Asianet Suvarna News Asianet Suvarna News

ನೀಟ್ ಪರೀಕ್ಷಾ ದಿನಾಂಕ ಪ್ರಕಟಿಸಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್

* 2021ನೇ ಸಾಲಿನ   ರಾಷ್ಟ್ರೀಯ ಅರ್ಹತಾ (ನೀಟ್) ಪರೀಕ್ಷೆ
* ನೀಟ್ ಪರೀಕ್ಷೆ ಫಲಿತಾಂಶ ಪ್ರಕಟಿಸಿದ ಕೇಂದ್ರ ಶಿಕ್ಷಣ ಸಚಿವ
 * ಪರೀಕ್ಷೆಯನ್ನು ನಡೆಸುವ ನಗರಗಳ ಸಂಖ್ಯೆಯೂ ಹೆಚ್ಚಳ

NEET UG 2021 to be held on 12 Sept rbj
Author
Bengaluru, First Published Jul 12, 2021, 7:06 PM IST

ನವದೆಹಲಿ, (ಜುಲೈ.12): 2021ನೇ ಸಾಲಿನ  ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ (ನೀಟ್) ಪರೀಕ್ಷೆಗೆ ದಿನಾಂಕ ನಿಗದಿಯಾಗಿದೆ.

 ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಇಂದು (ಸೋಮವಾರ) ಪ್ರಕಟಿಸಿದ್ದು, ಸೆಪ್ಟೆಂಬರ್ 12 ರಂದು ನೀಟ್ ಪರೀಕ್ಷೆ ನಡೆಯಲಿದೆ 

ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ)ಯ ವೆಬ್‌ಸೈಟ್‌ನಲ್ಲಿ ನಾಳೆ (ಜುಲೈ.13)  ಸಂಜೆ 5 ಗಂಟೆಯಿಂದ ಪ್ರಾರಂಭವಾಗಲಿದೆ. ಪರೀಕ್ಷೆ ನಡೆಸುವ ನಗರಗಳ ಸಂಖ್ಯೆಯನ್ನು 155 ರಿಂದ 198 ಕ್ಕೆ ಹೆಚ್ಚಿಸಲಾಗಿದೆ ಎಂದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲದ ಫಸ್ಟ್ ಸೆಮಿಸ್ಟರ್​ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಕೊರೋನಾ ಹಿನ್ನಲೆಯಲ್ಲಿ ಪರೀಕ್ಷೆಯನ್ನು ನಡೆಸುವ ನಗರಗಳ ಸಂಖ್ಯೆಯನ್ನು 155 ರಿಂದ 198 ಕ್ಕೆ ಹೆಚ್ಚಿಸಲಾಗಿದೆ. 2020 ರಲ್ಲಿ ಬಳಸಿದ 3862 ಕೇಂದ್ರಗಳಿಂದ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ಸಹ ಹೆಚ್ಚಿಸಲಾಗುವುದು ಎಂದು ಧರ್ಮೇಂದ್ರ ಪ್ರಧಾನ್ ವಿವರಿಸಿದರು,

ಕೊರೋನಾ ಮಾರ್ಗಸೂಚಿ ಪಾಲಿಸಲು ಕೇಂದ್ರದಲ್ಲಿರುವ ಎಲ್ಲ ಅಭ್ಯರ್ಥಿಗಳಿಗೆ ಫೇಸ್ ಮಾಸ್ಕ್ ನೀಡಲಾಗುವುದು. ಇದರೊಂದಿಗೆ ಎಲ್ಲ ನಿಯಮ ಪಾಲಿಸಲಾಗುವುದು ಎಂದು ಹೇಳಿದರು.

Follow Us:
Download App:
  • android
  • ios