ತಡವಾಗಿದ್ದರೂ ಸಿಲಬಸ್ ಕಡಿತದ ಚಿಂತನೆ ಇಲ್ಲ : ಬಿ.ಸಿ ನಾಗೇಶ್
- ಕಳೆದ 15 ದಿನಗಳಿಂದ ಶಾಲೆ ಯಾವಾಗ ಆರಂಭವಾಗುತ್ತದೆಯೋ ಎಂದು ಪೋಷಕರು ಕಾಯುತ್ತಿದ್ದರು
- ಇಂದಿನಿಂದ ರಾಜ್ಯಾದ್ಯಂತ 1 ರಿಂದ 5 ನೇ ತರಗತಿವರೆಗೆ ಶಾಲೆ ಆರಂಭಗೊಂಡಿವೆ - ಸಚಿವ ನಾಗೇಶ್
ಶಿವಮೊಗ್ಗ (ಅ.25): ಕಳೆದ 15 ದಿನಗಳಿಂದ ಶಾಲೆ (School) ಯಾವಾಗ ಆರಂಭವಾಗುತ್ತದೆಯೋ ಎಂದು ಪೋಷಕರು (Parents) ಕಾಯುತ್ತಿದ್ದರು. ಇಂದಿನಿಂದ ರಾಜ್ಯಾದ್ಯಂತ 1 ರಿಂದ 5 ನೇ ತರಗತಿವರೆಗೆ ಶಾಲೆ ಆರಂಭಗೊಂಡಿವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ (BC Nagesh) ಹೇಳಿದರು.
ಶಿವಮೊಗ್ಗದಲ್ಲಿಂದು (Shivamogga) ಮಾತನಾಡಿದ ಅವರು ಮಕ್ಕಳು (Children) ಇಂದು ಸಂತೋಷದಿಂದ ಶಾಲೆಗಳಿಗೆ ಬಂದಿದ್ದಾರೆ. ಪೋಷಕರು ಮೊದಲನೇ ದಿನ ಮಗುವಿಗೆ ಖುಷಿಯಿಂದ ಕರೆದುಕೊಂಡು ಬರುತ್ತಿದ್ದಾರೆ. ಶಾಲೆಗಳಲ್ಲಿ ಚಾಕ್ಲೆಟ್, ಹೂವು ನೀಡಿ ರಾಜ್ಯಾದ್ಯಂತ ಸ್ವಾಗತ ಕೋರಲಾಗುತ್ತಿದೆ. ಶಾಲೆಗಳ ಆರಂಭಕ್ಕೆ ಉತ್ತಮ ಪ್ರತಿಕ್ರಿಯೇ ದೊರಕಿದೆ ಎಂದರು.
20 ತಿಂಗಳ ಬಳಿಕ ಚಿಣ್ಣರು ಶಾಲೆಗೆ, ಶಿಕ್ಷಕರು, ಮಕ್ಕಳು ಇಬ್ಬರಲ್ಲೂ ಸಂಭ್ರಮ.!
ಸಮಾಜದಲ್ಲಿ ಶಿಕ್ಷಣಕ್ಕೆ (Education) ಒಳ್ಳೆಯ ರೀತಿಯಲ್ಲಿ ಆದ್ಯತೆ ನೀಡಲಾಗುತ್ತಿದೆ. ಕೆಲವು ಶಾಲೆಗಳಲ್ಲಿ ಬಾಳೆಕಂದು, ಬಲೂನ್, ಮಾವಿನಸೊಪ್ಪು ಕಟ್ಟಿ 20 ತಿಂಗಳ ಬಳಿಕ ಮಕ್ಕಳಿಗೆ ಸ್ವಾಗತ ಕೋರಲಾಗಿದೆ ಎಂದರು.
ಸಿಲಬಸ್ ಕಡಿತ ವಿಚಾರ : ಇನ್ನು ಈ ಬಾರಿ ಸಿಲಬಸ್ (syllabus) ಕಡಿಮೆ ಮಾಡುವ ಬಗ್ಗೆ ಇನ್ನೂ ಚಿಂತಿಸಿಲ್ಲ. ಕಳೆದೊಂದುವರೆ ವರ್ಷದಿಂದ ಮಕ್ಕಳಿಗೆ ಪಠ್ಯದ ವಿಚಾರದಲ್ಲಿ ಅನ್ಯಾಯವಾಗಿದ್ದು, ಇದನ್ನು ಕವರ್ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದೆವೆ. ಮುಂದಿನ ದಿನಗಳಲ್ಲಿ ಯೋಚಿಸಿ ಈ ಬಗ್ಗೆ ನಿರ್ಧಾರ ಮಾಡಲಿದ್ದೇವೆ. ಆದರೂ, ಪಾಠದಲ್ಲಿ ಸಿಲಬಸ್ ಕಡಿಮೆ ಮಾಡುವುದಿಲ್ಲ. ಅವಶ್ಯಕತೆ ಇದ್ದರೆ ಪರೀಕ್ಷೆಯಲ್ಲಿ (Exam) ಕಡಿಮೆ ಸಿಲಬಸ್ ಬರುವ ರೀತಿಯಲ್ಲಿ ಯೋಚನೆ ಮಾಡಲಿದ್ದೇವೆ. ಡಿಸೆಂಬರ್ ವೇಳೆಗೆ ಈ ಬಗ್ಗೆ ತಜ್ಞರ ಜೊತೆ ಸಮಾಲೋಚಿಸಿ, ನಿರ್ಧರಿಸಲಾಗುವುದು ಎಂದರು.
ಪಿಯುಸಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗದು : ಪಿಯುಸಿ (PUC) ವಿದ್ಯಾರ್ಥಿಗಳಿಗೆ (Students) ಯಾವುದೇ ರೀತಿಯಲ್ಲಿ ಅನ್ಯಾಯವಾಗುವುದಿಲ್ಲ. ಶೈಕ್ಷಣಿಕ ವರ್ಷದಲ್ಲಿ ಪಿಯುಸಿಗೆ ಕೇವಲ ಒಂದೇ ಒಂದು ತಿಂಗಳು ಕಡಿಮೆಯಾಗಿದೆಯಷ್ಟೇ. ಆದರೆ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದರು.
1 ರಿಂದ 5ರವರೆಗೆ ಶಾಲೆ ಆರಂಭ : ಆದರೆ ಅರ್ಧ ದಿನ
ಶಿಕ್ಷಕರ ಪ್ರತಿಭಟನೆ ವಿಚಾರ : ಶಿಕ್ಷಕರು (Teachers) ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ (Protest) ನಡೆಸುತ್ತಿರುವ ವಿಚಾರದ ಬಗ್ಗೆಯೂ ಪ್ರಸ್ತಾಪಿಸಿ, ಅವರು ಸಾಂಕೇತಿಕ ಪ್ರತಿಭಟನೆ ನಡೆಸುತ್ತಿದ್ದಾರೆ. ಎರಡು ಮೂರು ಬಾರಿ ಈ ಬಗ್ಗೆ ಕುಳಿತು ಚರ್ಚಿಸಿದ್ದೆವೆ. ಒಳ್ಳೆಯ ಗುಣಮಟ್ಟದ ಶಿಕ್ಷಣ ನೀಡಬೇಕೆಂದರೆ, ಪರೀಕ್ಷೆ ನಡೆಸುವುದು ಒಳ್ಳೆಯದು. ಅವರು ಪರೀಕ್ಷೆ ಇಲ್ಲದೇ ಮುಂಬಡ್ತಿ ನೀಡಿ ಎಂದು ಕೇಳಿದ್ದಾರೆ. ಆದರೆ, ಶಿಕ್ಷಣ ಇಲಾಖೆ, ಪರೀಕ್ಷೆ ನೀಡಿಯೇ, ಮುಂಬಡ್ತಿ ನೀಡಲು ನಿರ್ಧರಿಸಿದೆ. ಮುಂದಿನ ದಿನಗಳಲ್ಲಿ ಇದನ್ನು ಒಪ್ಪಿಕೊಳ್ಳುವ ಬಗ್ಗೆ ಭರವಸೆ ಇದೆ. ಶಿಕ್ಷಕರು ನಮ್ಮ ಜೊತೆ ರಾಜಿ ಮಾಡಿಕೊಳ್ಳುವ ವಿಶ್ವಾಸವೂ ಇದೆ ಎಂದರು.
ಎಲ್.ಕೆ.ಜಿ (LkG)., ಯು.ಕೆ.ಜಿ (UKG). ಶಾಲೆ ಆರಂಭದ ವಿಚಾರ : ನಾವು ಹಂತ, ಹಂತವಾಗಿ ಈ ಬಗ್ಗೆ ಯೋಚಿಸುತ್ತಿದ್ದೆವೆ. 1 ರಿಂದ 5 ಶಾಲೆಗಳು ಆರಂಭ ಮಾಡಿದ್ದೆವೆ. ಸರ್ಕಾರಿ ಶಾಲೆಯಲ್ಲಿ ಅಂಗನವಾಡಿಗಳೇ ಹೆಚ್ಚಾಗಿದ್ದು, ಕೆಲವು ಕಡೆಗಳಲ್ಲಿ ಮಾತ್ರ ಎಲ್.ಕೆ.ಜಿ., ಯು.ಕೆ.ಜಿ. ಇವೆ. 1 ರಿಂದ 5ನೇ ತರಗತಿ ಆರಂಭದ ಅನುಭವದ ಆಧಾರದ ಮೇಲೆ ಎಲ್.ಕೆ.ಜಿ., ಯು.ಕೆ.ಜಿ. ಆರಂಭಕ್ಕೆ ಚಿಂತನೆ ಮಾಡಲಿದ್ದೇವೆ. ಮುಂದಿನ ದಿನಗಳಲ್ಲಿ, ಈ ಬಗ್ಗೆ ತಜ್ಞರ ಜೊತೆ ಸಮಾಲೋಚಿಸಲಿದ್ದೆವೆ ಎಂದು ಸಚಿವ ಬಿ ಸಿ ನಾಗೇಶ್ ಹೇಳಿದರು.