SSLC ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ಕೊಟ್ಟ ಶಿಕ್ಷಣ ಇಲಾಖೆ

* ಎಸ್ಸೆಸ್ಸೆಲ್ಸಿ ಅಣಕು ಪರೀಕ್ಷೆ ಜಿಲ್ಲೆಯಲ್ಲಿ 1 ಕಡೆ ಮಾತ್ರ
* ಜು.17ರಂದು ರಾಜ್ಯಾದ್ಯಂತ ಅಣಕು ಪರೀಕ್ಷೆ
* ಅಣಕು ಪರೀಕ್ಷೆಯಲ್ಲಿ ಆಕಸ್ತ ಪೋಷಕರು, ವಿದ್ಯಾರ್ಥಿಗಳು ಭಾಗಿಯಾಗಬಹುದು
 

SSLC Mock Test Is Only 1 Side in the District in Karnataka grg

ಬೆಂಗಳೂರು(ಜು.14): ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕೈಗೊಂಡಿರುವ ಸುರಕ್ಷಾ ಕ್ರಮಗಳು ಹಾಗೂ ಭದ್ರತಾ ಕ್ರಮಗಳ ಪರಿಶೀಲನೆಗೆ ಜು.17ರಂದು ರಾಜ್ಯಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಅಣಕು ಪರೀಕ್ಷಾ ಪ್ರಕ್ರಿಯೆ ನಡೆಯಲಿದೆ.

ಈ ಮೊದಲು ಎಲ್ಲ ಕೇಂದ್ರಗಳಲ್ಲೂ ಅಣಕು ಪರೀಕ್ಷೆ ನಡೆಸಲು ಯೋಚಿಸಿದ್ದ ಶಿಕ್ಷಣ ಇಲಾಖೆ ಈಗ ಪ್ರತಿ ಜಿಲ್ಲೆಗೆ ಒಂದು ಕೇಂದ್ರದಲ್ಲಿ ಮಾತ್ರ ಅಣಕು ಪರೀಕ್ಷೆ ನಡೆಸಲು ಜಿಲ್ಲಾ ಉಪ ನಿರ್ದೇಶಕರುಗಳಿಗೆ ಸೂಚನೆ ನೀಡಿದೆ. 

ವಿದ್ಯಾರ್ಥಿ ಚಿತ್ರ ಸಹಿತ ಎಸ್ಸೆಸ್ಸೆಲ್ಸಿ ಉತ್ತರಪತ್ರಿಕೆ!

ಎಲ್ಲ ಕೇಂದ್ರಗಳಲ್ಲೂ ಅಣಕು ಪರೀಕ್ಷೆ ನಡೆಸುವುದು ಕಷ್ಟವಾಗಬಹುದು ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಅಣಕು ಪರೀಕ್ಷೆಯಲ್ಲಿ ಆಕಸ್ತ ಪೋಷಕರು, ವಿದ್ಯಾರ್ಥಿಗಳು ಭಾಗಿಯಾಗಿ ಪರೀಕ್ಷೆ ಯಾವ ರೀತಿ ನಡೆಯಲಿದೆ. ಕೋವಿಡ್‌ ಸುರಕ್ಷಾ ಕ್ರಮಗಳು ಸೇರಿದಂತೆ ಭದ್ರತಾ ಕ್ರಮಗಳು ಹೇಗಿರುತ್ತವೆ ಎಂಬುದನ್ನು ಗಮನಿಸಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ.
 

Latest Videos
Follow Us:
Download App:
  • android
  • ios