ಟವರ್‌ಗಳೇ ಇಲ್ಲ, ನೀವು ಹೇಗೆ ಆನ್‌ಲೈನ್ ಕ್ಲಾಸ್ ಮಾಡ್ತೀರಿ... ಹಾಲಪ್ಪ ಪ್ರಶ್ನೆ

ಮಲೆನಾಡು ಭಾಗದಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ಬಗ್ಗೆ ಶೂನ್ಯವೇಳೆಯಲ್ಲಿ ಶಾಸಕ ಹರತಾಳು ಹಾಲಪ್ಪ ಪ್ರಸ್ತಾಪ/ ಮೊಬೈಲ್ ಮೂಲಕ‌‌ ಆನ್ಲೈನ್ ಕ್ಲಾಸ್‌, ಮೊಬೈಲ್ ಮೂಲಕ ಸೇವೆ ಅಂತೆಲ್ಲಾ ಮಾಡ್ತಿದೀರಾ..?/ ಆದ್ರೆ ಮೊಬೈಲ್ ನೆಟ್ವರ್ಕ್ ಸಮರ್ಪಕವಾಗಿಲ್ಲ/ ನಮ್ಮ ಕ್ಷೇತ್ರದಲ್ಲಿ ಮೊಬೈಲ್ ಟವರ್ ಗಳಿಲ್ಲದಿರೋದೇ ಸಮಸ್ಯೆಗೆ ಕಾರಣ

No mobile network in malenadu how govt conduct online classes Haratalu Halappa mah

ಬೆಂಗಳೂರು(ಮಾ. 18) ಮಲೆನಾಡು ಭಾಗದಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ಬಗ್ಗೆ ಶೂನ್ಯವೇಳೆಯಲ್ಲಿ ಶಾಸಕ ಹರತಾಳು ಹಾಲಪ್ಪ ಪ್ರಸ್ತಾಪ ಮಾಡಿದ್ದಾರೆ.  ಮೊಬೈಲ್ ಮೂಲಕ‌‌ ಆನ್ಲೈನ್ ಕ್ಲಾಸ್‌, ಮೊಬೈಲ್ ಮೂಲಕ ಸೇವೆ ಅಂತೆಲ್ಲಾ ಮಾಡ್ತಿದೀರಾ..? ಆದ್ರೆ ಮೊಬೈಲ್ ನೆಟ್ವರ್ಕ್ ಸಮರ್ಪಕವಾಗಿಲ್ಲ. ನಮ್ಮ ಕ್ಷೇತ್ರದಲ್ಲಿ ಮೊಬೈಲ್ ಟವರ್ ಗಳಿಲ್ಲದಿರೋದೇ ಸಮಸ್ಯೆಗೆ ಕಾರಣ ಎಂದು  ಸಮಸ್ಯೆಯ ಬಗ್ಗೆ ಗಮನ ಸೆಳೆದರು.

ಮೊಬೈಲ್ ಟವರ್ ಗಳನ್ನು ಹಾಕಿಸೋದು ಕೇಂದ್ರ ಸರ್ಕಾರ. ಆದ್ರೆ ರಾಜ್ಯ ಸರ್ಕಾರವು ವೆಚ್ಚ ಹಂಚಿಕೆ ಸೂತ್ರ ಅನುಸರಿಸಿ ಟವರ್  ಗಳನ್ನು ಹಾಕಿಸಲಿ. ನಾವು ಮಾತಾಡಿದ್ರೆ ನಮ್ ಸರ್ಕಾರದ ವಿರುದ್ಧವೇ ಮಾತಾಡ್ತಾರೆ ಅಂತಾರೆ. ಆದ್ರೆ ಸಮಸ್ಯೆ ಗಂಭೀರವಾಗಿರೋದ್ರಿಂದ ಗಮನಕ್ಕೆ ತಂದಿದ್ದೇನೆ ಎಂದು ಬೇಸರದಿಂದಲೇ ಮಾತನಾಡಿದ್ದಾರೆ.

ಹೊಸ ಶೈಕ್ಷಣಿಕ ವರ್ಷಕ್ಕೂ ಡೇಟ್ ಫಿಕ್ಸ್ ಮಾಡಿದ ಸುರೇಶ್ ಕುಮಾರ್

ಡಿಸಿಎಂ ಅಶ್ವಥ ನಾರಾಯಣ ಬದಲು ಈ ಬಗ್ಗೆ ಸಚಿವ ಜಗದೀಶ್‌ ಶೆಟ್ಟರ್ ಉತ್ತರ ನೀಡಿ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ‌ ಮಾಡಲಾಗುತ್ತಿದೆ. ಕಾಸ್ಟ್ ಶೇರಿಂಗ್ ಮೂಲಕ ಟವರ್ ಹಾಕಿಸುವ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.

ಸರ್ಕಾರ ಆನ್ ಲೈನ್ ಕ್ಲಾಸ್ ಗಳನ್ನು ಮಾಡಲು ಮುಂದಾದಾಗ ಪ್ರತಿ ಸಾರಿಗೂ ಮಲೆನಾಡಿನ ಮಕ್ಕಳು ಈ ಸಮಸ್ಯೆ ಅನುಭವಿಸುತ್ತಲೇ ಇದ್ದಾರೆ. ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ಉಡುಪಿಯ ಕೆಲ ಭಾಗದಲ್ಲಿ ನೆಟ್ ವರ್ಕ್ ಇಂದಿಗೂ ಮರೀಚಿಕೆ. 

Latest Videos
Follow Us:
Download App:
  • android
  • ios