾಸಭಾದಿಂದ ಹಮ್ಮಿಕೊಳ್ಳಲಾಗಿದ್ದ ಅಥರ್ವಣ ಯಾಗದ 4ನೇ ದಿನವಾದ ಗುರುವಾರ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರಿಗೆ ಗೌರವ ಸಮರ್ಪಣೆ ಮಾಡಿ, ಆಶೀರ್ವಚನ ನೀಡಿದರು.

ಬ್ರಾಹ್ಮಣರ ಟೀಕಿಸೋದು ಕೆಲವರಿಗೆ ಚಟವಾಗಿದೆ: ಬ್ರಾಹ್ಮಣ ಸಂಘಟನೆ ಆಕ್ರೋಶ

ಶಿವಮೊಗ್ಗ ಬ್ರಾಹ್ಮಣ ಸಭಾ ಪ್ರಾರಂಭವಾಗಿ ಯಶಸ್ವಿ 104 ವರ್ಷ ಆಗಿದೆ. ವ್ಯಕ್ತಿಗೆ ವಯಸ್ಸಾದಂತೆ ಆಯುಷ್ಯ ಕಡಿಮೆ ಆಗುತ್ತದೆ. ಆದರೆ ಸಂಘ ಸಂಸ್ಥೆಗಳಿಗೆ ವಯಸ್ಸಾದಂತೆ ಅದರ ವರ್ಚಸ್ಸು ವೃದ್ಧಿಸಿ, ಹೆಮ್ಮರವಾಗಿ ಬೆಳೆಯುತ್ತ ತನ್ನ ಘನತೆ ಹೆಚ್ಚಿಸಿಕೊಳ್ಳುತ್ತದೆ. ಇದರ ಹಿಂದೆ ಸಂಘಟಕರ ಪಾತ್ರ ಮಹತ್ವದ್ದಾಗಿರುತ್ತದೆ ಎಂದು ತಿಳಿ​ಸಿ​ದರು.

ಸಣ್ಣ ಸಮಾಜವಾದ ಬ್ರಾಹ್ಮಣ ಸಮಾಜಕ್ಕೆ ಸರ್ಕಾರದ ಯಾವುದೇ ಯೋಜನೆಯ ಲಾಭ ಸಿಗುತ್ತಿಲ್ಲ. ಆದರೂ ಬ್ರಾಹ್ಮಣರು ಸ್ವಯಂ ಪ್ರತಿಭೆಯಿಂದ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.

ಸಾಧಕರಾದ ಭದ್ರಾವತಿಯ ನರಸೀಸುಬ್ಬಾಭಟ್ಟರು, ಸೊರಬದ ಗುರುರಾವ್‌, ಸಾಗರದ ಬಂಗಾರಿಭಟ್ಟರು, ಶಿಕಾರಿಪುರದ ವೇ.ಬ್ರ.ಶ್ರೀ ನರಸಿಂಹಭಟ್ಟರು, ಹೊಸಹಳ್ಳಿಯ ಅನ್ನಪೂರ್ಣ ಗೋಪಾಲ್‌, ಹೊಸನಗರದ ಕೃಷ್ಣಮೂರ್ತಿ ಭಟ್‌, ಶಿವಮೊಗ್ಗದ ಟಿ.ವಿ.ನರಸಿಂಹಮೂರ್ತಿ, ಎಸ್‌ಎಲ್‌ಎನ್‌ ಸಂಸ್ಥೆಯ ಎನ್‌.ಎಚ್‌. ಪ್ರಭಾಕರ್‌, ದುರ್ಗಾಂಬ ಜೋಯಿಸ್‌, ವೇದಬ್ರಹ್ಮ ಶ್ರೀ ಶಿವಕುಮಾರ್‌ ಅವಧಾನಿ, ವೆಂಕಟೇಶ ಪಟವರ್ಧನ್‌ ಅವರನ್ನು ಗುರುಗಳು ಸನ್ಮಾನಿಸಿದರು.

ಸರ್ಕಾರದ ಪರಿಷ್ಕೃತ ಮೀಸಲಾತಿ ನೀತಿ: ಸರ್ಕಾರದ ವಿರುದ್ಧ ಬ್ರಾಹ್ಮಣರ ಆಕ್ರೋಶ

ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಪ್ರಾಯೋಜಿತ ಸುರಭಿ ಗೋ ಶಾಲೆ ಸ್ವಾವಲಂಬಿ ಆಗಬೇಕು ಎನ್ನುವ ದೃಷ್ಟಿಯಿಂದ 11 ಗೋ ಉತ್ಪನ್ನಗಳನ್ನು ಪ್ರಾರಂಭಿಸಿದ್ದು, ಇಂದು ಪಿನಾಯಿಲ್‌, ಬೆರಣಿ, ಭಸ್ಮ ಮತ್ತು ಧೂಪವನ್ನು ಶ್ರೀ ವಿಶ್ವವಲ್ಲಭ ತೀರ್ಥರು ಅನಾವರಣಗೊಳಿಸಿದರು. ಮುಂದಿನ ಹಂತದಲ್ಲಿ ಧೂಪ, ದ್ವೀಪ, ಘನ ಮತ್ತು ಜಲ ಜೀವಾಮೃತ, ಸೊಳ್ಳೆಬತ್ತಿ, ಸೊಳ್ಳೆ ಲಿಕ್ವಿಡ್‌, ಸೋಪು, ಶಾಂಪು ಮುಂತಾದ ಉತ್ಪನ್ನಗಳನ್ನು ಕೂಡ ಈ ಗೋ ಶಾಲೆಯಿಂದ ತಯಾರಿಸಲಾಗುವುದು ಎಂದು ಚಂದ್ರಶೇಖರ್‌ ಅವರು ಮಾಹಿತಿ ನೀಡಿದರು. ಮಹಾಸಭಾ ಅಧ್ಯಕ್ಷರಾದ ನಟರಾಜ್‌ ಭಾಗವತ್‌, ಕಾರ್ಯದರ್ಶಿ ಸೂರ್ಯನಾರಾಯಣ್‌, ಬಿ.ಕೆ.ವೆಂಕಟೇಶ್‌ ಮೂರ್ತಿ, ಕೇಶವ ಮೂರ್ತಿ, ಡಾ.ನಾಗಮಣಿ ಮತ್ತಿತರರಿದ್ದರು.

Latest Videos
Follow Us:
Download App:
  • android
  • ios