ಬೆಂಗಳೂರು(ಡಿ 23) ಕೊರೋನಾ ಮತ್ತು ರೂಪಾಂತರಿ ಕೊರೋನಾ ಆತಂಕದ ನಡುವೆ ರಾಜ್ಯ ಸರ್ಕಾರ ಶಾಲೆಗಳನ್ನು ತೆರೆಯಲು ಸಿದ್ಧತೆ ಮಾಡಿಕೊಂಡಿದ್ದು ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂಇದೆ.

ನಿಗದಿಯಂತೆ ಜ.1ರಿಂದ ಶಾಲೆ ಪುನರಾರಂಭಚವಾಗಲಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.  10, 12ನೇ ತರಗತಿ ಪ್ರಾರಂಭಕ್ಕೂ  ಆರೋಗ್ಯ ಇಲಾಖೆ, ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸು ಮಾಡಿತ್ತು

ಒಂದು ಹಂತದ ಟ್ರಯಲ್ ನಂತರ  ಜ.15ರಿಂದ 11ನೇ ತರಗತಿ ಆರಂಭಕ್ಕೂ ಸರ್ಕಾರ ಸಿದ್ಧವಾಗಿದೆ. ಕೊರೋನಾ ಸಕಲ ಮುನ್ನೆಚ್ಚರಿಕೆ ತೆಗೆದುಕೊಳ್ಳಲು ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

ಖಾಸಗಿ ಶಾಲೆ ಆಟಾಟೋಪದ ಈ ವರದಿ ನೋಡಿ

ಶಾಲೆಗಳಲ್ಲಿರುವ ಭೌತಿಕ ಸೌಲಭ್ಯ ಹಾಗೂ ಮುನ್ನಚ್ಚರಿಕೆ ಕ್ರಮ ವಹಿಸುವುದು ಶಿಕ್ಷಕರು ಹಾಗೂ ಸಿಬ್ಬಂದಿಗಳಿಗೆ ಕೊವಿಡ್ ಪರೀಕ್ಷೆ ಕಡ್ಡಾಯ 72 ಗಂಟೆಗಳ ಮುಂಚೆ ವಸತಿ ಶಾಲೆಯ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಕೊವಿಡ್ ವರದಿ ಸಲ್ಲಿಸಬೇಕು, ಶಾಲೆಗೆ ಬಾರದ ವಿದ್ಯಾರ್ಥಿಗಳಿಗೆ ಆನ್ ಲೈನ್ ಕ್ಲಾಸ್ ಮುಂದುರಿಕೆ ಶಾಲೆಯಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಥರ್ಮಲ್‌ ಸ್ಕ್ಯಾನಿಂಗ್ ಕಡ್ಡಾಯ,  Sop ಅನುಸಾರ ಶಾಲೆಗಳಲ್ಲಿ ಸೋಪ್ ಹಾಗು ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು, 50 ಮೇಲ್ಪಟ್ಟವರು ಫೇಸ್ ಶೀಲ್ಡ್ ಧರಿಸುವುದು ಕಡ್ಡಾಯ  ಎಂಬ ನಿಯಮ ಜಾರಿ ಮಾಡಲಾತ್ತದೆ.

ಶಾಲೆ ಆವರಣದಲ್ಲಿ ವಿದ್ಯಾರ್ಥಿಗಳು ಊಟ ಮಾಡುವಂತಿಲ್ಲ ವಿದ್ಯಾರ್ಥಿಗೆ ನೆಗಡಿ, ಜ್ವರ, ಶೀತ ಕಂಡುಬಂದಲ್ಲಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಬೇಕು, ಶಾಲೆ ಆರಂಭಕ್ಕೂ ಮುನ್ನ ಕೊವಿಡ್ ಟೆಸ್ಟ್ ಕಡ್ಡಾಯ ಎಂದು ತಿಳಿಸಲಾಗಿದೆ.

10ನೇ ತರಗತಿ ಶಾಲಾ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದ್ದು ಸೋಮವಾರದಿಂದ ಶನಿವಾರದವರೆಗೆ ತರಗತಿ ನಡೆಸಲಾಗುತ್ತದೆ. ದಿನವೊಂದಕ್ಕೆ ಪಾಳಿ ಪದ್ಧತಿಯಲ್ಲಿ ಮೂರು ತರಗತಿಗಳು ನಡೆಯಲಿವೆ. ಜ‌.1ರಿಂದ ವಿದ್ಯಾಗಮ ಆರಂಭಕ್ಕೂ ಸರ್ಕಾರ ಒಕೆ ಎಂದಿದೆ.

6ರಿಂದ 9ನೇ ತರಗತಿವರೆಗೆ ಆರಂಭ  ಮಾಡಲಾಗುತ್ತದ. ಪ್ರತಿ ಶಾಲೆಯಲ್ಲಿರುವ ಶಿಕ್ಷಕರು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ತಂಡಗಳ ರಚನೆ ಮಾಡಿಕೊಳ್ಳಲಾಗುವುದು.  ಆರೋಗ್ಯ, ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸು ಕಡ್ಡಾಯ ಪಾಲನೆ ಮಾಡಬೇಕು.  ವಿದ್ಯಾರ್ಥಿಗಳು ಮನೆಯಿಂದಲೇ ಕುಡಿಯುವ ನೀರು ತರಬೇಕು 72 ಗಂಟೆ ಮುಂಚಿತವಾಗಿ ನೆಗೆಟಿವ್ ರಿಪೋರ್ಟ್ ಕೊಡಬೇಕು ಶಾಲೆಗೆ ಹಾಜರಾಗದ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ಮುಂದುವರಿಕೆ ಎಲ್ಲ ನಿಯಮಗಳು ಅನ್ವಯವಾಗಲಿದೆ.