ಎಸ್‌ಎಸ್‌ಎಲ್‌ಸಿ 'ಪರೀಕ್ಷೆ 2' ಫಲಿತಾಂಶ: ಕೇವಲ 31% ಮಕ್ಕಳು ಪಾಸ್‌..!

ಈ ಬಾರಿಯ ಪರೀಕ್ಷೆ-2ರಲ್ಲಿ ಗಂಡು ಮಕ್ಕಳು ಹಾಗೂ ಗ್ರಾಮೀಣ ಮಕ್ಕಳು ಮೇಲುಗೈ ಸಾಧಿಸಿದ್ದಾರೆ. ಉತ್ತೀರ್ಣರಾಗಿ ರುವ ಒಟ್ಟು 69,275 ವಿದ್ಯಾರ್ಥಿಗಳಲ್ಲಿ 38,820 ಮಂದಿ ಗಂಡು ಮಕ್ಕಳು ಮತ್ತು 30,455 ಹೆಣ್ಣು ಮಕ್ಕಳು ತೇರ್ಗಡೆಯಾಗಿದ್ದಾರೆ. ನಗರ ಪ್ರದೇಶದ 27,955 ವಿದ್ಯಾ ರ್ಥಿಗಳು ಹಾಗೂ ಗ್ರಾಮೀಣ ಭಾಗದ 41,320 ಮಕ್ಕಳು ಉತ್ತೀರ್ಣರಾಗಿದ್ದಾರೆ. ಉಳಿದಂತೆ ಸರ್ಕಾರಿ ಶಾಲೆಗಳಲ್ಲಿನ ಶೇ.29.43, ಅನುದಾನಿತ ಶಾಲೆಗಳ ಶೇ. 28.71 ಮತ್ತು ಅನುದಾನರಹಿತ ಖಾಸಗಿ ಶಾಲೆಗಳ ಶೇ.38.21ರಷ್ಟು ಮಕ್ಕಳು ಉತ್ತೀರ್ಣರಾಗಿದ್ದಾರೆ. 

Only 31 percent students pass in SSLC Exam 2 result in karnataka grg

ಬೆಂಗಳೂರು(ಜು.11):  ಎಸ್‌ಎಸ್‌ಎಲ್‌ಸಿ 'ಪರೀಕ್ಷೆ 2' ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ಪರೀಕ್ಷೆ ಬರೆದಿದ್ದ 2,23,293 ಪೈಕಿ 69,275 ಮಂದಿ ಉತ್ತೀರ್ಣರಾಗುವ ಮೂಲಕ ಶೇ.31.02 ರಷ್ಟು ಫಲಿತಾಂಶ ಬಂದಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತಿಳಿಸಿದೆ.

ಮಂಡಳಿಯು ಬುಧವಾರ ಬೆಳಗ್ಗೆ 11.30ಕ್ಕೆ ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟಿಸುವುದಾಗಿ ಹೇಳಿತ್ತಾದರೂ ತಾಂತ್ರಿಕ ಕಾರಣಗಳಿಂದ ಸುಮಾರು ಒಂದು ಗಂಟೆ ತಡವಾಗಿ ಫಲಿತಾಂಶ ಜಾಲತಾಣದಲ್ಲಿ ಲಭ್ಯವಾಯಿತು. ಫಲಿತಾಂಶದ ಅಂಕಿ ಅಂಶಗಳನ್ನು ಮಂಡಳಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ.

ಎಸ್‌ಎಸ್‌ಎಲ್‌ಸಿ ರಿಸಲ್ಟ್‌ ಕುಸಿತ: ಶಿಕ್ಷಕರ ಬಡ್ತಿ ತಡೆ ಹಿಂಪಡೆದು ಆದೇಶ

ಈ ಬಾರಿಯ ಪರೀಕ್ಷೆ-2ರಲ್ಲಿ ಗಂಡು ಮಕ್ಕಳು ಹಾಗೂ ಗ್ರಾಮೀಣ ಮಕ್ಕಳು ಮೇಲುಗೈ ಸಾಧಿಸಿದ್ದಾರೆ. ಉತ್ತೀರ್ಣರಾಗಿ ರುವ ಒಟ್ಟು 69,275 ವಿದ್ಯಾರ್ಥಿಗಳಲ್ಲಿ 38,820 ಮಂದಿ ಗಂಡು ಮಕ್ಕಳು ಮತ್ತು 30,455 ಹೆಣ್ಣು ಮಕ್ಕಳು ತೇರ್ಗಡೆಯಾಗಿದ್ದಾರೆ. ನಗರ ಪ್ರದೇಶದ 27,955 ವಿದ್ಯಾ ರ್ಥಿಗಳು ಹಾಗೂ ಗ್ರಾಮೀಣ ಭಾಗದ 41,320 ಮಕ್ಕಳು ಉತ್ತೀರ್ಣರಾಗಿದ್ದಾರೆ. ಉಳಿದಂತೆ ಸರ್ಕಾರಿ ಶಾಲೆಗಳಲ್ಲಿನ ಶೇ.29.43, ಅನುದಾನಿತ ಶಾಲೆಗಳ ಶೇ. 28.71 ಮತ್ತು ಅನುದಾನರಹಿತ ಖಾಸಗಿ ಶಾಲೆಗಳ ಶೇ.38.21ರಷ್ಟು ಮಕ್ಕಳು ಉತ್ತೀರ್ಣರಾಗಿದ್ದಾರೆಂದು ಮಂಡಳಿ ತಿಳಿಸಿದೆ.

ಸ್ಕ್ಯಾನ್ ಕಾಪಿಗೆ ಅರ್ಜಿ ಜು.15 ಕೊನೆ ದಿನ: 

ಫಲಿತಾಂಶ ಪಡೆದಿರುವ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಗಳ ಛಾಯಾ ಪ್ರತಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿ ಸಲು ಜು.10ರಿಂದ 15ರವರೆಗೆ ಅವಕಾಶ ನೀಡಲಾಗಿದೆ. ಛಾಯಾ ಪ್ರತಿ ಪಡೆದ ಬಳಿಕ ಅಂಕ ಎಣಿಕೆಯಲ್ಲಿ ವ್ಯತ್ಯಾಸ ಅಥವಾ ಮೌಲ್ಯ ಮಾಪನದಲ್ಲಿ ಯಾವುದೇ ಲೋಪವಾಗಿರುವುದು ಕಂಡು ಬಂದರೆ ಅಂಕ ಮರು ಎಣಿಕೆ ಮತ್ತು ಮರು ಮೌಲ್ಯ ಮಾಪನಕ್ಕೆ ಜು.13ರಿಂದ 18 ರವರೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ವರು ಶುಲ್ಕ ಪಾವತಿಸಲು ಜು.19 ಕೊನೆಯ ದಿನ ಎಂದು ಮಂಡಳಿ ತಿಳಿಸಿದೆ.

10 ಸಾವಿರ ಮಕ್ಕಳಿಗೆ ಗ್ರೇಸ್ ಅಂಕ?

ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ-1ರ ಮಾದರಿಯಲ್ಲೇ ಪರೀಕ್ಷೆ-2ರಲ್ಲೂ ಸಾವಿರಾರು ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕ ನೀಡಲಾಗಿದೆ. ಗ್ರೇಸ್ ಅಂಕ ನೀಡಿರುವುದನ್ನು ಪರೀಕ್ಷಾ ಮಂಡಳಿ ಅಧಿಕಾರಿಗಳು ಖಚಿತಪಡಿಸಿದ್ದಾ ರಾದರೂ ಎಷ್ಟು ಮಕ್ಕಳಿಗೆ ನೀಡಲಾಗಿದೆ ಎಂಬ ಅಂಕಿ ಅಂಶವನ್ನು ಫಲಿತಾಂಶ ಪ್ರಕಟಣೆಯಲ್ಲಿ ಬಹಿರಂಗಪಡಿಸಿಲ್ಲ. ಆದರೆ, ಮಂಡಳಿಯ ಮೂಲಗಳ ಮಾಹಿತಿ ಪ್ರಕಾರ ಸುಮಾರು 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ
ಗ್ರೇಸ್ ಅಂಕ ನೀಡಿ ಉತ್ತೀರ್ಣ ಮಾಡ ಲಾಗಿದೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಆರೂ ವಿಷಯಗಳಿಗೆ ಪರೀಕ್ಷೆ ಬರೆದವರೂ ಇದ್ದಾರೆ, ಕೆಲವೇ ವಿಷಯಗಳಿಗೆ ಪರೀಕ್ಷೆ ಬರೆದವರೂ ಇದ್ದಾರೆ ಎಂದು ತಿಳಿದು ಬಂದಿದೆ. ಪರೀಕ್ಷೆ 1 ರಲ್ಲಿ ಉತ್ತೀರ್ಣರಾಗಿದ್ದ 6.31 ಲಕ್ಷ ವಿದ್ಯಾರ್ಥಿಗಳ ಪೈಕಿ ಶೇ.20ರಷ್ಟು ಅಂದರೆ 1.23 ಲಕ್ಷ ವಿದ್ಯಾರ್ಥಿಗಳಿಗೆ ಗರಿಷ್ಠ ಮೂರು ವಿಷಯಗಳಲ್ಲಿ ಶೇ.20ರಷ್ಟು ಗ್ರೇಸ್ ಅಂಕ ನೀಡಿ ತೇರ್ಗಡೆ ಮಾಡಲಾಗಿತ್ತು.

Latest Videos
Follow Us:
Download App:
  • android
  • ios