Karnataka Examination Authority: ಸ್ಪರ್ಧಾತ್ಮಕ ಪರೀಕ್ಷೆಗೆ ಶೂ, ಓಲೆ, ಉಂಗುರ ಬ್ಯಾನ್
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಜ.29ರಿಂದ ಫೆ.12ರವರೆಗೆ ನಡೆಸುವ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ, ಬೀಜ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಇಲಾಖೆ ಹಾಗೂ ನಿಗಮಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ವಸ್ತ್ರ ಸಂಹಿತೆ ಬಿಡುಗಡೆ ಮಾಡಿದೆ.
ಬೆಂಗಳೂರು (ಜ.23): ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಜ.29ರಿಂದ ಫೆ.12ರವರೆಗೆ ನಡೆಸುವ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ, ಬೀಜ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಇಲಾಖೆ ಹಾಗೂ ನಿಗಮಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ವಸ್ತ್ರ ಸಂಹಿತೆ ಬಿಡುಗಡೆ ಮಾಡಿದೆ.
ಗುಲ್ಬರ್ಗಾ ವಿವಿ ಫಲಿತಾಂಶ ವಿಳಂಬ: ಸಿಂಧನೂರಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಪುರುಷ ಅಭ್ಯರ್ಥಿಗಳು ಅರ್ಧ ತೋಳಿನ ಶರ್ಚ್ ಮಾತ್ರ ಧರಿಸಿರಬೇಕು. ತೊಡುವ ಬಟ್ಟೆ ಹಗುರವಾಗಿರಬೇಕು. ಹೆಚ್ಚು ಜೇಬುಗಳು, ದೊಡ್ಡ ಬಟನ್, ಕಸೂತಿ ಇರಬಾರದು. ಕುರ್ತಾ, ಪೈಜಾಮಕ್ಕೆ ಅವಕಾಶ ಇಲ್ಲ. ಶೂ ಹಾಕುವಂತಿಲ್ಲ. ಇನ್ನೂ ಮಹಿಳಾ ಅಭ್ಯರ್ಥಿಗಳು ಹೈ ಹೀಲ್ಡ್ ಚಪ್ಪಲಿ ಹಾಕುವಂತಿಲ್ಲ, ಕಿವಿಯೋಲೆ, ಉಂಗುರಗಳು, ನೆಕ್ಲೇಸ್‌ಗಳನ್ನು ಹಾಕಬಾರದು. ಉಳಿದಂತೆ ಡಿಜಿಟಲ್ ಉಪಕರಣಗಳನ್ನು ಪರೀಕ್ಷಾ ಕೇಂದ್ರದ ಒಳಗೆ ಕೊಂಡೊಯ್ಯುವಂತಿಲ್ಲ. ಪ್ರವೇಶ ಪತ್ರ ಇಲ್ಲದೆ ಯಾವುದೇ ಅಭ್ಯರ್ಥಿ ಪರೀಕ್ಷಾ ಕೇಂದ್ರ ಪ್ರವೇಶಿಸುವಂತಿಲ್ಲ.
ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ: ಪ್ರವೇಶಾತಿ ಆರಂಭ
ಫೋಟೋ ಇರುವ ಸರ್ಕಾರ ನೀಡಿದ ಗುರುತಿನ ಚೀಟಿ ತರಬೇಕು. ಪಾರದರ್ಶಕವಾದ ನೀರಿನ ಬಾಟಲಿ ಮಾತ್ರ ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗಿದೆ ಎಂದು ಕೆಇಎ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಕೆಇಎ ವೆಬ್‌ಸೈಟ್ https://cetonline.karnataka.gov.in/kea/ ನೋಡಬಹುದು.