ಬೆಂಗಳೂರು  (ಜ. 27) ಖಾಸಗಿ ಶಾಲೆಗಳ ಶುಲ್ಕ ವಿಚಾರ ಬಹುದೊಡ್ಡ ಚರ್ಚೆಯಾಗುತ್ತಿರುವ ಹೊತ್ತಿನಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ತರಾತುರಿಯಲ್ಲಿ ಶುಲ್ಕ‌ ನಿಗದಿ ಮಾಡುವ ವಿಷಯವಲ್ಲ ಶಾಲೆ ಆರಂಭ ಮಾಡಿ ಎರಡು ವಾರ ಕಳೆದಿದೆ. ಖಾಸಗಿ ಶಾಲೆಗಳ ಶುಲ್ಕ ನಿಗದಿ ಮಾಡೋದು ಅಷ್ಟು ಸುಲಭದ ವಿಚಾರವಲ್ಲ ಈಗಾಗ್ಲೇ ಶಿಕ್ಷಣ ಇಲಾಖೆ ಆಯುಕ್ತರು ವಿಸ್ತೃತ ವರದಿ ನೀಡಿದ್ದಾರೆ ಈ ಕುರಿತು ತಮಿಳುನಾಡು ಸರ್ಕಾರ ಹೊರಡಿಸಿರುವ ಆದೇಶ ಕೂಡ ನಮ್ಮ ಗಮನಕ್ಕಿದೆ ಎಂದು ಹೇಳಿದ್ದಾರೆ.

ಹೈಕೋರ್ಟ್ ಮೆಟ್ಟಿಲೇರಿ ಒಂದು ಅಂಕ ಪಡೆದ ಸ್ಟುಡೆಂಟ್

ಈ ಹಿನ್ನಲೆ ಶುಲ್ಕ ‌ನಿಗದಿ ಮಾಡೋ ವಿಚಾರ ಸರ್ಕಾರ ಚರ್ಚೆ ಮಾಡ್ತಾ ‌ಇದೆ. ಪೋಷಕರು  ಆತಂಕ ಪಡುವ ಅವಶ್ಯಕತೆ ಇಲ್ಲ. ಖಾಸಗಿ ಶಾಲೆ‌ ಶುಲ್ಕದ ಕುರಿತು ಒತ್ತಡ ಹಾಕಿದ್ರೆ ಇಲಾಖೆಗೆ ದೂರು ನೀಡಬಹುದು ಶಿಕ್ಷಣ ಇಲಾಖೆ ಕೂಡಲೇ ಕ್ರಮ ಕೈಗೊಳ್ಳುತ್ತೆ. ಅದೇ ರೀತಿ ಖಾಸಗಿ ಶಾಲಾ  ಆಡಳಿತ ಮಂಡಳಿಗಳು ಶುಲ್ಕ ಕಡಿಮೆ ಮಾಡಿದ್ರೆ ಶಿಕ್ಷಕರ ಸಂಬಳ  ಕಡಿಮೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ ಈ ಹಿನ್ನಲೆ ಇವೆಲ್ಲವೂ ಪರಿಗಣಿಸಿ ಶುಲ್ಕ ನಿಗದಿ ಮಾಡಲಾಗುವುದು ಎಂದು ತಿಳಿಸಿದರು.