Asianet Suvarna News Asianet Suvarna News

Online courses: ಈ ಕೋರ್ಸ್‌ಗಳ ಕಲಿಕೆಗೆ ಕಾಲೇಜಿಗೆ ಹೋಗಬೇಕಿಲ್ಲ, ಆನ್‌ಲೈನ್‌ನಲ್ಲೇ ಲಭ್ಯ

  • ಕೋವಿಡ್‌ ಸಾಂಕ್ರಾಮಿಕದಿಂದ ಶೈಕ್ಷಣಿಕ ವಲಯದಲ್ಲಿ ಸಾಕಷ್ಟು  ಬದಲಾವಣೆ
  • ಆನ್‌ಲೈನ್ ಮೂಲಕವೇ  ನಡೆಯುತ್ತಿದೆ ಸಾಕಷ್ಟು ಕೋರ್ಸುಗಳು
  • ಹೊಸ ಕಾಲಕ್ಕೆ ಅಗತ್ಯವಾಗಿರುವ ಕೋರ್ಸುಗಳು ಈಗ ಆನ್ಲೈನಲ್ಲೇ ಲಭ್ಯ
Online course This course does not need to go to college it is available online gow
Author
Bengaluru, First Published Dec 30, 2021, 4:27 PM IST

ಬೆಂಗಳೂರು(ಡಿ.30): ಕೋವಿಡ್ (Covid-19) ಮಹಾಮಾರಿ ಜಗತ್ತನ್ನು ಕಾಡಲು ಶುರು ಮಾಡಿದ ಮೇಲೆ ಬಹುತೇಕ ವಲಯಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಏನೇ ಕೆಲಸವಿದ್ದರೂ ಎಲ್ಲವನ್ನೂ ಕುಳಿತಲ್ಲೇ ಮಾಡುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ.  ಎಲ್ಲವೂ ಡಿಜಿಟಲ್ ಮಯವಾಗಿದೆ. ಪುಟ್ಟ ಮಕ್ಕಳ ಕಲಿಕೆಯಿಂದಿಡಿದು ದೊಡ್ಡ ದೊಡ್ಡ ಉದ್ಯಮಗಳು ನಡೀತಿರೋದೇ ಕಂಪ್ಯೂಟರ್ ನಿಂದ. ಅಷ್ಟರ ಮಟ್ಟಿಗೆ ಡಿಜಿಟಲ್ ಯುಗ (Digital World) ವಾಗಿ ಪರಿವರ್ತನೆ ಹೊಂದಿದ್ದೇವೆ. ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಹೆಚ್ಚಿನ ಶೈಕ್ಷಣಿಕ ಕೋರ್ಸ್ (Education Courses) ಗಳಿಗೆ ಅಡೆತಡೆಗಳು ಎದುರಾಗಿವೆ. ಈ ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ಸಂಸ್ಥೆಗಳು ಆನ್ ಲೈನ್ ಕೋರ್ಸ್ (Online Courses) ಗಳ ಮೂಲಕ ವೇದಿಕೆಯನ್ನು ಕಲ್ಪಿಸಿವೆ. ಇದರ ಪರಿಣಾಮವಾಗಿ ಕೋವಿಡ್ ಅವಧಿಯಲ್ಲಿ ಕೃತಕ ಬುದ್ಧಿಮತ್ತೆ (AI), ಯಂತ್ರ ಕಲಿಕೆ (Machine Learning), ವಿಜ್ಞಾನ, ಡಿಜಿಟಲ್ ಮಾರ್ಕೆಟಿಂಗ್ (Business Marketing), ಬಿಸಿನೆಸ್ ಅನಾಲಿಟಿಕ್ಸ್ ಮತ್ತು ಆರೋಗ್ಯ ರಕ್ಷಣೆ, ಸೈಬರ್ ಭದ್ರತೆ (Cyber Security), ಡೇಟಾ(Data)ಗೆ ಸಂಬಂಧಿಸಿದ ಕೋರ್ಸ್‌ಗಳಲ್ಲಿ ನಿರ್ದಿಷ್ಟ ಏರಿಕೆ ಕಂಡುಬಂದಿದೆ.

ದೇಶದಲ್ಲಿ ಕೋವಿಡ್‌ನ ಎರಡನೇ ಅಲೆಯ ಸಂದರ್ಭದಲ್ಲಿ ವೈದ್ಯಕೀಯ ವೃತ್ತಿಪರರು ಮತ್ತು ಆರೋಗ್ಯ ಕಾರ್ಯನಿರ್ವಾಹಕರು ವೈರಸ್ ಅನ್ನು ಪತ್ತೆ ಹಚ್ಚುವುದು ಹೇಗೆ? ಪೀಡಿತ ರೋಗಿಗಳನ್ನು ಹೇಗೆ ಸಂಪರ್ಕಿಸಬೇಕು? ಎಂಬುದನ್ನು ಕಲಿಯಲು ಕೋರ್ಸ್‌ಗಳನ್ನು ಅಧ್ಯಯನ ಮಾಡಲು ಕಾರಣವಾಯಿತು. ಇಂತಹ ಒಂದಷ್ಟು ಆನ್ ಲೈನ್ ಕೋರ್ಸ್ ಗಳ ಕುರಿತ ಮಾಹಿತಿ ಇಲ್ಲಿದೆ.

Singapore Scholarship:11 ಭಾರತೀಯ ವಿದ್ಯಾರ್ಥಿಗಳೆ ಸಿಕ್ಕ ವಿದ್ಯಾರ್ಥಿ ವೇತನ    

ಅಕಾಡೆಮಿಕ್ ರೈಟಿಂಗ್: ಶೈಕ್ಷಣಿಕ ಬರವಣಿಗೆ ಕೋರ್ಸ್ ಉದಯೋನ್ಮುಖ ಸ್ವಯಂ ಪ್ರಮಾಣಪತ್ರ (SWAYAM certificate) ಕೋರ್ಸ್‌ಗಳಲ್ಲಿ ಒಂದಾಗಿದೆ. ಇದು ಪರಿಣಾಮಕಾರಿ ಮತ್ತು ಫಲಿತಾಂಶ-ಆಧಾರಿತ ಶೈಕ್ಷಣಿಕ ಬರವಣಿಗೆಗೆ ಜ್ಞಾನವನ್ನು ಒದಗಿಸುವ ಮೂಲಕ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.  ವಿದ್ಯಾರ್ಥಿಗಳು SWAYAM ನಲ್ಲಿ ಶೈಕ್ಷಣಿಕ ಬರವಣಿಗೆ ಕೋರ್ಸ್ ಅನ್ನು ಪಡೆಯಬಹುದು. ಈ ಕೋರ್ಸ್ ಅವಧಿಯು 15 ವಾರಗಳಾಗಿವೆ.
 
ಡಿಜಿಟಲ್ ಮಾರ್ಕೆಟಿಂಗ್:
ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಹಚ್ಚುಚಾಲ್ತಿಯಲ್ಲಿದೆ. ಹಾಗಾಗಿ, ಉದ್ಯೋಗಾವಕಾಶಗಳು ಹೆಚ್ಚಾಗಿದ್ದು, ಬಹಳಷ್ಟು ಜನರು ಡಿಜಿಟಲ್ ಮಾರ್ಕೆಟಿಂಗ್ ಸಂಬಂಧಿಸಿ ಕೋರ್ಸುಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಮಾರ್ಕೆಟಿಂಗ್ ವಿಷಯ ಮಾರ್ಕೆಟಿಂಗ್, ಸರ್ಚ್ ಎಂಜಿನ್ ಆಪ್ಟಿಮೈಸೇಶನ್ (SEO), ಸಾಮಾಜಿಕ ಮಾಧ್ಯಮ (Social Media) ಮತ್ತು ಮಾರ್ಕೆಟಿಂಗ್ ಅನಾಲಿಟಿಕ್ಸ್‌ನಂತಹ ವಿಷಯಗಳನ್ನು ಇದು ಒಳಗೊಂಡಿದೆ. 

ಪೀಸ್ ಆ್ಯಂಡ್ ಕಂಪ್ಲಿಕ್ಟ್ ಮ್ಯಾನೇಜ್ಮೆಂಟ್: ಈ ಕೋರ್ಸ್ ಶಾಂತಿಯ ಪರಿಕಲ್ಪನೆ ಮತ್ತು ಮಾನವ ಅಭಿವೃದ್ಧಿಯಲ್ಲಿ ಶಾಂತಿಯ ಪಾತ್ರವನ್ನು ಕಲಿಸಲು ಪ್ರಯತ್ನಿಸುತ್ತದೆ. ಶಾಂತಿ ಮತ್ತು ಸಂಘರ್ಷ ನಿರ್ವಹಣೆಯ ಕೋರ್ಸ್ ಕಲಿಯುವವರಿಗೆ ಸಿದ್ಧಾಂತಗಳು ಮತ್ತು ಸಂಘರ್ಷದ ಪ್ರಕಾರಗಳು, ಸಂಘರ್ಷ ನಿರ್ವಹಣೆಯ ವಿಧಾನಗಳು ಮತ್ತು ಶಾಂತಿಯ ಸಮಕಾಲೀನ ಉಪಕ್ರಮಗಳನ್ನು ಕಲಿಸುತ್ತದೆ.

2.05 Crore Job Offer : ರೈತನ ಮಗನಿಗೆ ಉಬರ್ ನೀಡ್ತು ಜಾಬ್ ಜಾಕ್ ಪಾಟ್!

ಬ್ಲಾಕ್‌ಚೈನ್ ಕೋರ್ಸ್‌: ನ್ಯೂ ಏಜ್ ಕೋರ್ಸ್ ಇದು. ಬಹುಶಃ ಮುಂದಿನ ಕೆಲವೇ ವರ್ಷಗಳಲ್ಲಿ ಬ್ಲಾಕ್‌ಚೈನ್ ಎಂಬುದು ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಬಳಕೆಯಾಗಲಿದೆ. ಹಾಗಾಗಿ, ಸಾಕಷ್ಟು ಸಂಖ್ಯೆಯಲ್ಲಿ ಉದ್ಯೋಗಕ್ಕೆ ಅವಕಾಶ ಒದಗಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಬ್ಲಾಕ್‌ಚೈನ್ (Black Chain) ಸಂಬಂಧಿಸಿದ ಕೋರ್ಸುಗಳಿಗೆ ಹೆಚ್ಚಿನ ಆದ್ಯತೆ ದೊರೆಯುತ್ತಿದೆ. ಇದನ್ನು ನೀವು ಆನ್‌ಲೈನ್ ಮೂಲಕವೇ ಕಲಿಯಬಹುದಾಗಿದೆ ಬ್ಲಾಕ್‌ಚೈನ್ ಕೋರ್ಸ್‌ಗಳನ್ನು ತಾಂತ್ರಿಕ ಮತ್ತು ತಾಂತ್ರಿಕೇತರ ಕಲಿಯುವವರಿಗೆ ಪ್ರಮುಖ ಪರಿಕಲ್ಪನೆಗಳೊಂದಿಗೆ ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ. ಕೇರಳ ಬ್ಲಾಕ್‌ಚೈನ್ ಅಕಾಡೆಮಿ, ರಾಜ್ಯ-ಚಾಲಿತ ಡಿಜಿಟಲ್ ವಿಶ್ವವಿದ್ಯಾಲಯ ಕೇರಳದ ಅಡಿಯಲ್ಲಿ, ಬ್ಲಾಕ್‌ಚೈನ್ ತಂತ್ರಜ್ಞಾನದಲ್ಲಿ ಕೋರ್ಸು ನೀಡುತ್ತವೆ.

ರೊಬೊಟಿಕ್ಸ್: ರೊಬೊಟಿಕ್ಸ್ ಎನ್ನುವುದು ಎವರ್‌ಗ್ರೀನ್. ಕೆಲವು ವರ್ಷಗಳ ಹಿಂದೆ ಹೊಸದಾಗಿದ್ದ ಪರಿಕಲ್ಪನೆ ಇದೀಗ ಸಾಮಾನ್ಯಾಗಿದ್ದು, ಬಹುತೇಕ ಕ್ಷೇತ್ರಗಳಲ್ಲಿ ರೊಬೊಟಿಕ್ಸ್ ತಂತ್ರಜ್ಞಾನ ಬಳಕೆಯಾಗುತ್ತಿದೆ. ಹಾಗಾಗಿ, ಇದಕ್ಕೆ ಸಂಬಂಧಿಸಿದ ಕೋರ್ಸುಗಳಿಗೆ ಸಾಕಷ್ಟು ಬೇಡಿಕೆ ಮತ್ತು ಆನ್‌ಲೈನ್ ಮೂಲಕವೇ ಕಲಿಯಬಹುದಾಗಿದೆ. ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISC) ಬೆಂಗಳೂರು,  ಉಚಿತವಾಗಿ ಆನ್‌ಲೈನ್ ಕೋರ್ಸ್‌ ನೀಡುತ್ತದೆ. ಎಲೆಕ್ಟ್ರಿಕಲ್ / ಮೆಕ್ಯಾನಿಕಲ್ ಇಂಜಿನಿಯರ್ ಮತ್ತು ಕಂಪ್ಯೂಟರ್ ಸೈನ್ಸ್‌ನಲ್ಲಿ ಪಿಎಚ್‌ಡಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಈ ಕೋರ್ಸ್ ವಿನ್ಯಾಸಗೊಳಿಸಲಾಗಿದೆ. 

ಕೋವಿಡ್ ಕಾಂಟ್ರಾಕ್ಟ್ ಟ್ರೇಸಿಂಗ್: ಇದು ಸಂಪೂರ್ಣ ಹೊಸ ಮಾದರಿಯ  ಕೋರ್ಸು ಆಗಿದೆ. ಕೋವಿಡ್ 19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಅಧ್ಯಯನದ ಶಾಖೆ ಇದಾಗಿದೆ. ಈ ಕೋರ್ಸನ್ನು ನೀವು ಆನ್‌ಲೈನ್ ಮೂಲಕವೇ ಕಲಿಯಬಹುದಾಗಿದೆ. ವೈದ್ಯರು, ನರ್ಸ್‌ಗಳು ಹಾಗೂ ಆರೋಗ್ಯ ವಲಯದಲ್ಲಿರುವ ವೃತ್ತಿಪರರಿಗೆ ಈ ಕೋರ್ಸನಿಂದ ನೆರವು ದೊರೆಯಲಿದೆ. 

Caution Against Ed-tech Companies: ಆನ್‌ಲೈನ್ ಶಿಕ್ಷಣ ಆ್ಯಪ್‌ ಬಳಕೆದಾರರಿಗೆ ಎಚ್ಚರಿಕೆ ನೀಡಿದ ಕೇಂದ್ರ ಸರಕಾರ

Follow Us:
Download App:
  • android
  • ios