ಬೆಂಗಳೂರು(ಮಾ.20):  ಗುಣಮಟ್ಟದ ಶಿಕ್ಷಣದಿಂದ ರೇವಾ ವಿಶ್ವವಿದ್ಯಾಲಯವು ದೇಶದ ಟಾಪ್‌ 10 ಖಾಸಗಿ ವಿವಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇದಕ್ಕಾಗಿ ವಿವಿಗೆ ಶ್ರೇಯಾಂಕಗಳು, ಪ್ರಶಸ್ತಿ ಹಾಗೂ ಪುರಸ್ಕಾರಗಳು ಸಂದಿವೆ ಎಂದು ವಿವಿ ಕುಲಾಧಿಪತಿ ಡಾ. ಪಿ.ಶ್ಯಾಮರಾಜು ಸಂತಸ ವ್ಯಕ್ತಪಡಿಸಿದ್ದಾರೆ.

ವಿವಿಯ ಕುವೆಂಪು ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ರೇವಾ ಸ್ಕೂಲ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಮ್ಯಾನೇಜ್‌ಮೆಂಟ್‌ ಅಧ್ಯಯನ’ ವಿಭಾಗದ ಹಿರಿಯ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಹಾಗೂ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಖಾಸಗಿ ಶಾಲೆಗಳ ಮೇಲೆ ಪರಮಾಧಿಕಾರಾಸ್ತ್ರ ಎಚ್ಚರಿಕೆ!

ಶೈಕ್ಷಣಿಕ ರಂಗದಲ್ಲಿ ವಿವಿಯು ಅಳವಡಿಸಿಕೊಂಡಿರುವ ಇಚ್ಛಾಶಕ್ತಿ, ಧೈರ್ಯ, ಬದ್ಧತೆ, ಉತ್ಸಾಹ, ಸಮಯೋಚಿತ ತೀರ್ಪುಗಳು ವಿವಿಯನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಸಮಗ್ರ ಶಿಕ್ಷಣ ವಿಧಾನ, ಉದ್ಯಮ ಸಂಬಂಧಿತ ಪಠ್ಯಕ್ರಮ, ಡಿಜಿಟಲ್‌ ತರಗತಿ ಕೊಠಡಿಗಳು, ವ್ಯಾಪಾರ ಪ್ರಯೋಗಾಲಯ, ಕೌಶಲ್ಯಾಧಾರಿತ ಶಿಕ್ಷಣ ಮತ್ತು ಆಧುನಿಕ ತಂತ್ರಜ್ಞಾನ ಬೋಧನೆಯನ್ನು ಅಳವಡಿಸಿಕೊಂಡಿರುವುದು ವಿದ್ಯಾರ್ಥಿಗಳ ಸಾಧನೆಗೆ ದಾರಿಮಾಡಿಕೊಟ್ಟಿದೆ ಎಂದರು.

ಇದೇ ವೇಳೆ 2004ರಿಂದ ಈ ವರೆಗೆ ಸಂಜಯನಗರ ಕ್ಯಾಂಪಸ್‌ನಲ್ಲಿ ವ್ಯಾಸಂಗ ಮಾಡಿ ಉತ್ತಮ ಸಾಧನೆ ಮಾಡಿರುವ ಕಾಮರ್ಸ್‌ ಆ್ಯಂಡ್‌ ಮ್ಯಾನೇಜ್‌ಮೆಂಟ್‌ ಅಧ್ಯಯನ ವಿಭಾಗದ ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆ, ನವೋದ್ಯಮ, ಮಾರುಕಟ್ಟೆ, ಹಣಕಾಸು, ಸಂಶೋಧನೆ ಸೇರಿದಂತೆ ವಿವಿಧ ವಿಭಾಗಗಳ ಹಿರಿಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕುಲಪತಿ ಡಾ. ಎನ್‌.ಧನಂಜಯ, ಕುಲಸಚಿವ ಡಾ. ರಮೇಶ್‌, ವಿಭಾಗದ ಮುಖ್ಯಸ್ಥರಾದ ಡಾ. ಶುಭಾ ಸೇರಿದಂತೆ ಬೋಧಕ ಸಿಬ್ಬಂದಿ ಪಾಲ್ಗೊಂಡಿದ್ದರು.