SSLC: ಇನ್ನೂ ಮಾರ್ಕ್ಸ್ ಬರಲೇಬೇಕೆಂದು ಮರು ಮೌಲ್ಯಮಾಪನ ಹಾಕಿದ್ದ ವಿದ್ಯಾರ್ಥಿನಿ ರಾಜ್ಯಕ್ಕೆ ಫಸ್ಟ್
ಎಸ್‌ಎಸ್‌ಎಲ್‌ಸಿ ಮರು ಮೌಲ್ಯಮಾಪನದ ಮೂಲಕ ಬಂದ ಹೆಚ್ಚುವರಿ ಅಂಕಗಳಿಂದ ವಿದ್ಯಾರ್ಥಿನಿಯೋರ್ವಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ರಾಮನಗರ, (ಸೆ.06): ಎಸ್‌ಎಸ್‌ಎಲ್‌ಸಿ ಮರು ಮೌಲ್ಯಮಾಪನದಲ್ಲಿ 625ಕ್ಕೆ 625 ಅಂಕ ಪಡೆದ ರಾಮನಗರ ಜಿಲ್ಲೆಯ ಮಾಗಡಿ ವಿದ್ಯಾರ್ಥಿನಿ ಪ್ರಜ್ಞಾ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ರಾಮನಗರ ಜಿಲ್ಲೆಯ ಮಾಗಡಿ ಪಟ್ಟದ ವಾಸವಿ ಶಾಲೆಯ ವಿದ್ಯಾರ್ಥಿನಿ ಪ್ರಜ್ಞಾ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಬಂದಾಗ 620 ಅಂಕಗಳಿಸಿದ್ದಳು.
ಮರು ಮೌಲ್ಯಮಾಪನ ಮಾಡ್ಸಿ ರಾಜ್ಯಕ್ಕೆ ಸೆಕೆಂಡ್ ಬಂದ SSLC ವಿದ್ಯಾರ್ಥಿನಿ: ಇದು ಕಾನ್ಫಿಡೆಂಟ್ ಅಂದ್ರೆ
620 ಅಂಕ ಬಂದಾಗ ಅನುಮಾನಗೊಂಡು ವಿದ್ಯಾರ್ಥಿನಿ ಪ್ರಜ್ಞಾ, ಇನ್ನು ಹೆಚ್ಚು ಅಂಕಗಳು ಬಂದೆ ಬರುತ್ತವೆ ಎಂದು ಕಾನ್ಫಿಡೆಂಟ್ ಮೇಲೆ ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದಳು.ಅದರಂತೆ ಪ್ರಜ್ಞಾಗೆ ಮರುಮೌಲ್ಯ ಮಾಪನದಲ್ಲಿ 5 ಹೆಚ್ಚುವರಿ ಅಂಕಗಳು ಬಂದಿವೆ.
5 ಅಂಕ ಪಡೆಯುವ ಮೂಲಕ ಪ್ರಜ್ಞಾ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದ್ದಾಳೆ. 2019-20ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಈಗಾಗಲೇ ಪ್ರಕಟಗೊಂಡಿದ್ದು, ಈ ಬಾರಿ 6 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದರು. ಇದೀಗ ಇವರ ಗ್ರೂಪ್‌ಗೆ ರಾಮನಗರದ ಪ್ರಜ್ಞಾ ಕೂಡ ಸೇರಿಕೊಂಡಿದ್ದಾಳೆ.
ಚಿತ್ರಗಳು: ಇವರೇ ಕರ್ನಾಟಕ SSLC ಟಾಪರ್ಸ್, 625ಕ್ಕೆ 625 ಅಂಕ ಪಡೆದ ಸಾಧಕರು