ನಾಳೆಯಿಂದ 2nd PU Exam: 7.26 ಲಕ್ಷ ವಿದ್ಯಾರ್ಥಿಗಳ ನೋಂದಣಿ
ನಾಳೆಯಿಂದ 1,109 ಕೇಂದ್ರಗಳಲ್ಲಿ ದ್ವಿತೀಯ ಪಿಯು ಪರೀಕ್ಷೆ
ಕಳೆದ ಎರಡು ವರ್ಷಗಳ ನಂತರ ಪೂರ್ಣ ಪ್ರಮಾಣದಲ್ಲಿ ಪರೀಕ್ಷೆ
ಪರೀಕ್ಷೆ ಬರೆಯಲು 7.26 ಲಕ್ಷ ವಿದ್ಯಾರ್ಥಿಗಳು ನೋಂದಣಿ
ಬೆಂಗಳೂರು (ಮಾ.08): ರಾಜ್ಯದಲ್ಲಿ ನಾಳೆಯಿಂದ 7.26 ಲಕ್ಷ ದ್ವಿತೀಯ ಪಿಯು ವಿದ್ಯಾರ್ಥಿಗಳ ಪರೀಕ್ಷೆ ಆರಂಭವಾಗಲಿದೆ. ಕಳೆದ ಎರಡು ವರ್ಷಗಳ ಕಾಲ ಕೋವಿಡ್ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗಿರಲಿಲ್ಲ. ಆದರೆ, ಈ ವರ್ಷ ಕೋವಿಡ್ ಬಳಿಕ ಪೂರ್ಣ ಪ್ರಮಾಣದಲ್ಲಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಸಿದ್ಧರಾಗಿದ್ದಾರೆ.
ಹೌದು ನಾಳೆಯಿಂದ ದ್ವಿತೀಯ ಪಿಯು ಪರೀಕ್ಷೆ ಆರಂಭವಾಗಿದೆ. ಕೊರೋನಾ ಬಳಿಕ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿರುವ ಪರೀಕ್ಷೆಯಾಗಿದೆ. ಇದೇ ಮೊದಲ ಬಾರಿಗೆ ಪ್ರೀ ಯೂನಿವರ್ಸಿಟಿ ಬೋರ್ಡ್‌ನ ಬದಲಾಗಿ ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿಯಿಂದ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಒಟ್ಟು 1.109 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲು ಸಿದ್ಧತೆ ಮಾಡಲಾಗಿದೆ. ಅಂದಹಾಗೆ ಈ ಬಾರಿ 7,26,213 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಪಿಯುಸಿ ಪಾಸ್ ಆಗುವುದು ಇನ್ನಷ್ಟು ಸುಲಭ: ಈ ವರ್ಷದಿಂದ ಬಹು ಆಯ್ಕೆ ಪ್ರಶ್ನೆಗಳ ಸೇರ್ಪಡೆ
ಇನ್ನು ಈ ವರ್ಷ 6,29,000 ಹೊಸ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲು ನೋಂದಣಿ ಮಾಡಿಕೊಂಡಿದ್ದಾರೆ. ಮತ್ತೊಂದೆಡೆ 25,847 ಖಾಸಗಿ ಅಭ್ಯರ್ಥಿಗಳು ಹಾಗೂ ಪುನಾರವರ್ತಿತ ವಿದ್ಯಾರ್ಥಿಗಳು 70,586 ಪರೀಕ್ಷೆ ಬರೆಯಲು ಸಿದ್ಧರಾಗಿದ್ದು, ಒಟ್ಟು 7.26 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಯನ್ನು ಎದುರಿಸಲಿದ್ದಾರೆ. ಈ ಪೈಕಿ ಬಾಲಕಿಯರು 3,62,509 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಉಳಿದಂತೆ 3,63,704 ಬಾಲಕರು ಪರೀಕ್ಷೆಯನ್ನು ಬರೆಯುತ್ತಿದ್ದಾರೆ. ರಾಜ್ಯದಲ್ಲಿ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷಾ ವೇಳಾಪಟ್ಟಿಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯು ಪ್ರಕಟಿಸಿದೆ. 2023ರ ಮಾ.9 ರಿಂದ ಮಾ.29ರವರೆಗೆ ಒಟ್ಟು 20 ದಿನಗಳ ಕಾಲ ವಿವಿಧ ವಿಷಯಗಳ ಪರೀಕ್ಷೆ ನಡೆಯಲಿವೆ.
ಪರೀಕ್ಷೆ ವೇಳೆ ಹಿಜಾಬ್ ಧರಿಸಲು ನಿರ್ಬಂಧ:
ಇನ್ನು ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಹಿಜಾಬ್ ವಿವಾದ ಆರಂಭವಾಗಿದ್ದು, ಕೋರ್ಟ್‌ನಿಂದ ಆದೇಶ ನೀಡಲಾಗಿತ್ತು. ಇನ್ನು ಶಿಕ್ಷಣ ಇಲಾಖೆಯಿಂದ ಹಿಜಾಬ್ ಧರಿಸಿಕೊಂಡು ಪರೀಕ್ಷೆಯನ್ನು ಬರೆಯುವುದಕ್ಕೆ ಮುಸ್ಲಿಂ ಮಹಿಳಾ ವಿದ್ಯಾರ್ಥಿನಿಯರಿಗೆ ನಿರ್ಬಂಧ ವಿಧಿಸಲಾಗಿತ್ತು. ಈ ಭಾರಿ ಕೂಡ ಪರೀಕ್ಷಾ ಕೇಂದ್ರಗಳಲ್ಲಿ ಹಿಜಾಬ್ ನಿಷೇಧ ಮಾಡಲಾಗಿದೆ. ಒಟ್ಟಾರೆ ಪರೀಕ್ಷಾ ಅಕ್ರಮಗಳನ್ನ ತಡೆಗಟ್ಟಲು ಕಠಿಣ ಕ್ರಮ ಜಾರಿಗೊಳಿಸಲಾಗಿದೆ. ಉಳಿದಂತೆ ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮಗಳನ್ನ ತಡೆಯಲು ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ.
ಲಿಂಗವಾರು ವಿದ್ಯಾರ್ಥಿಗಳ ವಿವರ:
ಬಾಲಕಿಯರು- 3,62,509 ವಿದ್ಯಾರ್ಥಿಗಳು
ಬಾಲಕರು- 3,63,704 ವಿದ್ಯಾರ್ಥಿಗಳು
ವಿಭಾಗವಾರು ವಿದ್ಯಾರ್ಥಿಗಳ ವಿವರ:
ಕಲಾವಿಭಾಗ 2,34,815 ವಿದ್ಯಾರ್ಥಿಗಳು
ವಾಣಿಜ್ಯ ವಿಭಾಗ- 2,47,269 ವಿದ್ಯಾರ್ಥಿಗಳು
ವಿಜ್ಞಾನ ವಿಭಾಗ 2,44,129 ವಿದ್ಯಾರ್ಥಿಗಳು
ಕೆಎಸ್ಆರ್‌ಟಿಸಿಯಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಪರೀಕ್ಷೆಗೆ ಹಾಜರಾಗಲು ಉಚಿತ ಬಸ್ ಸೌಲಭ್ಯ
ದ್ವಿತೀಯ ಪಿಯು ಪರೀಕ್ಷಾ ವೇಳಾಪಟ್ಟಿ
ಮಾರ್ಚ್ 09 ಕನ್ನಡ
ಮಾರ್ಚ್ 11 ಗಣಿತ, ಶಿಕ್ಷಣ
ಮಾರ್ಚ್ 13 ಅರ್ಥಶಾಸ್ತ್ರ
ಮಾರ್ಚ್ 14 ರಸಯಾನಶಾಸ್ತ್ರ, ಮನಶಾಸ್ತ್ರ, ಕರ್ನಾಟಕ ಸಂಗೀತ , ಹಿಂದುಸ್ತಾನಿ ಸಂಗೀತ, ಮೂಲಗಣಿತ
ಮಾರ್ಚ್ 15 , ಪ್ರಥಮ ಭಾಷೆ ಪರೀಕ್ಷೆ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
ಮಾರ್ಚ್ 16 ತರ್ಕ ಶಾಸ್ತ್ರ, ವ್ಯವಹಾರ ಅಧ್ಯಯನ
ಮಾರ್ಚ್ 17 ಮಾಹಿತಿ ತಂತ್ರಜ್ಜಾನ, ರಿಟೈಲ್ , ಆಟೋಮೊಬೈಲ್, ಹೆಲ್ತ್ ಕೆರ್,ಬ್ಯೂಟಿ ಅಂಡ್ ವೆಲ್ ನೆಸ್
ಮಾರ್ಚ್ 18 ಭೂಗೋಳ ಶಾಸ್ತ್ರ, ಜೀವಶಾಸ್ತ್ರ
ಮಾರ್ಚ್ 20 ಇತಿಹಾಸ, ಭೌತಶಾಸ್ತ್ರ
ಮಾರ್ಚ್ 21 ಹಿಂದಿ
ಮಾರ್ಚ್ 23 ಇಂಗ್ಲೀಷ್
ಮಾರ್ಚ್ 25 ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
ಮಾರ್ಚ್ 27 ಐಚ್ಚಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭ ಶಾಸ್ತ್ರ,ಗೃಹ ವಿಜ್ಞಾನ
ಮಾರ್ಚ್ 29 ಸಮಾಜಶಾಸ್ತ್ರ,ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ