Asianet Suvarna News Asianet Suvarna News

Reliance Foundation scholarship: ವಿದ್ಯಾರ್ಥಿ ವೇತನಕ್ಕೆ Reliance ಫೌಂಡೇಶನ್ ಅರ್ಜಿ ಆಹ್ವಾನ, UGಗೆ 4ಲಕ್ಷ, PGಗೆ 6ಲಕ್ಷ ರೂ

  • ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಿದ ರಿಲಾಯನ್ಸ್ ಫೌಂಡೇಶನ್
  •  ದೇಶದ 100 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಿಗಲಿದೆ ವಿದ್ಯಾರ್ಥಿವೇತನ
  • ಪದವಿ ವಿದ್ಯಾರ್ಥಿಗಳಿಗೆ 4 ಲಕ್ಷ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 6 ಲಕ್ಷ ರೂ ವಿದ್ಯಾರ್ಥಿ ವೇತನ 
Reliance Foundation offers scholarships to support brightest students in India gow
Author
Bengaluru, First Published Dec 22, 2021, 7:39 PM IST

ನವದೆಹಲಿ(ಡಿ.22): ರಿಲಾಯನ್ಸ್ ಫೌಂಡೇಶನ್ ತನ್ನ  ವಿದ್ಯಾರ್ಥಿವೇತನ ಕಾರ್ಯಕ್ರಮಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಸಮಾಜದ ಒಳಿತಿಗಾಗಿ ತಂತ್ರಜ್ಞಾನ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ದೇಶದ 100 ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಈ ವಿದ್ಯಾರ್ಥಿವೇತನವನ್ನು ನೀಡುತ್ತಿದೆ.  ಮೊದಲ ವರ್ಷದ  60 ಮಂದಿ ಪದವಿ ವಿದ್ಯಾರ್ಥಿಗಳಿಗೆ ತಲಾ 4 ಲಕ್ಷ ರೂಪಾಯಿ ಮತ್ತು 40 ಮಂದಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ತಲಾ 6 ಲಕ್ಷ ರೂಪಾಯಿ ವಿದ್ಯಾರ್ಥಿ ವೇತನ ನೀಡಲಾಗುತ್ತದೆ ಎಂದು ರಿಲಾಯನ್ಸ್ ಫೌಂಡೇಶನ್  ಮಾಹಿತಿ ನೀಡಿದೆ. ರಿಲಾಯನ್ಸ್ ಫೌಂಡೇಶನ್ ವಿದ್ಯಾರ್ಥಿವೇತನದ ಕುರಿತು ಇನ್ನಷ್ಟು ಮಾಹಿತಿ ಪಡೆದುಕೊಳ್ಳಲು ಅಧಿಕೃತ ವೆಬ್‌ ಸೈಟ್  https://www.scholarships.reliancefoundation.org/ ಗೆ ಭೇಟಿ ನೀಡಬಹುದು.

ದೇಶದಾದ್ಯಂತ ಕೃತಕ ಬುದ್ಧಿಮತ್ತೆ (Artificial Intelligence),ಕಂಪ್ಯೂಟರ್ ಸೈನ್ಸ್, ಗಣಿತ ಮತ್ತು ಕಂಪ್ಯೂಟಿಂಗ್ (Computing), ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್‌ನಲ್ಲಿ ಪದವಿಯಲ್ಲಿ ಅಭ್ಯಾಸ ಮಾಡುತ್ತಿರುವ ಮೊದಲ ವರ್ಷದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅರ್ಜಿ ಸಲ್ಲಿಸಲು ಯಾವುದೇ ಪ್ರವೇಶ ಶುಲ್ಕವಿಲ್ಲ. 

ಸಾಮಾಜಿಕ ಒಳಿತಿಗಾಗಿ ತಂತ್ರಜ್ಞಾನದ ಅಭಿವೃದ್ಧಿಗೆ ವಿದ್ಯಾರ್ಥಿಗಳನ್ನು ಬೆಂಬಲಿಸುವ ಗುರಿಯೊಂದಿಗೆ ರಿಲಾಯನ್ಸ್ ಫೌಂಡೇಷನ್ ನೀಡುತ್ತಿರುವ ಅತಿದೊಡ್ಡ ಮೊತ್ತದ ವಿದ್ಯಾರ್ಥಿವೇತನಗಳಲ್ಲಿ ಒಂದಾಗಿದೆ. ವಿದ್ಯಾರ್ಥಿಗಳು , ಹೆಚ್ಚುವರಿಯಾಗಿ, ಪ್ರಮುಖ ಜಾಗತಿಕ ತಜ್ಞರೊಂದಿಗೆ ಸಂವಹನ ನಡೆಸಲು, ಮಾರ್ಗದರ್ಶನ ಪಡೆಯಲು, ಇಂಟರ್ನ್​​ಷಿಪ್ ನಿರ್ವಹಿಸಲು ಅವಕಾಶ ಸಿಗುತ್ತದೆ. 

Farmers Child Scholarship : ಜಿಲ್ಲೆಯಲ್ಲಿ 1,152 ಮಂದಿಗೆ ರೈತ ವಿದ್ಯಾನಿಧಿ ಸಿಕ್ಕಿಲ್ಲ

 2020-21ನೇ ಸಾಲಿನಲ್ಲಿ ಮೊದಲ ಬಾರಿಗೆ 76 ವಿದ್ಯಾರ್ಥಿಗಳಿಗೆ ರಿಲಾಯನ್ಸ್ ಫೌಂಡೇಶನ್ ವಿದ್ಯಾರ್ಥಿ ವೇತನ ನೀಡಿತ್ತು.  ರಿಲಾಯನ್ಸ್ ಫೌಂಡೇಶನ್ ವಿದ್ಯಾರ್ಥಿ ವೇತನ ಪಡೆದ ಪ್ರತಿಭಾನ್ವಿತರು ಭಾರತದಾದ್ಯಂತ 14 ರಾಜ್ಯಗಳನ್ನು ಪ್ರತಿನಿಧಿಸುವ ದೇಶದ 21 ಉನ್ನತ ವಿಜ್ಞಾನ ಮತ್ತು ಇಂಜಿನಿಯರಿಂಗ್ ಸಂಸ್ಥೆಗಳಲ್ಲಿ ಆಯ್ದ ಅರ್ಹ ಪದವಿಗಳಲ್ಲಿ ಪೂರ್ಣಾವಧಿಗೆ ದಾಖಲಾಗಿದ್ದಾರೆ. ಈ ಮೊದಲ ಪ್ರತಿಭಾನ್ವಿತರು ಈಗಾಗಲೇ ಉದ್ಯಮದ ತಜ್ಞರೊಂದಿಗೆ ವೃತ್ತಿಪರವಾಗಿ ಹಲವಾರು ಸಮಾವೇಶಗಳಲ್ಲಿ ಭಾಗವಹಿಸಿದ್ದಾರೆ.

GATE EXAM SCHEDULE 2022: ಇಂಜಿನಿಯರಿಂಗ್ GATE 2022ರ ಪರೀಕ್ಷೆಯ ದಿನಾಂಕ ಪ್ರಕಟ

ರಿಲಾಯನ್ಸ್ ಫೌಂಡೇಶನ್ ವಿದ್ಯಾರ್ಥಿ ವೇತನ ನೀಡಲು ಕಠಿಣ ಮತ್ತು ಸ್ಪರ್ಧಾತ್ಮಕ ಆಯ್ಕೆ ಪ್ರಕ್ರಿಯೆಯ ಮೂಲಕ ಭಾರತದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಆಯ್ಕೆ ಮಾಡುತ್ತದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಪ್ರಮುಖ ಭಾರತೀಯ ಮತ್ತು ಅಂತರಾಷ್ಟ್ರೀಯ ತಜ್ಞರ ಸಮಿತಿಯೊಂದಿಗೆ ಸಂದರ್ಶನಗಳನ್ನು ನಡೆಸಿದ ನಂತರ ಅರ್ಹತೆಯ ಆಧಾರದ ಮೇಲೆ ವಿದ್ಯಾರ್ಥಿ ವೇತನಕ್ಕೆ ಆಯ್ಕೆ ಮಾಡಲಾಗುತ್ತದೆ. ಎಲ್ಲಾ ಸಾಮಾಜಿಕ- ಆರ್ಥಿಕ ಹಿನ್ನೆಲೆಯ ವಿದ್ಯಾರ್ಥಿಗಳನ್ನು ಅರ್ಜಿ ಸಲ್ಲಿಸಲು ಪ್ರೋತ್ಸಾಹಿಸಲಾಗುತ್ತದೆ.

NEET Counselling 2021: ನೀಟ್ ಕೌನ್ಸೆಲಿಂಗ್ ನಲ್ಲಿ ಮಹತ್ವದ ಬದಲಾವಣೆ

ಬಾಲ್ಯದಿಂದ ಉನ್ನತ ಅಧ್ಯಯನದವರೆಗೆ ವಿಶ್ವ ದರ್ಜೆಯ ಶಿಕ್ಷಣ ಅಭಿವೃದ್ಧಿಪಡಿಸಲು ಮತ್ತು ಸುಧಾರಿಸಲು ರಿಲಾಯನ್ಸ್ ಫೌಂಡೇಶನ್ ಶ್ರಮಿಸುತ್ತಿದೆ.  ರಿಲಾಯನ್ಸ್  ಫೌಂಡೇಶನ್ ಶಾಲೆಗಳು ವರ್ಷಕ್ಕೆ 14,000 ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತವೆ. ವಿದ್ಯಾರ್ಥಿವೇತನವನ್ನು ಅರ್ಹತೆಯ ಆಧಾರದ ಮೇಲೆ ನೀಡಲಾಗುವುದು ಮತ್ತು ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಅಭ್ಯರ್ಥಿಗಳನ್ನು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಪ್ರೋತ್ಸಾಹಿಸಲಾಗುತ್ತದೆ.

ಸಂಸ್ಥಾಪಕಿ ನೀತಾ ಅಂಬಾನಿ ನೇತೃತ್ವದಲ್ಲಿ ನಡೆಯುತ್ತಿರುವ ರಿಲಾಯನ್ಸ್ ಫೌಂಡೇಶನ್,  ಬಾಲ್ಯದಿಂದ ಉನ್ನತ ಅಧ್ಯಯನದವರೆಗೆ ವಿಶ್ವ ದರ್ಜೆಯ ಶಿಕ್ಷಣ ಅಭಿವೃದ್ಧಿಪಡಿಸುವ ಮತ್ತು ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ ಎಂದು ಹೇಳಿದೆ. ರಿಲಾಯನ್ಸ್ ಫೌಂಡೇಶನ್ ಶಾಲೆಗಳು ವರ್ಷಕ್ಕೆ 14,000 ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತವೆ.  1996 ರಿಂದ ಧೀರೂಭಾಯಿ ಅಂಬಾನಿ ಸ್ಕಾಲರ್‌ಶಿಪ್‌ಗಳು 12,500 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಒದಗಿಸಿವೆ.

Follow Us:
Download App:
  • android
  • ios