Asianet Suvarna News Asianet Suvarna News

Textbook Revision Committeeಯ ಮತ್ತೊಂದು ಎಡವಟ್ಟು ಬಹಿರಂಗ

  • ಶಾಲಾ ಪಠ್ಯ ಪುಸ್ತಕ ಪರಿಷಕರಣೆ ಸಮಿತಿ ಮತ್ತೊಂದು ಯಡವಟ್ಟು
  • ಗಿರಿರಾಜ್ ಹೊಸಮನಿಯವರ ಕವನ ಸಂಕಲನ ತಿರುಚಿ ಪ್ರಕಟನೆ ‌ಆರೋಪ
  • 1799ರಲ್ಲಿ ಪ್ರಕಟನೆಗೊಂಡ ನನ್ನದು ಕನ್ನಡ ನಾಡು  ಕವನ ಸಂಕಲನ ಪುಸ್ತಕ
Textbook Revision Committee plagiarism of Giriraja Hosamani poem gow
Author
Bengaluru, First Published Jun 19, 2022, 1:28 PM IST

ರಾಯಚೂರು (ಜೂನ್.19): ದಿನ ಕಳೆದಂತೆ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ( Textbook Revision Committee) ಎಡವಟ್ಟು ಒಂದೊಂದಾಗಿ ಹೊರಬರುತ್ತಿದೆ. ಇದೀಗ ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯ ಮತ್ತೊಂದು ಎಡವಟ್ಟು ಬಹಿರಂಗವಾಗಿದೆ.  ಗಿರಿರಾಜ ಹೊಸಮನಿ ಯವರ ಕವನ ಸಂಕಲನ ತಿರುಚಿ ಪ್ರಕಟಿಸಿರುವ ‌ಆರೋಪ ಕೇಳಿಬಂದಿದೆ.

1799ರಲ್ಲಿ ಪ್ರಕಟನೆಗೊಂಡ ನನ್ನದು ಕನ್ನಡ ನಾಡು  ಕವನ ಸಂಕಲನದಲ್ಲಿ  ಮೂರ್ಖ ಆಮೆ ಎಂಬ ಕವನ   3ನೇ ತರಗತಿಗೆ ಪದ್ಯವಾಗಿತ್ತು. 7-8 ವರ್ಷಗಳ ಕಾಲ ಪಠ್ಯ ಪುಸ್ತಕದಲ್ಲಿ ‌ಪದ್ಯವಿತ್ತು. ಇತ್ತೀಚಿಗೆ ನನ್ನ ಪದ್ಯವನ್ನು ತಿರುಚಲಾಗಿದೆ.  ಪದ್ಯವನ್ನು 7ನೇ ತರಗತಿಯ ದ್ವಿತೀಯ ಭಾಷೆ ಕನ್ನಡದಲ್ಲಿ ಪದ್ಯ ಸೇರಿಸಲಾಗಿದೆ. ಪದ್ಯವನ್ನು ತಿರುಚಿ ಬೇರೆಯವರ ಹೆಸರಿನಲ್ಲಿ ಪ್ರಕಟಿಸಲಾಗಿದೆ ಎಂದು ಗಿರಿರಾಜ ಹೊಸಮನಿ ಆರೋಪಿಸಿದ್ದಾರೆ.

BIDAR DISTRICT COURT RECRUITMENT 2022: ಬೀದರ್‌ ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ

 ಮೂರ್ಖ ಆಮೆ ಹೋಗಿ ಜಾಣ ಆಮೆ ಎಂದು ಭಾಸ್ಕರ ನೆಲ್ಯಾಡಿ ಹೆಸರಿನಲ್ಲಿ ಪದ್ಯ ಪ್ರಕಟಿಸಲಾಗಿದೆ. ಅವರದು ಅಪ್ರಕಟಿತ ಕವನ ಸಂಕಲನ. ಅವರದ್ದು ಯಾವುದೇ ‌ಕವನ ಸಂಕಲನ ಪ್ರಕಟಗೊಂಡಿಲ್ಲ. ಅಪ್ರಕಟಿತ ‌ಕವನ ಸಂಕಲನ ಆಯ್ಕೆ ‌ಮಾಡಬಾರದು ಎಂಬ ನಿಯಮವಿದೆ. ಈ ಪಠ್ಯ ಪರಿಷ್ಕರಣೆ ಸಮಿತಿ ಕವನ ಆಯ್ಕೆ ಮಾಡಿದ್ದು ತಪ್ಪು ಎಂದಿದ್ದಾರೆ.

ಗಿರಿರಾಜ್ ಹೊಸಮನಿ ಬರೆದ ಪದ್ಯದಲ್ಲಿ ಆಮೆ ಕೆಳಗೆ ಬಿದ್ದು ಸತ್ತು ಹೋಗುತ್ತೆ. ಮಕ್ಕಳನ್ನು ಬೈಯಲು ಹೋಗಿ ಕೆಳಗೆ ಬಿದ್ದು ಆಮೆ ಸತ್ತು ಹೋಗುವುದು ಈ ಕವನದಲ್ಲಿದೆ.  ಈಗ ಬರೆದವರ ಪದ್ಯದಲ್ಲಿ ಆಮೆ ಬೈಯಲು ಬಾಯಿ ತೆರೆದು,  ಮಕ್ಕಳನ್ನು ಬೈದು ಮತ್ತೆ ಮೇಲೆ ಹೋಗಿ ಕೋಲು ಹಿಡಿಯುತ್ತೆ ಅಂತ ಬರೆದಿದ್ದಾರೆ.  ಆಮೆ ಕೆಳಗೆ ಬಿದ್ದು ಮತ್ತೆ ಮೇಲೆ ಹೇಗೆ ಹೋಗಿತ್ತು? ಕೋಲು ಹಿಡಿಯಲು ಸಾಧ್ಯವೇ ಇಲ್ಲ.

 ಮೇಲಿನಿಂದ ಕೆಳಗೆ ಬಿದ್ದು ಸತ್ತು ಹೋದ ಆಮೆ ಮೇಲೆ ಕೋಲು ಹೇಗೆ ಹಿಡಿಯಿತು?  ಅಂತ ಮಕ್ಕಳು ಕೇಳಿದ್ರೆ ಶಿಕ್ಷಕರು ಏನು ಉತ್ತರ ನೀಡುತ್ತಾರೆ ಇದು ಸಾಧ್ಯವೇ ಇಲ್ಲ. ಪಠ್ಯ ಪುಸ್ತಕದ ಸಾಮರ್ಥ್ಯವನ್ನು ‌ಕಡಿಮೆ ಮಾಡುವ ಇಂತಹ ಪದ್ಯಗಳನ್ನು ಕಿತ್ತುಹಾಕಬೇಕು.  ಪದ್ಯಗಳನ್ನು ‌ಹಾಕುವುದೇ ಆದ್ರೆ ಮೂಲ ಕವಿಗಳ ಆಶಯಗಳನ್ನು ಹಾಕಿ ಎಂದು ನಿವೃತ್ತ ಶಿಕ್ಷಕ ಗಿರಿರಾಜ ಹೊಸಮನಿ ಹೇಳಿದ್ದಾರೆ.

ಆಗಸ್ಟ್‌ನಲ್ಲಿ ಪಿಯುಸಿ ಪೂರಕ ಪರೀಕ್ಷೆ: ನಾಗೇಶ್‌ 

ಸರ್ಕಾರದ ವಿರುದ್ಧ ಶಾಸಕ ನಿಸರ್ಗ ನಾರಾಯಣಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ: ಸಮಾಜಕ್ಕೆ ಅಪಾರ ಕೊಡುಗೆ ನೀಡಿದ ಬುದ್ದ, ಬಸವಣ್ಣ, ಅಲ್ಲಮ್ಮ ಪ್ರಭ, ಟಿಪ್ಪು ಸುಲ್ತಾನ್‌, ಅಂಬೇಡ್ಕರ್‌, ಮಹಾತ್ಮಗಾಂದಿ, ಕನಕದಾಸರು, ಕುವೆಂಪು ಸೇರಿದಂತೆ ಅನೇಕ ಮಹನೀಯರನ್ನರನ್ನು ಏಕಾ-ಏಕಿ ಪಠ್ಯ ಪುಸ್ತಕದಲ್ಲಿ ಕೈ ಬಿಟ್ಟಸರ್ಕಾರದ ಧೋರಣೆಯನ್ನು ಜನತೆ ಎಂದಿಗೂ ಕ್ಷಮಿಸಲಾರರು ಎಂದು  ಕುಂದಾಣ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು ಸರ್ಕಾರದ ವಿರುದ್ಧ ಕಿಡಿಕಾರಿದರು.

ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲ್ಲೂಕಿನ ಕುಂದಾಣ ಹೋಬಳಿಯ ಪಂಡಿತಪುರ ಗ್ರಾಮದಲ್ಲಿ ಹೈಮಾಸ್‌ ಲೈಟ್‌ ಶಾಸಕ ಉದ್ಘಾಟಿಸಿದ ನಂತರ ಮಾತನಾಡಿದ ಬಿಜೆಪಿ ಸರ್ಕಾರ ಪಠ್ಯ ಪುಸ್ತಕವನ್ನು ತಿರುಚಲು ಹೊರಟಿರುವ ಷಡ್ಯಂತ್ರ ರೂಪಿಸಿದ್ದು ಬಿಜೆಪಿ ಸರ್ಕಾರಕ್ಕೆ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗ, ಸಾಮಾನ್ಯವರ್ಗ ಅವರನ್ನು ಸಂಪೂರ್ಣ ಕಡೆಗಣಿಸಿದ್ದನ್ನು ನಾಡಿನ ಜನತೆ ಎಂದಿಗೂ ಕ್ಷಮಿಸರು. ಜೆಡಿಎಸ್‌ ಪಕ್ಷದಿಂದ ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ದೇಶದ ಹಲವು ಮಹನೀಯರನ್ನರನ್ನು ಏಕಾ-ಏಕಿ ಶಾಲಾ ಪಠ್ಯ ಪುಸ್ತಕದಲ್ಲಿ ಕæೖ ಬಿಟ್ಟಸರ್ಕಾರದ ದೋರಣೆಯನ್ನು ಖಂಡಿಸುವುದರ ಜೊತೆಗೆ ಹಳೆ ಪಠ್ಯವನ್ನೇ ಮುಂದುವರೆಸುವಂತೆ ಆಗ್ರಹಿಸಿ ಸರ್ಕಾರಕ್ಕೆ ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆಯ ಮೂಲಕ ಎಚ್ಚರಿಕೆ ನೀಡಲಾಗಿದೆ.

ಆಲೂರು ದುದ್ದನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳ ವಿವಿದ ಕಾಮಗಾರಿಗಳ ಅಭಿವೃದ್ಧಿಗೆ ಸಾಕಷ್ಟುಅನುಧಾನ ನೀಡಿದ್ದೇನೆ. ಜುಟ್ಟನಹಳ್ಳಿ ಗ್ರಾಮದಿಂದ ಪಂಡಿತಪುರದ ಮಾರ್ಗವಾಗಿ ಸುಮಾರು 30 ಲಕ್ಷ ರೂ ಅನುಧಾನದಲ್ಲಿ ರಸ್ತೆ ನಿರ್ಮಿಸಿಕೊಡುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜೆಡಿಎಸ್‌ ಅದ್ಯಕ್ಷ ಕಾರಹಳ್ಳಿ ಮುನೇಗೌಡ, ಆಲೂರು ದುದ್ದನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ, ತಾಲ್ಲೂಕು ಸೂಸೈಟಿ ಅಧ್ಯಕ್ಷ ದೇವರಾಜು, ವಿಎಸ್‌ಎನ್‌ಎನ್‌ ಅಧ್ಯಕ್ಷ ರಾಮಣ್ಣ, ಜೆಡಿಎಸ್‌ ಮುಖಂಡರಾದ ಲಕ್ಷಣ್‌, ರಬ್ಬನಹಳ್ಳಿ ಪ್ರಭಾಕರ್‌, ಪಂಡಿತಪುರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಾದ ಮುನಿರಾಜು, ಚಿಕ್ಕಮುನಿಶಾಮಪ್ಪ, ಮಂಜುನಾಥ್‌, ಆಂಜಿನಪ್ಪ, ಮಂಜುನಾಥ್‌, ಆಂಜಿನಪ್ಪ ಸೇರಿದಂತೆ ಹಲವರು ಹಾಜರಿದ್ದರು.

Follow Us:
Download App:
  • android
  • ios