Asianet Suvarna News Asianet Suvarna News

Vijayapura: ಎರಡು ಬಾರಿ ಯುಪಿಎಸ್ಸಿ ಪರೀಕ್ಷೆ ಬರೆದ ಗುಮ್ಮಟನಗರಿ ಯುವತಿ!

ಒಂದೇ ಬಾರಿ ಯುಪಿಎಸ್‌ಸಿ ಪರೀಕ್ಷೆ ಪಾಸಾಗೋಕೆ ಇನ್ನಿಲ್ಲದ ಕಷ್ಟ ಪಡೆಬೇಕಾಗುತ್ತೆ. ಒಂದೇ ಸಾರಿ ಪಾಸ್ ಆಗೋದ್ರಲ್ಲಿ ಸಾಕಪ್ಪ ಸಾಕು ಅಂತಾರೆ. ಆದ್ರೆ ವಿಜಯಪುರದ ಯುವತಿ ಮಾತ್ರ ಎರೆಡು ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದಾರೆ. 

Savita Gottyal From Vijayapura Grabs 479th Rank In Upsc Exam gvd
Author
Bangalore, First Published May 31, 2022, 1:12 AM IST

ವಿಜಯಪುರ (ಮೇ.31): ಒಂದೇ ಬಾರಿ ಯುಪಿಎಸ್‌ಸಿ ಪರೀಕ್ಷೆ ಪಾಸಾಗೋಕೆ ಇನ್ನಿಲ್ಲದ ಕಷ್ಟ ಪಡೆಬೇಕಾಗುತ್ತೆ. ಒಂದೇ ಸಾರಿ ಪಾಸ್ ಆಗೋದ್ರಲ್ಲಿ ಸಾಕಪ್ಪ ಸಾಕು ಅಂತಾರೆ. ಆದ್ರೆ ವಿಜಯಪುರದ ಯುವತಿ ಮಾತ್ರ ಎರೆಡು ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದಾರೆ. ಈ ಬಾರಿ ತಮ್ಮ ರ್ಯಾಂಕನ್ನು ಸುಧಾರಿಸಿಕೊಂಡಿದ್ದಾರೆ

479ನೇ ರ್ಯಾಂಕ್ ಪಡೆದ ಸವಿತಾ ಗೋಟ್ಯಾಳ: 2021ರ ಯುಪಿಎಸ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ನಗರದ ಯುವತಿ ಸವಿತಾ ಸಿದ್ದಪ್ಪ ಗೋಟ್ಯಾಳ 479  ರ್ಯಾಂಕ್ ಪಡೆದಿದ್ದಾಳೆ. ಈ ಯುವತಿಯ ಮನೆಯಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗಿದ್ದು, ತಂದೆ - ತಾಯಿ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.

ದೃಷ್ಟಿ ವಿಶೇಷ ಚೇತನೆ UPSC ಟಾಪರ್, Mysuru ಯುವತಿ ಸಾಧನೆ

ಎರೆಡು ಬಾರಿ ಯುಪಿಎಸ್ಸಿ ಪರೀಕ್ಷೆ ಬರೆದ ಸವಿತಾ: ನಗರದ ಸಿದ್ದಾರೂಢ ನಗರದ ಸವಿತಾ ಸಿದ್ದಪ್ಪ ಗೋಟ್ಯಾಳ ಸದ್ಯ ಬೆಂಗಳೂರಿನದ್ದು, 2019 ರ‌ಲ್ಲಿಯೂ ಯುಪಿಎಸ್ಸಿ ಪರೀಕ್ಷೆ ಬರೆದಿದ್ದ ಸವಿತಾ, ಈಗ ತಮ್ಮ ಫಲಿತಾಂಶವನ್ನು ಸುಧಾರಿಸಿಕೊಂಡಿದ್ದಾರೆ. 2019 ರ ಯುಪಿಎಸ್ಸಿ ಪರೀಕ್ಷೆಯಲ್ಲಿ 626 ನೇ ರ್ಯಾಂಕ್ ಪಡೆದಿದ್ದ ಸವಿತಾ ಸದ್ಯ ಬೆಂಗಳೂರಿನಲ್ಲಿ ಸಿಸಿಓ ಕಚೇರಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಹಿರಿಯ ಸಹೋದರಿ ಕೂಡ ಐಪಿಎಸ್ ಆಫೀಸರ್: 2019 ರ ಯುಪಿಎಸ್ಸಿಯಲ್ಲಿ 626 ನೇ ರ್ಯಾಂಕ್ ಪಡೆದು ಕೇಂದ್ರ ಸರ್ಕಾರದ ಇಂಡಿಯನ್ ಪಿ ಆ್ಯಂಡ ಟಿ ಅಕೌಂಟ್ಸ್ ಆ್ಯಂಡ್ ಫೈನಾನ್ಸ್ ಸರ್ವೀಸ್ ಸೇವೆಗೆ ತರಬೇತಿ ಪಡೆಯುತ್ತಿದ್ದಾರೆ. ಸವಿತಾ ಹಿರಿಯ ಸಹೋದರಿ ಅಶ್ವಿನಿ ಗೋಟ್ಯಾಳ  ಐಪಿಎಸ್ ಅಧಿಕಾರಿಯಾಗಿದ್ದು, ಪಂಜಾಬಿನ‌ ಚಂಡಿಗಡದಲ್ಲಿ ಎಸ್ ಎಸ್ ಪಿ ಗ್ರೇಡ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಕಿರಿಯ ಸಹೋದರ ಕಾರ್ತಿಕ ಯುಪಿಎಸ್ಸಿ ಪರೀಕ್ಷೆಗಾಗಿ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.

UPSCಯಲ್ಲಿ 92ನೇ ರ‍್ಯಾಂಕ್‌ ಪಡೆದ‌ ವೈದ್ಯಾಧಿಕಾರಿ Chitradurgaದ ಕುವರ!

ತರಬೇತಿ ಪಡೆದಿದ್ದ ಸವಿತಾ ಗೋಟ್ಯಾಳ್: ಸವಿತಾ ಗೋಟ್ಯಾಳ ಬೆಂಗಳೂರಿನ ಪಿಇಎಸ್ ಕಾಲೇಜಿನಲ್ಲಿ ಬಿಇ ಕಂಪ್ಯೂಟರ್ ಸೈನ್ಸ್ ಪದವಿಧರೆಯಾಗಿದ್ದು, ದೆಹಲಿಯ ವಾಜಿರಾಮ್ ಆ್ಯಂಡ ರವಿ ತರಬೇತಿ ಕೇಂದ್ರದಲ್ಲಿ ಯುಪಿಎಸ್ಸಿ ಪರೀಕ್ಷೆಗೆ ತರಬೇತಿ ಪಡೆದಿದ್ದಾರೆ.

Rank ಪಡೆದ ರಾಜ್ಯದ  24 ಅಭ್ಯರ್ಥಿಗಳ ಪಟ್ಟಿ ಈ ಕೆಳಗಿನಂತಿದೆ
1.ಅವಿನಾಶ್  - ದಾವಣಗೆರೆ (31ನೇ Rank)
2.ಬೆನಕ ಪ್ರಸಾದ್ - ಚಿತ್ರದುರ್ಗ (92ನೇ Rank)
3.ನಿಖೀಲ್ ಬಸವರಾಜ್ ಪಾಟೀಲ್  (139ನೇ Rank)
4.ವಿನಯ್ ಕುಮಾರ್ ಗದ್ಗೆ (151ನೇ Rank)
5.ಚಿತ್ತರಂಜನ್  (155ನೇ Rank)
6.ಮನೋಜ್ ಕುಮಾರ್  (157ನೇ Rank)
7.ಅಪೂರ್ವ ಬಸೂರ್ (191ನೇ Rank)
8.ನಿತ್ಯಾ ಆರ್ (207ನೇ Rank)
9.ಮಂಜನಾಥ್ ಆರ್ (219ನೇ Rank)
10.ರಾಜೇಶ್ ಪೊನ್ನಪ್ಪ (222ನೇ Rank)
11.ಸಾಹಿತ್ಯ ಅಲದಕಟ್ಟಿ (250ನೇ Rank)
12.ಕಲ್ಪಶ್ರೀ ಕೆ. ಆರ್ (291ನೇ Rank)
13.ಅರುಣ್ ಎಂ (308ನೇ Rank)
14.ದೀಪಕ್ ರಾಮಚಂದ್ರ ಸೇಠ್ (311ನೇ Rank)
15.ಹರ್ಷವರ್ಧನ್ ಬಿ.ಜೆ (318ನೇ Rank)
16.ವಿನಯ್ ಕುಮಾರ್ ಡಿ ಹೆಚ್ (352ನೇ Rank)
17.ಮೇಘನಾ ಕೆ.ಟಿ (425ನೇ Rank)
18.ಅವಿನಂದನ್ ಬಿಎಂ (455ನೇ Rank)
19.ಸವಿತಾ ಗೋಯಲ್  (479ನೇ Rank)
20.ಮಹಮ್ಮದ್ ಸಿದ್ದಿಕ್ ಶರೀಫ್  (516ನೇ Rank)
21.ಚೇತನ್ ಕೆ (532ನೇ Rank)
22.ಶುಭಂ ಪ್ರಕಾಶ್ (568ನೇ Rank)
23.ಪ್ರಶಾಂತ್ ಕುಮಾರ್ ಬಿ ಒ (641ನೇ Rank)
24.ಸುಚಿನ್ ಕೆ ವಿ (682ನೇ Rank)

Follow Us:
Download App:
  • android
  • ios