ಪ್ರತಿಭಟನೆಗೆ ಬಂದು ರೈಲಿಗೆ ತಲೆಕೊಟ್ಟ ಅನುದಾನಿತ ಶಾಲಾ ಶಿಕ್ಷಕ!

 ಅನುದಾನಿತ ಶಾಲಾ ಶಿಕ್ಷಕರಿಂದ ಪಿಂಚಣಿಗಾಗಿ ನಡೆಯುತ್ತಿರುವ ಅನಿರ್ಧಿಷ್ಟವಧಿ ಪ್ರತಿಭಟನೆಯಲ್ಲಿ ಭಾಗಿಯಾಗಲು ರಾಯಚೂರುನಿಂದ ಬಂದಿದ್ದ ಶಿಕ್ಷಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

The Teacher committed suicide after protest at bengaluru crime rav

ಬೆಂಗಳೂರು (ಫೆ.23) :  ಅನುದಾನಿತ ಶಾಲಾ ಶಿಕ್ಷಕರಿಂದ ಪಿಂಚಣಿಗಾಗಿ ನಡೆಯುತ್ತಿರುವ ಅನಿರ್ಧಿಷ್ಟವಧಿ ಪ್ರತಿಭಟನೆಯಲ್ಲಿ ಭಾಗಿಯಾಗಲು ರಾಯಚೂರುನಿಂದ ಬಂದಿದ್ದ ಶಿಕ್ಷಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

ಶಂಕರಪ್ಪ ಬೋರಡ್ಡಿ(Shankarappa Bhoraddy) (೪೭) ಮೃತ ದುರ್ದೈವಿ. ರಾಯಚೂರು ಜಿಲ್ಲೆಯ ಸಿಂಧನೂರು(Sindhanur) ಪಟ್ಟಣದ ಅನುದಾನಿತ ಶಾಲೆಯಲ್ಲಿ ಗಣಿತ ಶಿಕ್ಷಕರಾಗಿದ್ದ ಶಂಕರಪ್ಪ. ಮಂಗಳವಾರ ಫ್ರೀಡಂ ಪಾರ್ಕ್‌ನಲ್ಲಿ ನಡೆದ  ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಶಿಕ್ಷಕರ ಅನಿರ್ದಿಷ್ಟವಧಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ. ಪ್ರತಿಭಟನೆ ಮುಗಿದ ಬಳಿಕ ಶಿಕ್ಷಕರ ಸದನದಲ್ಲಿ ತಂಗಿದ್ದ ಶಂಕರಪ್ಪ. 

ಶಾಲೆಯಲ್ಲಿ ಸಹ ಶಿಕ್ಷಕರ ಕಿರುಕುಳ ಆರೋಪ, ತಹಶಿಲ್ದಾರ ಕಚೇರಿ ಆವರಣದಲ್ಲಿ ನೇಣಿಗೆ ಶರಣಾದ ಶಿಕ್ಷಕ!

ಶಿಕ್ಷಕರ ಸದನದಲ್ಲಿ ಬ್ಯಾಗ್ ಇಟ್ಟು ಮೆಜೆಸ್ಟಿಕ್ ರೈಲ್ವೆ ನಿಲ್ದಾಣ ಬಳಿ ಬಂದು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬುಧವಾರ ಮಧ್ಯರಾತ್ರಿಯಲ್ಲಿ ಈ ಘಟನೆ ನಡೆದಿದ್ದು, ಸಾವಿಗೆ ಕಾರಣವೇನೆಂಬುದು ತಿಳಿದಿಲ್ಲ. ನಿನ್ನೆ ತಡರಾತ್ರಿ ಶಂಕರಪ್ಪ ಅವರ ನಿವಾಸಕ್ಕೆ ಮೃತದೇಹ ಕಳಿಸಲಾಗಿದೆ.

ಮೃತದೇಹ ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿಗೆ:

ಸಿಂಧನೂರಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಶಂಕರಪ್ಪ ಮೂಲತಃ ಬಾಗಲಕೋಟೆಯ ಸುನಗ ಗ್ರಾಮದವರು. ಹೀಗಾಗಿ ಮೃತದೇಹ ಬಾಗಲಕೋಟೆ ನವನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ತಂದ ಕುಟುಂಬಸ್ಥರು.

ಮೃತದೇಹ ಹೊತ್ತ ಆಂಬ್ಯುಲೆನ್ಸ್ ಗೇಟ್ ನಲ್ಲಿಯೇ ತಡೆ ಹಿಡಿದ ಪೊಲೀಸರು. ಈ ವೇಳೆ ಪೊಲೀಸರೊಂದಿಗೆ ಕುಟುಂಬಸ್ಥರ ವಾಗ್ವಾದ ನಡೆಸಿದ್ದಾರೆ. ಬಳಿಕ ಒಳಬಿಟ್ಟಿರೋ ಪೊಲೀಸರು.

ಮೃತದೇಹ ಬಾಗಲಕೋಟೆಗೆ ತಲುಪಿದ ಸುದ್ದಿ ತಿಳಿದ ಮಾಜಿ ಸಚಿವ ಎಸ್‌ಆರ್ ಪಾಟೀಲ್ ಕುಟುಂಬಂಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಈ ವೇಳೆ ಕುಟುಂಬಸ್ಥರೊಂದಿಗೆ ಇದ್ದು ಧೈರ್ಯ ತುಂಬಿದರು.

Latest Videos
Follow Us:
Download App:
  • android
  • ios