ಆನೇಕಲ್‌(ಫೆ.15): ಸರ್ಕಾರವು ಶುಲ್ಕ ನಿಗದಿ ಮಾಡುವಾಗ ಶಿಕ್ಷಣ ಸಂಘಗಳನ್ನು ಕಡೆಗಣಿಸಿ ಅವೈಜ್ಞಾನಿಕ ನಿರ್ಧಾರ ಕೈಕೊಂಡಿದ್ದು, ಇದರ ವಿರುದ್ಧ ಫೆ.23ರಂದು ನಡೆಸುವ ಧರಣಿಗೆ ಸಜ್ಜಾಗಿದ್ದೇವೆ. ಸಿಎಂ ಮನೆಗೆ ಪಾದಯಾತ್ರೆ ಮಾಡಲಿದ್ದೇವೆ ಎಂದು ಕ್ಯಾಮ್ಸ್‌ನ ಆನೇಕಲ್‌ ಘಟಕದ ರವಿಕುಮಾರ್‌ ತಿಳಿಸಿದ್ದಾರೆ.

ತಾಲೂಕಿನ ಹೀಲಲಿಗೆಯ ವಿಸ್ಮಯ ಕಾಲೇಜಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾವು ನೀಡಿದ ಹಲವು ಮನವಿಗಳನ್ನು ಶಿಕ್ಷಣ ಸಚಿವರು ಪರಿಗಣಿಸದೇ ನಮ್ಮನ್ನು ಕಡೆಗಣಿಸಿದ್ದು, ಅನಿವಾರ್ಯವಾಗಿ ನಾವು ಮುಖ್ಯಮಂತ್ರಿಯವರನ್ನು ಭೇಟಿ ಮಾಡಬೇಕಾದ ಪರಿಸ್ಥಿತಿ ಒದಗಿದೆ. ಜಾಣ ಕುರುಡು ಧೋರಣೆ ಅನುಸರಿಸುತ್ತಿರುವ ಸರ್ಕಾರದ ಕಣ್ಣು ಮತ್ತು ಕಿವಿಯನ್ನು ತೆರೆಸುವ ಪ್ರಾಮಾಣಿಕ ಪ್ರಯತ್ನ ಇದಾಗಿದೆ ಎಂದರು.

ಸ್ಫೂರ್ತಿಯ ಸೆಲೆ: ಕೋಚಿಂಗ್ ಪಡೆಯದೇ IAS ರ್ಯಾಂಕ್ ಗಳಿಸಿದ ಧೀರೆ

ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಎಂ.ಎನ್‌.ಸುರೇಶ್‌, ಅಜ್ಜಪ್ಪ, ವಿನಯ್‌, ಜ್ಯೋತಿಗೌಡ, ಎಲ್‌.ಎನ್‌.ಬಾಬು, ಆನಂದ್‌ಸಿಂಗ್‌, ರಾಜೇಶ್‌ ನಾಯಕ್‌, ಲಕ್ಷ್ಮಣ್‌, ಶ್ರೀರಾಂ, ಮುನಿರಾಜು, ಕೃಷ್ಣಪ್ಪ ಮತ್ತು ಸುರೇಶ್‌ ಭಾಗವಹಿಸಿದ್ದರು.