Asianet Suvarna News Asianet Suvarna News

ಇಂಗ್ಲೀಷ್ ನಲ್ಲಿ 35, ಗಣಿತದಲ್ಲಿ 36..! ಹತ್ತನೇ ಕ್ಲಾಸ್ ನಲ್ಲಿ ಜಸ್ಟ್ ಪಾಸ್ ಆಗಿದ್ರು ಈ ಐಎಎಸ್ ಅಧಿಕಾರಿ!

ಪರೀಕ್ಷೆಯಲ್ಲಿ ಬಂದ ಕೆಟ್ಟ ರಿಸ್ಟಲ್ಟ್ ನಿಂದ ನಿರಾಸೆಯಾಗುವ ಅಗತ್ಯವಿಲ್ಲ.  ಏಕೆಂದರೆ ಯಾವುದೇ ಪರೀಕ್ಷೆಯಲ್ಲಿನ ಕೆಟ್ಟ ಫಲಿತಾಂಶಗಳು ವೃತ್ತಿಜೀವನದ ಎಲ್ಲಾ ಬಾಗಿಲುಗಳನ್ನು ಮುಚ್ಚುವುದಿಲ್ಲ. ಇದಕ್ಕೆ ಜೀವಂತ ಉದಾಹರಣೆಯೆಂದರೆ ಗುಜರಾತಿನ ಭರೂಚ್ ಜಿಲ್ಲೆಯ ಕಲೆಕ್ಟರ್ ತುಷಾರ್ ಸುಮೇರಾ.

The story of IAS who scored 35 marks in English, 36 in maths in class 10th Shares his Marks card in Twitter san
Author
Bengaluru, First Published Jun 13, 2022, 8:25 PM IST

ನವದೆಹಲಿ (ಜೂನ್ 13): ದೇಶಾದ್ಯಂತ ಈಗ ಪರೀಕ್ಷೆಗಳ (Exam) ರಿಸಲ್ಟ್ (Result) ಟೈಮ್. ಕೆಟ್ಟ ಫಲಿತಾಂಶ ಅಥವಾ ಪರೀಕ್ಷೆಯಲ್ಲಿ ಫೇಲ್ ಆದ ರಿಸಲ್ಟ್ ಬಂದಾಗ ವಿದ್ಯಾರ್ಥಿಗಳು ಕುಗ್ಗುವುದು ಸಾಮಾನ್ಯ. ಕೆಲವೊಮ್ಮೆ ಆತ್ಮಹತ್ಯೆಯಂಥ ದುಡುಕಿನ ನಿರ್ಧಾರವನ್ನೂ ತೆಗೆದುಕೊಳ್ಳುತ್ತಾರೆ. ಇಂಥ ವ್ಯಕ್ತಿಗಳಿಗೆ ಸ್ಪೂರ್ತಿ ಎನಿಸುವ ರೀತಿಯಲ್ಲಿ ಗುಜರಾತ್ ನ ಭರೂಚ್ ಜಿಲ್ಲೆಯ ಜಿಲ್ಲಾಧಿಕಾರಿ (Collector and District Magistrate of Bharuch district) ತುಷಾರ್ ಡಿ ಸುಮೆರಾ (Tushar D. Sumera).  ಇವರ 10ನೇ ತರಗತಿಯ ಅಂಕಪಟ್ಟಿಯನ್ನು (10th Marks Card) ಇನ್ನೊಬ್ಬ ಐಎಎಸ್ ಅಧಿಕಾರಿ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇವರ ಅಂಕಪಟ್ಟಿಯನ್ನು ನೋಡಿದಾಗ ಅಚ್ಚರಿಯಾಗುವುದು ಖಚಿತ. ಏಕೆಂದರೆ, 10ನೇ ತರಗತಿಯಲ್ಲಿ ತುಷಾರ್ ಸುಮೆರಾ, ಇಂಗ್ಲೀಷ್ ನಲ್ಲಿ(English) ಕೇವಲ 35 ಹಾಗೂ ಗಣಿತದಲ್ಲಿ (Maths) ಕೇವಲ 36 ಅಂಕ ಸಂಪಾದನೆ ಮಾಡಿದ್ದರು. ಆದರೆ, ಕಠಿಣ ಪರಿಶ್ರಮ ಹಾಗೂ ಬದ್ಧತೆಯ ಕಾರಣದಿಂದಾಗಿ ತುಷಾರ್, ಜಿಲ್ಲಾಧಿಕಾರಿಯಾಗಲು ಸಾಧ್ಯವಾಯಿತು. ಇವರ ಕಥೆಯನ್ನು ಮತ್ತೊಬ್ಬ ಐಎಎಸ್ ಅಧಿಕಾರಿ ಅವ್ನೀಶ್ ಶರಣ್  ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಛತ್ತೀಸ್‌ಗಢ್ ಕೇಡರ್ ಐಎಎಸ್ ಅಧಿಕಾರಿ ಅವ್ನೀಶ್ ಶರಣ್  (Avnish Sharan ) ಈ ಟ್ವೀಟ್ ಮಾಡಿದ್ದಾರೆ. 10ನೇ ತರಗತಿಯಲ್ಲಿ ಭರೂಚ್ ಡಿಸಿ, ಗಣಿತ ಮತ್ತು ಇಂಗ್ಲೀಷ್ ಮಾತ್ರವಲ್ಲ ವಿಜ್ಞಾನ ವಿಷಯದಲ್ಲೂ 100 ಅಂಕಗಳಿಗೆ ಕೇವಲ 38 ಅಂಕ ಸಂಪಾದನೆ ಮಾಡಿದ್ದರು.


ತುಷಾರ್ ಸುಮೇರಾ ಅವರ ಫಲಿತಾಂಶ ನೋಡಿದ ಅವರ ಗ್ರಾಮಸ್ಥರು ಹಾಗೂ ಅವರ ಶಾಲೆಯ ಟೀಚರ್ ಗಳು ಆತನಿಗೆ ವಿದ್ಯೆ ತಲೆಗೆ ಹೋಗುವುದಿಲ್ಲ. ಜೀವನದಲ್ಲಿ ಆತನಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ತೀರ್ಮಾನಿಸಿಬಿಟ್ಟಿದ್ದರು ಎಂದು ಅವಿನಾಶ್ ಬರೆದಿದ್ದಾರೆ. ಆದರೆ, ತಮ್ಮ ಸಮರ್ಪಣಾ ಮನೋಭಾವ, ಕಲಿಕೆಯಲ್ಲಿನ ಆಸಕ್ತಿಯಿಂದಾಗಿ ಈ ಅವಮಾನಗಳನ್ನೆಲ್ಲ ಎದುರಿಸಿಯೂ ಅವರು ಇಡೀ ಗ್ರಾಮದವರು ನಿರೀಕ್ಷೆಯೇ ಮಾಡದಂಥ ಸ್ಥಾನವನ್ನು ಸಂಪಾದನೆ ಮಾಡಿದರು. ಆ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದರು. ಇವರು ಐಎಎಸ್ ಆಗುವವರಿಗೆ, ಜೀವನದಲ್ಲಿ ಪರೀಕ್ಷೆಯೇ ಎಲ್ಲ, ಕಡಿಮೆ ಅಂಕ ಬಂದರೆ ಜೀವನವೇ ಇಲ್ಲ ಎಂದುಕೊಳ್ಳುವ ವ್ಯಕ್ತಿಗಳು ಸ್ಫೂರ್ತಿಯ ಚಿಲುಮೆಯಾಗಿ ನಿಂತಿದ್ದಾರೆ.

ಅದೇ ಸಮಯದಲ್ಲಿ, ಐಎಎಸ್ ಅವ್ನೀಶ್ ಶರಣ್  ಅವರ ಈ ಟ್ವೀಟ್‌ಗೆ, ಭರೂಚ್ ಕಲೆಕ್ಟರ್ ತುಷಾರ್ ಸುಮೇರಾ 'ಧನ್ಯವಾದ ಸರ್' ಎಂದು ಬರೆಯುವ ಮೂಲಕ ಪ್ರತಿಕ್ರಿಯಿಸಿದ್ದಾರೆ. ನೆಟಿಜನ್ಸ್ ಗಳು ಕೂಡ ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಪದವಿ ಮುಖ್ಯವಲ್ಲ, ಯಶಸ್ಸಿಗೆ ಪ್ರತಿಭೆಯೇ ಮುಖ್ಯ ಎಂದು ಒಬ್ಬರು ಬರೆದಿದ್ದರೆ, ಇನ್ನೊಬ್ಬ ವ್ಯಕ್ತಿ, ಮಾರ್ಕ್, ಗ್ರೇಡ್ ಅಥವಾ ಶ್ರೇಯಾಂಕದಿಂದ ನಮ್ಮ ಸಾಮರ್ಥ್ಯಗಳು ಯಾವತ್ತಿಗೂ ನಿರ್ಧಾರವಾಗೋದಿಲ್ಲ ಎಂದಿದ್ದಾರೆ. ಇನ್ನೊಬ್ಬ ವ್ಯಕ್ತಿ, ಕಠಿಣ ಪರಿಶ್ರಮ ಮಾಡುವ ಮನಸ್ಸಿದ್ದರೆ, ವ್ಯಕ್ತಿಗೆ ಯಾವುದೂ ಅಸಾಧ್ಯವಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಸೂಪರ್ ಸಂಬಳ ನೀಡುವ CA ಜಾಬ್, ಆದರೆ ಪರೀಕ್ಷೆ ಬರೆಯೋದು ಹೇಗೆ?

ಯಾರಿವರು ತುಷಾರ್ ಸುಮೇರಾ?: ಟ್ವಿಟರ್ ನಲ್ಲಿ ತುಷಾರ್ ಸುಮೇರಾ ಅವರೇ ಬರೆದುಕೊಂಡಿರುವ ಮಾಹಿತಿಯ ಪ್ರಕಾರ, ಪ್ರಸ್ತುತ ಅವರು ಭರೂಚ್ ಜಿಲ್ಲೆಯ ಕಲೆಕ್ಟರ್ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿದ್ದಾರೆ. 2012ರಲ್ಲಿ ಯುಪಿಎಸ್ಸಿ ಪರೀಕ್ಷೆ ಕ್ಲಿಯರ್ ಮಾಡುವ ಮೂಲಕ ಐಎಎಸ್ ಅಧಿಕಾರಿಯಾದರು. ಭರೂಚ್‌ನಲ್ಲಿ ಉತ್ಕರ್ಷ್ ಪಹಲ್ (Utkarsh Pahal) ಅಭಿಯಾನದಡಿಯಲ್ಲಿ ಮಾಡಿದ ಕೆಲಸದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್‌ನಲ್ಲಿ ತುಷಾರ್ ಸುಮೇರಾ ಅವರನ್ನು ಶ್ಲಾಘಿಸಿದ್ದರು.

ಕರ್ನಾಟಕದಲ್ಲಿ ಏಳು ಡಿಜಿಟಲ್‌ ವಿವಿ ಸ್ಥಾಪನೆಗೆ ನಿರ್ಧಾರ: ಸಿಎಂ ಬೊಮ್ಮಾಯಿ

ಥರ್ಡ್ ಕ್ಲಾಸ್ ನಲ್ಲಿ ಪಾಸ್ ಆಗುವಷ್ಟು ಅಂಕಗಳನ್ನು ತರುವ ಮೂಲಕ ಹೈಸ್ಕೂಲ್‌ ದಾಟಿದ್ದ ತುಷಾರ್, ಆರ್ಟ್ಸ್ ಸ್ಟ್ರೀಮ್‌ನೊಂದಿಗೆ ಇಂಟರ್ಮೀಡಿಯೇಟ್ ಓದಿದ್ದರು. ನಂತರ ಬಿ.ಇಡ್ ಮಾಡಿ ಶಿಕ್ಷಕರ ಹುದ್ದೆ ಸಂಪಾದಿಸಿದ್ದರು. ಈ ಕೆಲಸದ ಸಮಯದಲ್ಲಿ, ಕಲೆಕ್ಟರ್ ಆಗುವ ಆಲೋಚನೆ ಅವನ ಮನಸ್ಸಿಗೆ ಬಂದಿತು. ಆ ಬಳಿಕ ಅವರು ಯುಪಿಎಸ್ಸಿಗೆ ತಯಾರಿ ಆರಂಭಿಸಿದ್ದರು.

 

Follow Us:
Download App:
  • android
  • ios