ಸೆ.27ರ ಭಾರತ್ ಬಂದ್ : ವಿವಿ ಪರೀಕ್ಷೆಗಳ ಮುಂದೂಡಿಕೆ
- ದೇಶದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕರೆ ನೀಡಲಾಗಿರುವ ಭಾರತ್ ಬಂದ್
- ಭಾರತ್ ಬಂದ್ ಹಿನ್ನೆಲೆ ಸೆ.27 ರಂದು ನಡೆಯಬೇಕಿದ್ದ ನೃಪತುಂಗ ವಿವಿ ಪದವಿ ಪರೀಕ್ಷೆ ಮುಂದೂಡಿಕೆ
ಬೆಂಗಳೂರು (ಸೆ.26): ದೇಶದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕರೆ ನೀಡಲಾಗಿರುವ ಭಾರತ್ ಬಂದ್ (Bharat Bandh) ಹಿನ್ನೆಲೆ ಸೆ.27 ರಂದು ನಡೆಯಬೇಕಿದ್ದ ನೃಪತುಂಗ ವಿವಿ ಪದವಿ (Exams) ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲಾಗಿದೆ.
ಸೆ.27ರಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಸೆ.30ಕ್ಕೆ ಮುಂದೂಡಿಕೆ ಮಾಡಿ ವಿವಿ ಆದೇಶ ನೀಡಿದೆ. ತೃತೀಯ BA, BSc ವಿದ್ಯಾರ್ಥಿಗಳಿಗೆ (Students) ಸೆ.30ಕ್ಕೆ ಪರೀಕ್ಷೆ ನಿಗದಿ ಮಾಡಲಾಗಿದೆ.
ಸೆ.27 ರಂದು ಪರಿಕ್ಷೆ ರದ್ದಾಗಿದ್ದು ಮುಂದಿನ ಪರಿಕ್ಷೆಯ ಪರಿಷ್ಕೃತ ದಿನಾಂಕವನ್ನು ನೃಪತುಂಗ ವಿವಿ ಪ್ರಕಟಿಸಿದೆ. ವಿಶ್ವವಿದ್ಯಾಲಯದ ಸುತ್ತೋಲೆಯಲ್ಲಿ ಪರೀಕ್ಷಾ ದಿನಾಂಕವನ್ನು ಪ್ರಕಟಿಸಲಾಗಿದೆ.
ಸೆ.27ಕ್ಕೆ ಭಾರತ್ ಬಂದ್ : ಯಾರ್ಯಾರ ಬೆಂಬಲ
ದೇಶದಾದ್ಯಂತ ಕೃಷಿ ಕಾಯ್ದೆಯನ್ನು ವಿರೋಧಿಸಿ ಬಂದ್ ಮಾಡಲಾಗುತ್ತಿದ್ದು ಹಲವು ಸಂಘಟನೆಗಳಿಂದ ಬಂದ್‌ಗೆ ಬೆಂಬಲ ವ್ಯಕ್ತವಾಗಿದೆ.
ಆದರೆ ರಾಜ್ಯದಲ್ಲಿಯು ರೈತ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿದ್ದು, ದೈನದಿಂದನ ಚಟುವಟಿಕೆಗಳು ಎಂದಿನಂತೆ ಇರಲಿವೆ ಎನ್ನಲಾಗಿದೆ. ಆಟೊ, ಬಸ್ ಸಮಚಾರ, ಹೋಟೆಲ್‌ಗಳು ತೆರದಿರಲಿವೆ ಎನ್ನಲಾಗುತ್ತಿದೆ.
ಕೋಡಿಹಳ್ಳಿ ಸಪೋರ್ಟ್
ಇನ್ನು ಸೆ.27 ರ ಭಾರತ್ ಬಂದ್‌ಗೆ ರಾಜ್ಯದಲ್ಲೂ ಬೆಂಬಲ ವ್ಯಕ್ತವಾಗುತ್ತಿದೆ. ಬಂದ್ ಯಶಸ್ವಿಗೊಳಿಸಲು ಪೂರ್ವ ತಯಾರಿಯನ್ನ ಮಾಡಿಕೊಳ್ಳಲಾಗುತ್ತಿದೆ ಅಂತ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ನಾರಾಯಣಗೌಡ, ವಾಟಾಳ್ ನಾಗರಾಜ್, ಪ್ರವೀಣ್ ಶೆಟ್ಟಿ ಬೆಂಬಲ ಸೂಚಿಸಿದ್ದಾರೆ. ರೈತ ಸಂಘಗಳು ಒಟ್ಟಾಗಿ ಕೆಲಸ ಮಾಡುತ್ತಿವೆ. ಕಾರ್ಮಿಕ ಸಂಘ, ದಲಿತ ಸಂಘ ಎಲ್ಲವೂ ಒಟ್ಟಾಗಿದೆ. ನಗರದ ಟೌನ್‌ಹಾಲ್‌ನಲ್ಲಿ ಮೆರವಣಿಗೆ, ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಬೃಹತ್ ಸಭೆ, ಹೆದ್ದಾರಿ ಬಂದ್, ರೈಲು ಬಂದ್ ನಡೆಸಲಿದ್ದೇವೆ ಅಂತ ಮಾಹಿತಿ ನೀಡಿದ್ದಾರೆ.
ಅನುಮಾನದ ಶಂಕೆ
ಮತ್ತೊಂದೆಡೆ ಬಂದ್‌ಗೆ ಬೆಂಬಲ ಅನುಮಾನ ಎಂದೂ ಹೇಳಲಾಗುತ್ತಿದೆ.
ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ಸೋಮವಾರದ ಭಾರತ್ ಬಂದ್‌ಗೆ ರಾಜ್ಯದಲ್ಲಿ ಬಹುತೇಕ ಅನುಮಾನ ವ್ಯಕ್ತವಾಗಿದೆ. ಸಂಘಟನೆಗಳು ಕೇವಲ ನೈತಿಕ ಬೆಂಬಲವನ್ನ ಘೋಷಿಸಿವೆ. ಹೀಗಾಗಿ ಭಾರತ್ ಬಂದ್‌ಗೆ ರಾಜ್ಯದಲ್ಲಿ ಬೆಂಬಲ ಬಹುತೇಕ ಅನುಮಾನವಾಗಿದೆ.
ಕೊರೋನಾದಿಂದ ವ್ಯಾಪಾರದ ಮೇಲೆ ಈಗಾಗಲೇ ಸಾಕಷ್ಟು ಹೊಡೆತ ಬಿದ್ದಿದೆ. ಮತ್ತೆ ಬಂದ್ ಮಾಡಿದರೆ ಜನಜೀವನ ಕಷ್ಟವಾಗುತ್ತದೆ. ಹೀಗಾಗಿ ಬಂದ್‌ಗೆ ಕೇವಲ ನೈತಿಕ ಬೆಂಬಲ ಘೋಷಿಸಲು ಸಂಘಟನೆಗಳು ನಿರ್ಧರಿಸಿವೆ. ಓಲಾ, ಉಬರ್ ಸಂಘ, ಬೀದಿ ಬದಿ ವ್ಯಾಪಾರಿಗಳೂ ಬಂದ್‌ಗೆ ಕೇವಲ ನೈತಿಕ ಬೆಂಬಲ ಸೂಚಿಸಿವೆ.