ವಿದ್ಯಾರ್ಥಿಗಳ ಬಾಳಲ್ಲಿ ಬೆಳಕು ಮೂಡಿಸಿದ ಸೆಲ್ಕೋ ಸೋಲಾರ್
* ವಿದ್ಯಾರ್ಥಿಗಳ ಬಾಳಲ್ಲಿ ಬೆಳಕು ಮೂಡಿಸಿದ ಸೆಲ್ಕೋ ಸೋಲಾರ್
* ಸೋಲಾರ್ ಶಕ್ತಿಯ ವ್ಯವಸ್ಥೆ ಮಾಡುವ ಮೂಲಕ ಅವರ ಬಾಳಲ್ಲಿ ಬೆಳಕು
* ವಿದ್ಯಾರ್ಥಿನಿಯರ ಓದಿಗೆ ಬೆಳಕಾದ ಸೆಲ್ಕೋ ಸೋಲಾರ್
ಉಡುಪಿ, (ಜೂನ್.27): ವಿದ್ಯುತ್ ಇಲ್ಲದೆ ಕ್ಯಾಂಡಲ್ ಅಥವಾ ಟಾರ್ಚ್ ಬೆಳಕಲ್ಲಿ ಓದುತಿದ್ದ ಇಬ್ಬರು ವಿದ್ಯಾರ್ಥಿನಿಯರ ಮನೆಗೆ ಸೆಲ್ಕೋ ಸೋಲಾರ್ ಸಂಸ್ಥೆ ಉಚಿತವಾಗಿ ಸೋಲಾರ್ ಶಕ್ತಿಯ ವ್ಯವಸ್ಥೆ ಮಾಡುವ ಮೂಲಕ ಅವರ ಬಾಳಲ್ಲಿ ಬೆಳಕು ಮೂಡಿಸಿದೆ.
ಕುಂದಾಪುರ ತಾಲೂಕಿನ ಉಪ್ಪುಂದ ಗ್ರಾಮದ ಅರೆಕಲ್ಲುಮನೆ ಎಂಬಲ್ಲಿನ ನಿವಾಸಿ ಗುಲಾಬಿ ಪೂಜಾರಿ ಅವರ ಮನೆಗೆ ಎಷ್ಟು ಪ್ರಯತ್ನಿಸಿದರೂ ಸರಿಯಾದ ದಾಖಲೆಗಳ ಕೊರತೆಯಿಂದಾಗಿ ವಿದ್ಯುತ್ ಸಂಪರ್ಕ ಸಿಕ್ಕಿರಲಿಲ್ಲ.
ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್: ಉಚಿತ ಟ್ಯಾಬ್ ವಿತರಣೆಗೆ ಸಿಎಂ ಚಾಲನೆ
ಕೂಲಿ ಮಾಡುವ ಬದುಕು ಪತಿಪತ್ನಿಗೆ ತಮ್ಮಿಬ್ಬರು ಹೆಣ್ಣುಮಕ್ಕಳನ್ನು ಚೆನ್ನಾಗಿ ಓದಿಸಬೇಕು ಎಂಬ ಮಹದಾಸೆ ಇದೆ. ವಿದ್ಯುತ್ ದೀಪ ಇಲ್ಲದಿದ್ದರಿಂದ ಮಕ್ಕಳು ಓದುಬರಹಕ್ಕೆ ಕ್ಯಾಂಡಲ್ ಅಥವಾ ಟಾರ್ಚ್ ಬೆಳಕೆ ಗತಿಯಾಗಿತ್ತು. ಈ ವಿದ್ಯಾರ್ಥಿನಿಯರು ಓದುವುದಕ್ಕಾಗಿ ಪಡುತ್ತಿರುವ ಬವಣೆಯನ್ನು ತಿಳಿದ ಸೆಲ್ಕೋ ಸೋಲಾರ್ ಸಂಸ್ಖೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋಹನ ಹೆಗಡೆ ಅವರು ತಕ್ಷಣ ತಮ್ಮ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅದರಂತೆ ಶನಿವಾರ ಸೆಲ್ಕೋ ಸೋಲಾರ್ ಕಂಪನಿಯ ಡಿಜಿಎಂ ಗುರುಪ್ರಕಾಶ ಶೆಟ್ಟಿ, ವಲಯ ವ್ಯವಸ್ಥಾಪಕ ಶೇಖರ ಶೆಟ್ಟಿ, ವ್ಯವಸ್ಥಾಪಕ ಮಂಜುನಾಥ್ ಅವರು ಗುಲಾಬಿ ಅವರ ಮನೆಗೆ ತೆರಳಿ,ಸಂಪೂರ್ಣ ಉಚಿತವಾಗಿ ಸೋಲಾರ್ ವ್ಯವಸ್ಥೆ ಅಳವಡಿಸಿ ದೀಪ ಬೆಳಗಿಸಿದ್ದಾರೆ.
ತಮ್ಮ ಮಕ್ಕಳ ಭವಿಷ್ಯಕ್ಕೆ ಆಸರೆಯಾದ ಸೆಲ್ಕೋ ಸಂಸ್ಥೆ ಹರೀಶ್ ಹಂದೆ, ಮೋಹನ ಹೆಗಡೆ, ಜಗದೀಶ್ ಪೈ, ಗುರುಪ್ರಕಾಶ್ ಶೆಟ್ಟಿ ಹಾಗೂ ಸ್ಥಳೀಯ ಕುಂದಾಪುರ ಶಾಖೆಯ ಅಧಿಕಾರಿಗಳಿಗೆ ಗುಲಾಬಿ ಪೂಜಾರಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.