ಹೈಸ್ಕೂಲ್ ಹಾಗೂ ಪಿಯು ಆರಂಭಕ್ಕೆ ಸಿದ್ಧತೆ
- ಶಾಲೆ ತೆರೆಯಲು ರಾಜ್ಯ ಸರ್ಕಾರ ಸೂಚನೆ ನೀಡಿದ ಬೆನ್ನಲ್ಲೇ ಸಿದ್ಧತೆ
- ಬಿಬಿಎಂಪಿ ಪ್ರೌಢಶಾಲೆ ಮತ್ತು ಪಿಯು ಕಾಲೇಜುಗಳಲ್ಲಿ ಸೋಂಕು ನಿರೋಧ ರಾಸಾಯನಿಕ ಬಳಸಿ ಸ್ವಚ್ಛತೆ
ಬೆಂಗಳೂರು (ಆ.18): ಶಾಲೆ ತೆರೆಯಲು ರಾಜ್ಯ ಸರ್ಕಾರ ಸೂಚನೆ ನೀಡಿದ ಬೆನ್ನಲ್ಲೇ ಬಿಬಿಎಂಪಿ ಪ್ರೌಢಶಾಲೆ ಮತ್ತು ಪಿಯು ಕಾಲೇಜುಗಳಲ್ಲಿ ಸೋಂಕು ನಿರೋಧ ರಾಸಾಯನಿಕ ಬಳಸಿ ಸ್ವಚ್ಛತೆ ಕಾರ್ಯ ಆರಂಭಿಸಲಾಗಿದೆ.
ಆ.23ರಿಂದ 9 ರಂದ ದ್ವಿತೀಯ ಪಿಯುಸಿವರೆಗೆ ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿ ನಿಡಿದೆ. ಪ್ರಸ್ತುತ ಪಾಲಿಕೆ ವ್ಯಾಪ್ತಿಯಲ್ಲಿ 33 ಪ್ರೌಢಸಾಲೆಗಳು. 14 ಪಿಯು ಕಾಲೇಜುಗಳು ಇದ್ದು ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದರುವ ಎಸ್‌ಒಪಿಯಲ್ಲಿ ತಿಳಿಸಲಾಗಿರುವ ಮಾರ್ಗಸೂಚಿಗಳನ್ನು ಅನುಸರಿಸಿ ಶಾಲೆ ಅರಮಭಿಸಲು ಕ್ರಮ ಕೈಗೊಳ್ಳಲಾಗಿದೆ. ಶಾಲಾ ಕಾಲೆಜುಗಳ ಸ್ವಚ್ಛತೆ ಕಾರ್ಯ ಕೈಗೊಂಡಿದ್ದು ಕೊಟಡಿಗಳು ಡೆಸ್ಕ್ ಕೂಡ ರಾಸಾಯನಿಕ ಬಳಿಸಿ ಸ್ವಚ್ಛ ಮಾಡಲಾಗುತ್ತಿದೆ.
ಶಾಲೆ ಫುನಾರಂಭ, ಕಟ್ಟುನಿಟ್ಟಿನ ಮಾರ್ಗಸೂಚಿ ಹೊರಡಿಸಿದ ರಾಜ್ಯ ಸರ್ಕಾರ
ಇನ್ನು ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಲು ಕೋವಿಡ್ ನೆಗೆಟಿವ್ ವರದಿ ತರಬೇಕು. ಕೊತೆಗೆ ಪೋಷಕರಿಂದ ಶಾಲಾ ಕಾಲೇಜಿಗೆ ಹಾಜರಾಗಲು ಅನುಮತಿ ಪತ್ರ ತರಬೇಕು.
ಬಿಸಿನೀರು, ಸ್ಯಾನಿಟೈಸರ್, ಮಾಸ್ಕ್ ತಿಂಡಿ ಇದ್ಯಾದಿಗಳನ್ನು ವಿದ್ಯಾರ್ಥಿಗಳು ಮನೆಯಿಂದಲೇ ತರಬೇಕು.