Asianet Suvarna News Asianet Suvarna News

ಗುಲ್ಬರ್ಗ ವಿವಿ 8 ವಿಭಾಗಗಳಲ್ಲಿ ಸಂಶೋಧನೆ ಬಂದ್‌..!

ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ ಕಟ್ಟಳೆಗಳು, ತಾನೇ ರಚಿಸಿರುವ ಎಂಫಿಲ್‌ ಹಾಗೂ ಪಿಎಚ್‌ಡಿ ನಿಯಮಗಳನ್ವಯ ವಿವಿಯಲ್ಲಿ ಈ ಮೇಲಿನ 8 ವಿಭಾಗಗಳಲ್ಲಿ ಅರ್ಹ ಬೋಧಕರಿಲ್ಲ, ಇವೆಲ್ಲ ವಿಭಾಗಗಳಲ್ಲಿದ್ದ ಹಿರಿಯ ಬೋಧಕರು ನಿವೃತ್ತರಾಗಿ ಖಾಲಿ ಬಿದ್ದಿರುವ ಸ್ಥಾನಗಳಿಗೆ ಮರು ಭರ್ತಿ ನಡೆದೇ ಇಲ್ಲ. ಹೀಗಾಗಿ ಇವೆಲ್ಲ ವಿಭಾಗಗಳಲ್ಲಿ ಸಂಶೋಧನೆಗೆ ಅವಕಾಶ ಕಲ್ಪಿಸುವುದು ಹೇಗೆಂದು ವಿವಿ ಸಂಶೋಧನೆಯನ್ನೇ ನಿಲ್ಲಿಸಿಬಿಟ್ಟಿದೆ.

No Research in 8 Departments of Gulbarga University grg
Author
First Published Oct 19, 2023, 8:12 PM IST

ಶೇಷಮೂರ್ತಿ ಅವಧಾನಿ

ಕಲಬುರಗಿ(ಅ.19):  ಇಲ್ಲಿನ ಉನ್ನತ ಶಿಕ್ಷಣ ಕೇಂದ್ರ ಗುಲ್ಬರ್ಗ ವಿವಿ ಜ್ಞಾನಗಂಗೆಯಲ್ಲಿ ಸಂಸ್ಕೃತ ಸೇರಿದಂತೆ ಅಷ್ಟ ವಿಭಾಗಗಳಲ್ಲಿ ಸಂಶೋಧನೆಗೆ ಬಾಗಿಲು ಬಂದ್‌ ಆಗಿರೋದು ಶೈಕ್ಷಣಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ವಿಶ್ವ ವಿದ್ಯಾಲಯ ಎಂಫಿಲ್‌, ಪಿಎಚ್‌ಡಿ ಪ್ರವೇಶಕ್ಕೆ ಮುಂದಾಗಿದ್ದು ಇದಕ್ಕಾಗಿ ಕಳೆದ ಮೇ ತಿಂಗಳಲ್ಲಿ ಹೊರಡಿಸಿದ್ದ ಅಧಿಸೂಚನೆಯಲ್ಲೇ ತನ್ನಲ್ಲಿರುವ 33 ವಿವಿಧ ವಿಭಾಗಗಳ ಪೈಕಿ ಸಂಸ್ಕೃತ, ಮರಾಠಿ, ಮಾಹಿತಿ ವಿಜ್ಞಾನ, ಸೋಶಿಯಲ್‌ ವರ್ಕ್‌, ಇತಿಹಾಸ, ಮಹಿಳಾ ಅಧ್ಯಯನ, ಸಂಗೀತ, ಫೈನ್‌ ಆರ್ಟ್‌ ಸೇರಿದಂತೆ 8 ವಿಭಾಗಗಳನ್ನು ಕೈಬಿಟ್ಟು , ಕೇವಲ 24 ವಿಭಾಗಗಳಲ್ಲಿ ಮಾತ್ರ ಸಂಶೋಧನೆಗೆ ಅವಕಾಶ ಕಲ್ಪಿಸಿದ್ದರಿಂದ ಮೇಲಿನ ವಿಷಯಗಳಲ್ಲಿ ಸಂಶೋಧನೆಗೆ ಆಸಕ್ತಿ ಇರುವಂತಹ ಹಿಂದುಳಿದ ನೆಲದ ನೂರಾರು ಸಂಶೋಧನಾರ್ಥಿಗಳು ಕಂಗಾಲಾಗಿದ್ದಾರೆ.

ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ ಕಟ್ಟಳೆಗಳು, ತಾನೇ ರಚಿಸಿರುವ ಎಂಫಿಲ್‌ ಹಾಗೂ ಪಿಎಚ್‌ಡಿ ನಿಯಮಗಳನ್ವಯ ವಿವಿಯಲ್ಲಿ ಈ ಮೇಲಿನ 8 ವಿಭಾಗಗಳಲ್ಲಿ ಅರ್ಹ ಬೋಧಕರಿಲ್ಲ, ಇವೆಲ್ಲ ವಿಭಾಗಗಳಲ್ಲಿದ್ದ ಹಿರಿಯ ಬೋಧಕರು ನಿವೃತ್ತರಾಗಿ ಖಾಲಿ ಬಿದ್ದಿರುವ ಸ್ಥಾನಗಳಿಗೆ ಮರು ಭರ್ತಿ ನಡೆದೇ ಇಲ್ಲ. ಹೀಗಾಗಿ ಇವೆಲ್ಲ ವಿಭಾಗಗಳಲ್ಲಿ ಸಂಶೋಧನೆಗೆ ಅವಕಾಶ ಕಲ್ಪಿಸುವುದು ಹೇಗೆಂದು ವಿವಿ ಸಂಶೋಧನೆಯನ್ನೇ ನಿಲ್ಲಿಸಿಬಿಟ್ಟಿದೆ.

ಗುಲ್ಬರ್ಗ ವಿಶ್ವವಿದ್ಯಾಲಯ ಘಟಿಕೋತ್ಸವ: ಬಡತನ ಮೆಟ್ಟಿ ಪದಕ ಬಾಚಿದ ವಿದ್ಯಾರ್ಥಿನಿಯರು

ಇದಲ್ಲದೆ ವಿವಿ ವ್ಯಾಪ್ತಿಯ ಪದವಿ, ಸ್ನಾತಕೋತ್ತರ ಕೇಂದ್ರಗಳಲ್ಲಿಯೂ ಸಂಸ್ಕೃತ ಸೇರಿದಂತೆ ಮೇಲೆ ನಮೂದಿಸಿದ 8 ವಿಭಾಗಗಳಲ್ಲಿ ಅರ್ಹ, ಅನುಭವಿ, ಯೂಜಿಸಿ ನಿಯಮಾನುಸಾರ ಮಾರ್ಗದರ್ಶಕರಾಗುವಂತಹ ಅರ್ಹತೆ ಇರುವಂತಹ ಪ್ರಾಧ್ಯಾಪಕರ ಕೊರತೆ ಕಾಡುತ್ತಿದೆ. ಹೀಗಾಗಿಯೇ ಇವೆಲ್ಲ ವಿಭಾಗಗಳಲ್ಲಿ ಸಂಶೋಧನೆಗೆ ಅವಕಾಶ ಕಲ್ಪಿಸಲು ಆಗುತ್ತಿಲ್ಲವೆಂದು ವಿವಿ ಕೈ ಚೆಲ್ಲಿದೆ.

ಕಳೆದೊಂದು ದಶಕದಿಂದ ಗುವಿವಿಯಲ್ಲಿ 200 ಕ್ಕೂ ಹೆಚ್ಚು ಬೋಧಕ ಹುದ್ದೆ, 100 ಕ್ಕೂ ಹೆಚ್ಚು ಬೋಧಕೇತರ ಹುದ್ದೆಗಳು ಖಾಲಿ ಬಿದ್ದರೂ ಕೇಳೋರಿಲ್ಲದಂತಾಗಿದೆ. ನೇಮಕಾತಿಯೇ ಆಗುತ್ತಿಲ್ಲ. ವರ್ಷಕ್ಕೊಂದು ವಿಭಾಗ ಬಾಗಿಲು ಹಾಕಿಕೊಳ್ಳುವ ಹಂತ ತಲುಪುತ್ತಿದೆ.

2023ರ ಸಾಲಿನಲ್ಲಂತೂ ಎಂಫಿಲ್‌, ಪಿಎಚ್‌ಡಿಯಂತಹ ಸಂಶೋಧನೆಗೆ 8 ವಿಭಾಗಗಳಲ್ಲಿ ಅಧಿಸೂಚನೆಯನ್ನೇ ಹೊರಡಿಸದಂತಹ ದುರವಸ್ಥೆ ಜ್ಞಾನಗಂಗೆಗೆ ಬಂದೊದಗಿರುವುದು ಶೈಕ್ಷಣಿಕ ವಲಯದಲ್ಲಿ ಕಪ್ಪು ಚುಕ್ಕೆಯಾಗಿ ದಾಖಲಾದಂತಾಗಿದೆ ಎಂಬ ಚರ್ಚೆಗಳು ಸಾಗಿವೆ.

ಗುಲ್ಬರ್ಗ ವಿವಿ​: ವಿದ್ಯಾ​ರ್ಥಿ​ನಿಗೆ ಉಪ​ನ್ಯಾ​ಸಕ ಲೈಂಗಿಕ ಕಿರು​ಕು​ಳ

ಇದಲ್ಲದೆ ಇಲ್ಲಿರುವ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದಲ್ಲಿ ಪಿಎಚ್‌ಡಿಗೆ ಅನವಕಾಶವೇ ಇಲ್ಲದಂತಾಗಿದೆ. ಈ ವಿಭಾಗ ಆರಂಭವಾಗಿ 17 ವರ್ಷ ಕಳೆದರೂ ಇಲ್ಲಿನ್ನೂ ಒಬ್ಬರೂ ಕಾಯಂ ಬೋಧಕ ಸಿಬ್ಬಂದಿ ಇಲ್ಲ. ಇಲ್ಲಿರುವ ಎಲ್ಲರೂ ಅತಿಥಿ ಉಪನ್ಯಾಸಕರೇ ಆಗಿರೋದರಿಂದ ಇಲ್ಲಿನ ಪತ್ರಿಕೋದ್ಯಮ ವಿದ್ಯರ್ಥಿಗಳು ಸಂಶೋಧನೆಯಿಂದ ವಂಚಿತರಾಗುವಂತಾಗಿದೆ.

ಸಂಸ್ಕೃತ, ಮರಾಠಿ, ಇತಿಹಾಸ ಸೇರಿದಂತೆ 8 ವಿಭಾಗಗಳಲ್ಲಿ ಎಂಫಿಲ್‌, ಪಿಎಚ್‌ಡಿ ಅಧ್ಯಯನಕ್ಕೆ ಅವಕಾಶ ಕಲ್ಪಿಸಲು ಆಗುತ್ತಿಲ್ಲ. ಏಕೆಂದರೆ ಇಲ್ಲಿ ಬೋಧಕರೇ ಇಲ್ಲ, ಜೊತೆಗೇ ಅತಿಥಿ ಶಿಕ್ಷಕರ ಮೇಲೆಯೇ ವಿಭಾಗಗಳು ನಡೆದಿವೆ. ಹೀಗಿರುವಾಗ ನಿಯಮಗಲಂತೆ ಅರ್ಹರಿಲ್ಲದೆ ಹೋದಾಗ ಸಂಶೋಧನೆಗೆ ಅವಕಾಶ ಕೊಡೋದಾದರೂ ಹೇಗೆಂದು ನಾವು ಪಿಎಚ್‌ಡಿಗೆ ಈ ವಿಭಾಗಗಳನ್ನು ನಮೂದಿಸಿ ಅಧಿಸೂಚನೆ ಹೊರಡಿಸಿಲ್ಲ ಎಂದು ಗುಲ್ಬರ್ಗ ವಿವಿ ಕುಲಪತಿ ಡಾ. ದಯಾನಂದ ಅಗಸರ್‌ ತಿಳಿಸಿದ್ದಾರೆ.  

Follow Us:
Download App:
  • android
  • ios