Asianet Suvarna News Asianet Suvarna News

ಮತ್ತೆ ಕೊರೋನಾ ಹೆಚ್ಚಳ: ತಮಿಳುನಾಡಿನಲ್ಲಿ ಶಾಲೆಗಳಿಗೆ ರಜೆ ಘೋಷಣೆ

ದೇಶದಲ್ಲಿ ಮತ್ತೆ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವಾಲಯ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ರಾಜ್ಯಗಳಿಗೆ ಎಚ್ಚರಿಸಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾವಾಗಿ ಶಾಲೆಗೆ ರಜೆ  ಘೋಷಣೆ ಮಾಡಲಾಗಿದೆ.

Schools to be shut for classes 9 to 11 in Tamil Nadu Over COVID19 rbj
Author
Bengaluru, First Published Mar 20, 2021, 8:59 PM IST

ಚೆನ್ನೈ, (ಮಾ.20): 9, 10 ಮತ್ತು 11ನೇ ತರಗತಿಯ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಅಗತ್ಯವಿಲ್ಲ. ಎಲ್ಲರನ್ನೂ ಉತ್ತೀರ್ಣ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಡಪ್ಪಡಿ ಕೆ. ಪಳನಿಸ್ವಾಮಿ ತಿಳಿಸಿದ್ದಾರೆ.

ಇದೀಗ ಕೊರೋನಾ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ತಮಿಳುನಾಡು ಸರ್ಕಾರ 9, 10 ಮತ್ತು 11 ನೇ ತರಗತಿಗಳಿಗೆ ಮಾರ್ಚ್ 22 ರವರೆಗೆ ಶಾಲೆ ಘೋಷಿಸಿ ಆದೇಶ ಹೊರಡಿಸಿದೆ. 

'9, 10, 11ನೇ ತರಗತಿ ಪರೀಕ್ಷೆ ಕ್ಯಾನ್ಸಲ್, ಎಲ್ಲಾ ವಿದ್ಯಾರ್ಥಿಗಳು ಪಾಸ್'

ಇನ್ನು 9,10 ಮತ್ತು 11 ನೇ ತರಗತಿಗಳಿಗೆ ಆನ್​ಲೈನ್ ತರಗತಿಗಳು ಮುಂದುವರೆಯಲಿವೆ. ಅಲ್ಲದೇ ಈ ತರಗತಿಗಳ ಹಾಸ್ಟೆಲ್​ಗಳನ್ನೂ ಮುಚ್ಚಲು ಆದೇಶಿಸಲಾಗಿದೆ.

ಲಾಕ್​​ಡೌನ್ ಸಮಯದಲ್ಲಿ ಮುಚ್ಚಲಾಗಿದ್ದ ಶಾಲೆಗಳನ್ನ ಜನವರಿ 19 ರಂದು 10 ಮತ್ತು 12 ನೇ ತರಗತಿಗಳಿಗೆ ಹಾಗೂ ಫೆಬ್ರವರಿ 8 ರಂದು 9 ಮತ್ತು 11 ನೇ ತರಗತಿಗಳಿಗೆ ಶಾಲೆಗಳನ್ನ ತೆರೆಯಲಾಗಿತ್ತು. ಅಲ್ಲದೇ ಹಾಸ್ಟೆಲ್​ಗಳನ್ನೂ ತೆರೆಯಲು ಅವಕಾಶ ನೀಡಲಾಗಿತ್ತು.

Follow Us:
Download App:
  • android
  • ios