ಸಾಂಕ್ರಾಮಿಕ ಕೆಂಗಣ್ಣು ಸಮಸ್ಯೆ: 5 ದಿನ ಶಾಲೆಗೆ ಬರದಂತೆ ದಕ್ಷಿಣ ಕನ್ನಡ ಶಿಕ್ಷಣ ಇಲಾಖೆ ಸೂಚನೆ
ದಕ್ಷಿಣ ಕನ್ನಡ ಜಿಲ್ಲೆಯ ಶೇ.40ರಷ್ಟು ಮಕ್ಕಳು ಕೆಂಗಣ್ಣು ಸಮಸ್ಯೆ ಗೆ ಗುರಿಯಾಗಿದ್ದು, 5 ದಿನ ಶಾಲೆಗೆ ಬರದಂತೆ ಶಿಕ್ಷಣ ಇಲಾಖೆ ಸೂಚನೆ ಸೂಚಿಸಿದೆ. ಜಿಲ್ಲೆಯಲ್ಲಿ ಕಳೆದ ಮೂರು ವಾರಗಳಲ್ಲಿ 1,440 ಮಂದಿಗೆ ಕೆಂಗಣ್ಣು ಸೋಂಕು ಹರಡಿದೆ.
ಮಂಗಳೂರು (ನ.15): ದ.ಕ.ಜಿಲ್ಲೆಯಲ್ಲಿ ಶಾಲಾ ಮಕ್ಕಳಲ್ಲಿ ಕೆಂಗಣ್ಣು (ಕೆಂಪು ಕಣ್ಣು) ಸಾಂಕ್ರಾಮಿಕ ರೋಗ ಹರಡುತ್ತಿರುವ ಬಗ್ಗೆ ಜಿಲ್ಲಾ ಶಿಕ್ಷಣ ಇಲಾಖೆ ಜ್ಞಾಪನಾ ಪತ್ರ ಹೊರಡಿಸಿದ್ದು, ಕಾಯಿಲೆಗೆ ಒಳಗಾದ ಮಕ್ಕಳು ಐದು ದಿನ ಶಾಲೆಗೆ ಬರದಂತೆ ಸೂಚಿಸಿದೆ. ಇದೊಂದು ಸಾಂಕ್ರಾಮಿಕ ರೋಗವಾದ ಕಾರಣ ಶಾಲೆಗೆ ಬಂದರೆ ಉಳಿದ ಮಕ್ಕಳಿಗೆ ಶೀಘ್ರ ಹರಡುತ್ತದೆ. ಆದ್ದರಿಂದ ಅಂತಹ ಮಕ್ಕಳು ಐದು ದಿನದ ಮಟ್ಟಿಗೆ ಶಾಲೆಗೆ ಬರಬಾರದು ಹಾಗೂ ಮಕ್ಕಳನ್ನು ಆ ದಿನಗಳಲ್ಲಿ ಶಾಲೆಗೆ ಕಳುಹಿಸದಂತೆ ಪೋಷಕರು ಮನವರಿಕೆ ಮಾಡಬೇಕು ಎಂದು ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶೇ.40 ಮಕ್ಕಳಿಗೆ ಸೋಂಕು: ದ.ಕ.ಜಿಲ್ಲೆಯಲ್ಲಿ ಕಳೆದ ಮೂರು ವಾರಗಳಲ್ಲಿ 1,440 ಮಂದಿಗೆ ಕೆಂಗಣ್ಣು ಸೋಂಕು ಹರಡಿದೆ. ಇದರಲ್ಲಿ ಶೇ.40ರಷ್ಟುಸೋಂಕು ಮಕ್ಕಳಲ್ಲಿ ಕಾಡಿದೆ. ಜಿಲ್ಲೆಯಲ್ಲಿ ಬಂಟ್ವಾಳದಲ್ಲಿ ಗರಿಷ್ಠ 500 ಮಂದಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮಂಗಳೂರು ಉತ್ತರದಲ್ಲಿ 356 ಮಂದಿಗೆ, ಪುತ್ತೂರಲ್ಲಿ 200 ಮಂದಿ, ಬೆಳ್ತಂಗಡಿ 150, ಸುಳ್ಯ 100 ಹಾಗೂ ಕಡಬದಲ್ಲಿ 26 ಮಂದಿಯಲ್ಲಿ ಕೆಂಗಣ್ಣು ಕಾಣಿಸಿದೆ. ಸುಬ್ರಹ್ಮಣ್ಯದಲ್ಲಿ ಇಲ್ಲಿವರೆಗೆ ಯಾವುದೇ ಕೆಂಗಣ್ಣು ಪತ್ತೆಯಾದ ಬಗ್ಗೆ ಆರೋಗ್ಯ ಇಲಾಖೆಯಲ್ಲಿ ವರದಿಯಾಗಿಲ್ಲ.
ಕೆಂಗಣ್ಣು ಭಯ ಬೇಡ: ಕೆಂಗಣ್ಣು ಪ್ರತಿ ವರ್ಷ ಅಲ್ಲಲ್ಲಿ ಕಾಣಿಸುತ್ತದೆ. ಅದು ವೈರಸ್ ರೋಗ. ಕಣ್ಣಿನ ಡ್ರಾಫ್ಸ್ ಮೂಲಕ ಕೆಂಗಣ್ಣು ಗುಣಪಡಿಸಬಹುದು. ಕೆಂಗಣ್ಣಿಗೆ ಗುರಿಯಾದವರು ಕಣ್ಣುಜ್ಜಬಾರದು. ವೈದ್ಯರ ಸಲಹೆ ಪಡೆದು ಕಣ್ಣಿಗೆ ಡ್ರಾಫ್ಸ್ ಹಾಕಿಸಿಕೊಳ್ಳಬೇಕು. ನಾಲ್ಕೈದು ದಿನಗಳಲ್ಲಿ ಕಡಿಮೆಯಾಗುತ್ತದೆ. ಇದು ಹರಡದಂತೆ ಜಾಗ್ರತೆ ವಹಿಸಬೇಕಾದ್ದು ಮುಖ್ಯ. ಕಣ್ಣಿಗೆ ಗ್ಲಾಸ್ ಧರಿಸುವುದು ಅಥವಾ ಕೈ, ಮುಖ ಚೆನ್ನಾಗಿ ನೀರಿನಲ್ಲಿ ತೊಳೆದುಕೊಳ್ಳುವುದು ಅತ್ಯಗತ್ಯ. ಕೆಂಗಣ್ಣಿಗೆ ಭೀತಿ ಪಡಬೇಕಾಗಿಲ್ಲ ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್.
ರಿಕ್ಷಾ ಚಾಲಕರು, ಕಾರ್ಮಿಕರ ಮಕ್ಕಳಿಗೆ ವಿದ್ಯಾನಿಧಿ: ಸುನಿಲ್
ಕಾರ್ಕಳ: ಬಡ ಮಕ್ಕಳ ಶಿಕ್ಷಣಕ್ಕೆ ನೀಡುತ್ತಿದ್ದ ವಿದ್ಯಾನಿಧಿ ಯೋಜನೆಯನ್ನು ಇನ್ನು ಮುಂದೆ ಮುಂದೆ ರಿಕ್ಷಾ ಚಾಲಕರ ಮಕ್ಕಳು, ಕಾರ್ಮಿಕರ ಮಕ್ಕಳಿಗೆ ನೀಡಲು ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ ಎಂದು ಇಂಧನ ಹಾಗೂ ಕನ್ನಡ ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಹೇಳಿದರು. ಅವರು ಹೆಬ್ರಿ ತಾಲೂಕು ಕಚೇರಿಯಲ್ಲಿ ಶನಿವಾರ 94ಸಿ ಹಕ್ಕುಪತ್ರ ಹಾಗೂ ವಿವಿಧ ಸವಲತ್ತುಗಳನ್ನು ವಿತರಿಸಿ ಮಾತನಾಡಿದರು.
ವಿದ್ಯಾನಿಧಿ ಯೋಜನೆಯಿಂದ ರೈತರು, ಮೀನುಗಾರರು ಸೇರಿದಂತೆ ಬಡ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿದೆ. ಆ ಮೂಲಕ ಸರ್ಕಾರವು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಸಚಿವರು ಹೇಳಿದರು.
Home Medicine: ಕಣ್ಣಿನ ಸೋಂಕು ಕಡಿಮೆ ಮಾಡಲು ಮನೆಯಲ್ಲೆ ಇದೆ ಔಷಧ!
ಹಿಂದಿನ ಕಾಂಗ್ರೆಸ್ ಸರ್ಕಾರ ಮಾಡಿದ ತಪ್ಪಿನಿಂದಾಗಿಯೇ ಡೀಮ್ಡ ಫಾರೆಸ್ವ್ ಸಮಸ್ಯೆ ಉದ್ಭವಿಸಿದ್ದು, ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಸುಪ್ರೀಂ ಕೋರ್ಟಿಗೆ ಮನವಿ ಮಾಡಿ ಇತ್ಯರ್ಥ ಪಡಿಸಿದೆ. ಆ ಮೂಲಕ ಸರ್ಕಾರಿ ಜಮೀನಿನಲ್ಲಿ ಮನೆಕಟ್ಟಿಕುಳಿತ ಫಲಾನುಭವಿಗಳಿಗೆ ಹಕ್ಕು ಪತ್ರ ದೊರೆಯಲಿದೆ. ರಾಜ್ಯದಲ್ಲಿ 9 ಲಕ್ಷ ಹೆಕ್ಟೇರ್ ಡೀಮ್ಡ… ಫಾರೆಸ್ವ್‌ನಿಂದ 6 ಲಕ್ಷ ಹೆಕ್ಟೇರ್ ಜಮೀನು ಕೈಬಿಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ 32 ಸಾವಿರ ಹೆಕ್ಟೇರ್ ಜಮೀನು ಡೀಮ್ಡ ಫಾರೆಸ್ವ್‌ನಿಂದ ಮುಕ್ತಿ ದೊರಕಿದೆ ಎಂದು ಸಚಿವರು ಹೇಳಿದರು.
ಕರಾವಳಿ ಭಾಗದಲ್ಲಿ ಕೆಂಗಣ್ಣು ರೋಗದ ಆತಂಕ: ಶಾಲಾ ಮಕ್ಕಳಲ್ಲಿ ಹೆಚ್ಚಿದ ಪ್ರಕರಣ
ಹೆಬ್ರಿ ತಹಸೀಲ್ದಾರ್ ಪುರಂದರ್ ಕೆ., ಹೆಬ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲತಿ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು. ಶಿಕ್ಷಕ ಮಂಜುನಾಥ ಕುಲಾಲ್ ನಿರೂಪಿಸಿದರು.