ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಎಸ್‌ಎಸ್‌ಎಲ್ ಸಿ, ಪಿಯುಸಿ ಪರೀಕ್ಷೆ ರದ್ದು..!
ಇದುವರೆಗೂ ಶಾಲೆ-ಕಾಲೇಜುಗಳು ಪ್ರಾರಂಭವಾಗಿಲ್ಲ ಪರೀಕ್ಷೆಗಳು ಹೇಗೆ ಬರೆಯಬೇಕೆಂಬ ಚಿಂತೆಯಲ್ಲಿದ್ದ ವಿದ್ಯಾರ್ಥಿಗಳಿಗೆ ಸರ್ಕಾರ ಗುಡ್‌ನ್ಯೂಸ್ ನಿಡಿದೆ.
ಕೋಲ್ಕತ್ತಾ, (ನ.11): ಕೋವಿಡ್ ವೈರಸ್ ಕಾರಣ ನಿಗದಿತ ದಿನಾಂಕಕ್ಕೆ ಶೈಕ್ಷಣಿಕ ವರ್ಷ ಪ್ರಾರಂಭವಾಗಿಲ್ಲ. ಹೀಗಾಗಿ ಅದಕ್ಕೆ ಸರಿ ಹೊಂದುವಂತೆ ಶೈಕ್ಷಣಿಕ ವರ್ಷವನ್ನು ರೂಪಿಸಬೇಕಿದೆ. ಈಗಾಗಲೇ ಶೈಕ್ಷಣಿಕ ವರ್ಷ ಬಹಳಷ್ಟು ತಡವಾಗಿದ್ದರಿಂದ ಪಶ್ಷಿಮ ಬಂಗಾಳದಲ್ಲಿ 10 ಹಾಗೂ 12ನೇ ತರಗತಿ ಪರೀಕ್ಷೆಗಳನ್ನ ರದ್ದು ಮಾಡಲಾಗಿದೆ.
ಹೌದು...ಪಶ್ಚಿಮ ಬಂಗಾಳದಲ್ಲಿ ಎದುರಾಗಿರುವ ಕೊವಿಡ್-19 ದುಸ್ಥಿತಿ ನಡುವೆ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಮುಖ್ಯ ಪರೀಕ್ಷೆ ನಡೆಸದಿರುವುದಕ್ಕೆ ಶಿಕ್ಷಣ ಇಲಾಖೆಯು ತೀರ್ಮಾನಿಸಿರುವ ಬಗ್ಗೆ ಸಿಎಂ ಮಮತಾ ಬ್ಯಾನರ್ಜಿ ಮಾಹಿತಿ ನೀಡಿದ್ದಾರೆ.
ಕಾಲೇಜು ಆರಂಭಕ್ಕೆ ಶಿಕ್ಷಣ ಇಲಾಖೆಯಿಂದ ಗೈಡ್ ಲೈನ್ಸ್ ಬಿಡುಗಡೆ..!
ಪಶ್ಚಿಮ ಬಂಗಾಳದಲ್ಲಿ 2020-21ನೇ ಶೈಕ್ಷಣಿಕ ಸಾಲಿನಲ್ಲಿ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿ ಪರೀಕ್ಷೆಗಳು ಇರುವುದಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.
ಕೊರೋನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆಗಳನ್ನು ಎದುರಿಸದೇ ಸಾಮಾನ್ಯ ಪರೀಕ್ಷೆಗಳನ್ನೇ ಬರೆದು ಕನಿಷ್ಠ ಅಂಕಗಳಿಂದ ಉತ್ತೀರ್ಣರಾದರೆ ಸಾಕು ಎಂದು ಮಮತಾ ಸರ್ಕಾರ ತಿಳಿಸಿದೆ.
ದೇಶಾದ್ಯಂತ ಕಾಲೇಜುಗಳನ್ನು ಆರಂಭಿಸುವುದಕ್ಕೆ ಈಗಾಗಲೇ ಯುಜಿಸಿ ಕೊವಿಡ್-19 ನಿಯಂತ್ರಣ ಮತ್ತು ನಿರ್ವಹಣೆ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಿದೆ. ಪಶ್ಚಿಮ ಬಂಗಾಳದಲ್ಲಿ ನವೆಂಬರ್.15ರ ಕಾಳಿ ಪೂಜೆ ಬಳಿಕ ಶಾಲಾ-ಕಾಲೇಜುಗಳ ಪುನಾರಂಭದ ಬಗ್ಗೆ ತೀರ್ಮಾನಿಸಲಾಗುತ್ತದೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಇನ್ನು ಕರ್ನಾಟಕದ ವಿಷಷಯಕ್ಕೆ ಬರುವುದಾದರೇ, ಇದೇ ನವೆಂಬರ್ 17ರಿಂದ ಕಾಲೇಜು ಪ್ರಾರಂಭಿಸಿಲು ಸರ್ಕಾರ ಆದೇಶ ಹೊರಿಸಿದೆ. ಆದ್ರೆ, ಶಾಲೆ ಆರಂಭಿಸುವ ಬಗ್ಗೆ ಇನ್ನು ಯಾವುದೇ ತೀರ್ಮಾನ ಕೈಗೊಂಡಿಲ್ಲ. ಈ ಬಗ್ಗೆ ಸಭೆ, ಚರ್ಚೆಗಳು ನಡೆಯುತ್ತಿವೆ. ಮೂಲಗಳ ಪ್ರಕಾರ ಶಾಲೆಗಳನ್ನ ಡಿಸೆಂಬರ್‌ನಿಂದ ಪ್ರಾರಂಭಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.