ಬೆಂಗಳೂರು (ಅ. 10): ಕೊರೊನಾ ಹಿನ್ನಲೆಯಲ್ಲಿ ಮಕ್ಕಳ ಶೈಕ್ಷಣಿಕ ವರ್ಷ ಹಾಳಾಗಬಾರದೆಂದು ಸರ್ಕಾರ ವಿದ್ಯಾಗಮ ಎಂಬ ಯೋಜನೆ ಶುರು ಮಾಡಿ, ಮಕ್ಕಳಿಗೆ ಪಾಠ ಕೇಳುವ ವ್ಯವಸ್ಥೆ ಮಾಡಿದೆ. ಆದರೆ ಈ ಯೋಜನೆ ಮಕ್ಕಳು ಹಾಗೂ ಶಿಕ್ಷಕರಿಗೆ ಮುಳುವಾಗಿದೆ. 

ವಿದ್ಯಾಗಮ ಯೋಜನೆ ಆರಂಭವಾದಾಗಿನಿಂದ ಇಲ್ಲಿಯವರೆಗೆ 641 ಶಿಕ್ಷಕರಿಗೆ ಸೋಂಕು ತಗುಲಿದ್ದು ಅವರಲ್ಲಿ 46 ಮಂದಿ ಸಾವಿಗೀಡಾಗಿದ್ಧಾರೆ. ಜೊತೆಗೆ 406 ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ.  ಈಗ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರ ಕಡೆಯಿಂದ ಆಕ್ಷೇಪ ವ್ಯಕ್ತವಾಗಿದೆ. ನಮಗೆ ಇದು ಸುರಕ್ಷಿತವಲ್ಲ ಎಂದು ಹೇಳುತ್ತಿದ್ದಾರೆ. ಬಹಳಷ್ಟು ಕಡೆ ಶಾಲೆಯನ್ನು ಬಂದ್ ಮಾಡುವ ಪ್ರಯತ್ನ ಕೂಡಾ ನಡೆಯುತ್ತಿದೆ. ರಾಜ್ಯದ ಎಲ್ಲೆಲ್ಲಿ ಹೇಗೆಗಿದೆ ಸ್ಥಿತಿಗತಿಗಳು ಎಂದು ನೋಡೋಣ ಬನ್ನಿ..!

ಕೋಲಾರದಲ್ಲಿ ಕೊವಿಡ್‌ನಿಂದ ಕಾಲೇಜು ಉಪನ್ಯಾಸಕ ಸಾವು...