ಶಿಕ್ಷಣ ಕುರಿತ ದೂರು ಪರಿಶೀಲನೆಗೆ ಪ್ರತ್ಯೇಕ ಆಯೋಗ: ಸಚಿವ ಬಿ.ಸಿ.ನಾಗೇಶ್
ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಎಲ್ಲ ರೀತಿಯ ದೂರುಗಳನ್ನು ಪರಿಶೀಲಿಸಿ ವಿಚಾರಣೆ ಮಾಡಲು ಪ್ರತ್ಯೇಕ ತನಿಖಾ ಆಯೋಗ ಅಥವಾ ಸಮಿತಿ ರಚನೆ ಮಾಡುವ ಚಿಂತನೆಯಿದೆ. ಈ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
ಬೆಂಗಳೂರು (ಸೆ.06): ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಎಲ್ಲ ರೀತಿಯ ದೂರುಗಳನ್ನು ಪರಿಶೀಲಿಸಿ ವಿಚಾರಣೆ ಮಾಡಲು ಪ್ರತ್ಯೇಕ ತನಿಖಾ ಆಯೋಗ ಅಥವಾ ಸಮಿತಿ ರಚನೆ ಮಾಡುವ ಚಿಂತನೆಯಿದೆ. ಈ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಪ್ರಾಮಾಣಿಕ, ಪಾರದರ್ಶಕವಾಗಿ ಕಾರ್ಯ ನಿರ್ವಹಿಸಬೇಕು. ಕೆಲಸದ ಒತ್ತಡದಿಂದ ಯಾವುದೇ ತಪ್ಪುಗಳಾಗಿದ್ದರೂ ಸರಿಪಡಿಸಿಕೊಳ್ಳಲು ಡಿಡಿಪಿಐ, ಬಿಇಒಗಳಿಗೆ ಸೂಚಿಸಲಾಗಿದೆ.
ಇಲಾಖೆ ವ್ಯಾಪ್ತಿಯಲ್ಲಿ ಯಾವುದೇ ಅಕ್ರಮ, ನಿಯಮ ಉಲ್ಲಂಘನೆ ಸೇರಿದಂತೆ ಎಲ್ಲ ರೀತಿಯ ದೂರುಗಳ ವಿಚಾರಣೆಗೆ ಪ್ರತ್ಯೇಕ ತನಿಖಾ ಆಯೋಗ ರಚಿಸುವುದು. ಆ ಆಯೋಗದಿಂದ ವರದಿ ಪಡೆದು ಸಂಬಂಧಿಸಿದ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಚಿಂತನೆ ನಡೆದಿದೆ. ಮುಖ್ಯಮಂತ್ರಿ ಅವರೊಂದಿಗೆ ಈ ಬಗ್ಗೆ ಚರ್ಚಿಸಲಾಗುವುದು ಒಪ್ಪಿಗೆ ಕೊಟ್ಟರೆ ಆದಷ್ಟುಶೀಘ್ರ ಇದನ್ನು ಜಾರಿಗೆ ತರಲಾಗುವುದು ಎಂದರು. ಹೊಸ ಖಾಸಗಿ ಶಾಲೆಗಳ ನೋಂದಣಿ ಹಾಗೂ ಮಾನ್ಯತೆ ನವೀಕರಣಕ್ಕೆ ಹಲವು ಬಾರಿ ದಿನಾಂಕ ವಿಸ್ತರಿಸಿ ಕಾಲಾವಕಾಶ ನೀಡಲಾಗಿತ್ತು. ಆದರೂ, ಕೆಲವು ಶಾಲೆಗಳು ನೋಂದಣಿ ಮಾಡಿಕೊಳ್ಳಲು ವಿಫಲವಾದವು.
ಶಿಕ್ಷಣದಲ್ಲಿ ವಿಶೇಷವಾಗಿ ಪರಿವರ್ತನೆ ಅತ್ಯಗತ್ಯ: ಸಚಿವ ನಾಗೇಶ್
ಇಂಥ ಶಾಲೆಗಳ ಪಟ್ಟಿ ಮಾಡಿದ್ದಕ್ಕೆ ಇಲಾಖೆ ವಿರುದ್ಧವೇ ಆರೋಪ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಂತಹ ಶಾಲೆಗಳಿಗೆ ಮಕ್ಕಳು ಪ್ರವೇಶ ಪಡೆದು ತೊಂದರೆ ಅನುಭವಿಸಬಾರದು ಎಂದು ಆ ಶಾಲೆಗಳನ್ನು ಗುರುತಿಸಿ ಪಟ್ಟಿಮಾಡಲಾಗಿದೆ. ಶಾಲೆಗಳ ಬಳಿಕ ಅಗತ್ಯ ದಾಖಲೆಗಳು ಇದ್ದವೋ ಇಲ್ಲವೋ ಗೊತ್ತಿಲ್ಲ. ಆದರೆ, ಮಕ್ಕಳ ಹಿತದೃಷ್ಟಿಯಿಂದ ಈ ಕ್ರಮ ಕೈಗೊಂಡಿದ್ದಕ್ಕೆ ಇಲಾಖೆಯ ವಿರುದ್ಧವೇ ಆರೋಪ ಮಾಡಲಾಗುತ್ತಿದೆ ಎಂದು ಇದೇ ವೇಳೆ ಸಚಿವರು ಖಾಸಗಿ ಶಾಲಾ ಆಡಳಿತ ಮಂಡಳಿಗಳು ಮಾಡಿರುವ ಭ್ರಷ್ಟಾಚಾರದ ಆರೋಪಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಖಾಸಗಿ ಶಿಕ್ಷಕರಿಗೂ ಪ್ರಶಸ್ತಿ ಪರಿಶೀಲನೆ: ಖಾಸಗಿ ಶಾಲಾ ಶಿಕ್ಷಕರನ್ನೂ ಪ್ರಶಸ್ತಿಗೆ ಆಯ್ಕೆ ಮಾಡಬೇಕೆಂಬ ಬೇಡಿಕೆ ಇದೆ. ಸಾಕಷ್ಟುಖಾಸಗಿ ಶಾಲಾ ಶಿಕ್ಷಕರೂ ಉತ್ತಮ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಶಿಕ್ಷಣ ಇಲಾಖೆಯ ಕಾಯಕಲ್ಪಕ್ಕೆ ಮುಖ್ಯಮಂತ್ರಿ ಅವರಿಂದ ಸಂಪೂರ್ಣ ಸಹಕಾರ ಸಿಕ್ಕಿದೆ. 15 ಸಾವಿರ ಶಿಕ್ಷಕರ ನೇಮಕ, 8100 ತರಗತಿ ಕೊಠಡಿ ನಿರ್ಮಾನ ಸೇರಿದಂತೆ ಇಲಾಖೆಯ ಎಲ್ಲ ಕಾರ್ಯಗಳಿಗೂ ಸೂಕ್ತ ಅನುದಾನದ ನೆರವು ನೀಡಿದ್ದಾರೆ.
ಸಚಿವ ನಾಗೇಶ್ ಭ್ರಷ್ಟಾಚಾರಿಯಲ್ಲ: ರುಪ್ಸಾ ಉಲ್ಟಾ
ಉತ್ತಮ ಶಿಕ್ಷಣ ಪ್ರಶಸ್ತಿಗೆ ಶಿಕ್ಷಕರ ಆಯ್ಕೆ ವಿಚಾರದಲ್ಲಿ ಕೂಡ ಯಾವುದೇ ಹಸ್ತಕ್ಷೇಪ ನಡೆದಿಲ್ಲ ಎಂದರು. ಕೇಂದ್ರ ಸರ್ಕಾರ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ನೀಡಿದ ಬಳಿಕ ರಾಜ್ಯ ಪಠ್ಯಕ್ರಮ ಚೌಕಟ್ಟು ರಚಿಸಿ, ಬಳಿಕ ಪಠ್ಯಕ್ರಮ ಅಂತಿಮಗೊಳಿಸಿ ಇದೇ ವರ್ಷದಿಂದ ಪೂರ್ವ ಪ್ರಾಥಮಿಕ ಹಂತದಿಂದ ಶಿಕ್ಷಣದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಇದೇ ವೇಳೆ ಸಚಿವರು ಹೇಳಿದರು.