Asianet Suvarna News Asianet Suvarna News

ನಾಳೆ 1,563 ವಿದ್ಯಾರ್ಥಿಗಳಿಗೆ NEET ಮರು ಪರೀಕ್ಷೆ

ದೇಶದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿರುವ ನೀಟ್ ಪರೀಕ್ಷೆಗೆ ಸಂಬಂಧಿಸಿದಂತೆ, ಪರೀಕ್ಷೆಯಲ್ಲಿ ಕೃಪಾಂಕ ಪಡೆದಿದ್ದ 1,563 ವಿದ್ಯಾರ್ಥಿಗಳಿಗೆ ಜೂ.23ರ ಭಾನುವಾರ ಮರು ಪರೀಕ್ಷೆ ನಡೆಯಲಿದೆ

NEET UG Re test 1563 candidates to appear for re-exam on Sunday rav
Author
First Published Jun 22, 2024, 11:51 AM IST

ನವದೆಹಲಿ (ಜೂ.22): ದೇಶದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿರುವ ನೀಟ್ ಪರೀಕ್ಷೆಗೆ ಸಂಬಂಧಿಸಿದಂತೆ, ಪರೀಕ್ಷೆಯಲ್ಲಿ ಕೃಪಾಂಕ ಪಡೆದಿದ್ದ 1,563 ವಿದ್ಯಾರ್ಥಿಗಳಿಗೆ ಜೂ.23ರ ಭಾನುವಾರ ಮರು ಪರೀಕ್ಷೆ ನಡೆಯಲಿದೆ. 7 ಪರೀಕ್ಷಾ ಕೇಂದ್ರಗಳಲ್ಲಿ ನಿಗದಿಯಾಗಿರುವ ನೀಟ್‌ ಪರೀಕ್ಷೆ ನಡೆಯುವ ಸಂದರ್ಭದಲ್ಲಿ, ಪರೀಕ್ಷಾ ಸುಗಮವಾಗಿ ನಡೆಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ) ಮತ್ತು ಕೇಂದ್ರ ಶಿಕ್ಷಣ ಸಚಿವಾಲಯದ ಅಧಿಕಾರಿಗಳು ಪರೀಕ್ಷಾ ಕೇಂದ್ರದಲ್ಲಿ ಉಪಸ್ಥಿತರಿರಲಿದ್ದಾರೆ.

ಮೇಘಾಲಯ, ಹರ್ಯಾಣ, ಛತ್ತೀಸಗಢ, ಗುಜರಾತ್‌ ಮತ್ತು ಚಂಡೀಗಢದ ಆರು ಕೇಂದ್ರಗಳಲ್ಲಿ ಪರೀಕ್ಷೆಯ ಪ್ರಾರಂಭದ ವಿಳಂಬದಿಂದಾಗಿ ಸಮಯದ ನಷ್ಟವನ್ನು ಸರಿದೂಗಿಸಿದ ವಿದ್ಯಾರ್ಥಿಗಳಿಗೆ ನೀಡಲಾಗಿದ್ದ ಕೃಪಾಂಕಗಳನ್ನು ಸಂಸ್ಥೆ ಹಿಂದಕ್ಕೆ ತೆಗೆದುಕೊಂಡ ಬಳಿಕ ವೈದ್ಯಕೀಯ ಅರ್ಹತಾ ಪರೀಕ್ಷೆಗೆ ಸಂಬಂಧಿತ ನೀಟ್ ಮರು ಪರೀಕ್ಷೆ ನಡೆಯುತ್ತಿದೆ.

 

ಪರೀಕ್ಷೆ ಹಿಂದಿನ ದಿನವೇ NEET 2024 ಪ್ರಶ್ನೆಪತ್ರಿಕೆ ಸೋರಿಕೆ!

ಈ ಬಾರಿ 67 ಜನರು 720ಕ್ಕೆ 720 ಅಂಕ ಪಡೆದು ಟಾಪರ್ ಆಗಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ಪೈಕಿ 6 ಜನರು ಕೃಪಾಂಕ ಪಡೆದು ಟಾಪರ್‌ ಆಗಿದ್ದರು.

Latest Videos
Follow Us:
Download App:
  • android
  • ios