NEET Result 2022 ಎನ್‌ಟಿಎ ನೀಟ್ ಯುಜಿ 2022 ಫಲಿತಾಂಶ, ಕಟ್‌ಆಫ್ ಇಂದು ಪ್ರಕಟ
ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ಪದವಿಪೂರ್ವ), NEET UG ಫಲಿತಾಂಶ 2022 ಅನ್ನು ಸೆ.7ರಂದು ಬಿಡುಗಡೆ ಮಾಡಲಿದೆ. ಅಧಿಕೃತ ಎನ್‌ಟಿಎ ಸೂಚನೆಯ ಪ್ರಕಾರ, NEET UG ಫಲಿತಾಂಶವನ್ನು ಮಧ್ಯಾಹ್ನ 12 ಗಂಟೆಯ ನಂತರ ಪ್ರಕಟಿಸಲಾಗುತ್ತದೆ.
ಬೆಂಗಳೂರು (ಸೆ.7): ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಪದವಿಪೂರ್ವ ವಿಭಾಗದ ನ್ಯಾಷನಲ್ ಎಲಿಜಿಬಲಿಟಿ ಮತ್ತು ಎಂಟ್ರೆನ್ಸ್ ಟೆಸ್ಟ್ ಅನ್ನು ಬುಧವಾರ ಮಧ್ಯಾಹ್ನ ಘೋಷಣೆ ಮಾಡಲಿದೆ. 2022ರ ನೀಟ್ ಯುಜಿ ಫಲಿತಾಂಶ ಮಧ್ಯಾಹ್ನ 12 ಗಂಟೆಯ ನಂತರ ವೆಬ್‌ಸೈಟ್‌ನಲ್ಲಿ ಪ್ರಕಟ ಮಾಡಿದೆ. ಈ ಕುರಿತಾಗಿ ಎನ್‌ಟಿಎ ತನ್ನ ನೋಟಿಸ್‌ನಲ್ಲಿ ತಿಳಿಸಿತ್ತು. ಫಲಿತಾಂಶದ ಜೊತೆಗೆ, ನೀಟ್ 2022 ಗಾಗಿ ವರ್ಗವಾರು ಕಟ್ಆಫ್ ಅನ್ನು ಸಹ ಬಿಡುಗಡೆ ಮಾಡಲಾಗುತ್ತದೆ. ಪರೀಕ್ಷೆಯನ್ನು 2022ರ ಜುಲೈ 17 ರಂದು ನಡೆಸಲಾಗಿತ್ತು ಮತ್ತು ವೈದ್ಯಕೀಯ ಪ್ರವೇಶ ಪರೀಕ್ಷೆಗೆ 18.72 ಲಕ್ಷ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ನೀಟ್ ಫಲಿತಾಂಶಗಳೊಂದಿಗೆ ಸ್ಕೋರ್‌ಕಾರ್ಡ್‌ಗಳು, ಶ್ರೇಣಿಗಳು, ಕಟ್-ಆಫ್‌ಗಳು ಮಾಹಿತಿಯನ್ನೂ ಕೂಡ ವೆಬ್‌ಸೈಟ್‌ನಲ್ಲಿ ನೀಡಲಾಗಿದೆ. ದೇಶದಾದ್ಯಂತ 3,750 ಕೇಂದ್ರಗಳಲ್ಲಿ ಎನ್‌ಟಿಎ ನಡೆಸಿದ ನೀಟ್-ಯುಜಿ 2022 ಪರೀಕ್ಷೆಗೆ 16 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಹಾಜರಾಗಿದ್ದರು. ಪದವಿಪೂರ್ವ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಒಟ್ಟು 18,72,341 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿಯು 1872343 ಅಭ್ಯರ್ಥಿಗಳಿಗೆ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ ಅನ್ನು 3570 ವಿವಿಧ ಕೇಂದ್ರಗಳಲ್ಲಿ ಭಾರತದ ಹೊರಗಿನ 14 ನಗರಗಳು ಸೇರಿದಂತೆ ದೇಶದಾದ್ಯಂತ 497 ನಗರಗಳಲ್ಲಿ ನಡೆಸಿತ್ತು.
ಅಭ್ಯರ್ಥಿಗಳು ತಮ್ಮ NEET UG 2022 ಫಲಿತಾಂಶಗಳನ್ನು ಈ ವೆಬ್‌ಸೈಟ್‌ಗಳ ಲಿಂಕ್ ಮೂಲಕ ಪರೀಕ್ಷೆ ಮಾಡಬಹುದಾಗಿದೆ. ntaresults.nic.in ವೆಬ್‌ಸೈಟ್‌ನಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದು. ಇನ್‌ಸ್ಟಿಟ್ಯೂಟ್‌ಗಳು ಕೌನ್ಸೆಲಿಂಗ್‌ಗಾಗಿ ಅರ್ಜಿಗಳನ್ನು ಆಹ್ವಾನಿಸುತ್ತವೆ ಮತ್ತು ಅಖಿಲ ಭಾರತ ಶ್ರೇಣಿಯ ಆಧಾರದ ಮೇಲೆ ಅರ್ಹತಾ ಪಟ್ಟಿಯನ್ನು ಅಡ್ಮಿಟಿಂಗ್ ಅಧಿಕಾರಿಗಳು ತೆಗೆದುಕೊಳ್ಳುತ್ತಾರೆ. NEET (UG) - 2022 ರ ಮೆರಿಟ್ ಪಟ್ಟಿಯ ಪ್ರಕಾರ ಆಯಾ ವಿಭಾಗಗಳಲ್ಲಿ ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶವು ಅಖಿಲ ಭಾರತ ಶ್ರೇಣಿಯನ್ನು ಮಾತ್ರ ಆಧರಿಸಿರುತ್ತದೆ.
ಯಾವ ಕೋರ್ಸ್‌ನಲ್ಲಿ ಎಷ್ಟು ಸೀಟ್: NEET ಫಲಿತಾಂಶ ಮತ್ತು ಕಟ್-ಆಫ್ ಘೋಷಣೆಯ ನಂತರ, ಅಭ್ಯರ್ಥಿಗಳು ನಿರ್ದಿಷ್ಟ ಕೋರ್ಸ್‌ನಲ್ಲಿ ಎಷ್ಟು ಸೀಟುಗಳಿವೆ ಎಂದು ತಿಳಿಯಲು ಆಸಕ್ತಿ ಹೊಂದಿರುತ್ತಾರೆ.ಅದರ ಪಟ್ಟಿ ಒಟ್ಟಿದೆ. ಎಂಬಿಬಿಎಸ್‌ನಲ್ಲಿ 91,927, ಬಿಡಿಎಸ್‌ನಲ್ಲಿ 27,698, ಆಯುಷ್‌ನಲ್ಲಿ 52,720, BVSc ಮತ್ತು AH ನಲ್ಲಿ 603 ಸೀಟ್‌ಗಳಿವೆ .ಒಟ್ಟಾರೆ ಇರುವ ವೈದ್ಯಕೀಯ ಕಾಲೇಜುಗಳ ಸಂಖ್ಯೆ 612 ಆಗಿದ್ದರೆ, ದಂತ ವೈದ್ಯಕೀಯ ಕಾಲೇಜುಗಳು ಸಂಖ್ಯೆ 317 ಆಗಿದೆ.
NEET ಪರೀಕ್ಷೆಯಲ್ಲಿ ಬಲವಂತದಿಂದ ಒಳ ಉಡುಪು ಬಿಚ್ಚಿಸಿದ್ದ ಪ್ರಕರಣ; ಮರು ಪರೀಕ್ಷೆಗೆ ಅವಕಾಶ
ಟೈ ಆದರೆ ಫಲಿತಾಂಶ ಹೇಗೆ: NTA ತನ್ನ ಟೈ-ಬ್ರೇಕರ್ ನಿಯಮವನ್ನು ಈ ವರ್ಷದಿಂದ ಮಾರ್ಪಡಿಸಿದೆ ಮತ್ತು ವಯಸ್ಸಿನ ಆಧಾರದ ಟೈ ಬ್ರೇಕಿಂಗ್ ಅನ್ನು ನಿಲ್ಲಿಸಿದೆ. ಅಂದರೆ, ಇಬ್ಬರು ವಿದ್ಯಾರ್ಥಿಗಳ ನಡುವೆ ಟೈ ಸಂಭವಿಸಿದರೆ, ಜೀವಶಾಸ್ತ್ರದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ NTA ಅದನ್ನು ಪರಿಹರಿಸುತ್ತದೆ. ಇದು ಮುಂದುವರಿದರೆ, ರಸಾಯನಶಾಸ್ತ್ರದಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸುವ ವಿದ್ಯಾರ್ಥಿಯು ಆದ್ಯತೆಯನ್ನು ಪಡೆಯುತ್ತಾನೆ ಮತ್ತು ನಂತರ ಕಡಿಮೆ ತಪ್ಪು ಉತ್ತರಗಳನ್ನು ಹೊಂದಿರುವ ಅಭ್ಯರ್ಥಿಗೆ ಆದ್ಯತೆ ನೀಡಲಾಗುತ್ತದೆ.
ಇಂದು ಬಿಡುಗಡೆಯಾಗಲಿದೆ NEET UG 2022 ಕೀ ಉತ್ತರಗಳು..! ಆಕ್ಷೇಪಣೆ ಸಲ್ಲಿಸಲು ಇಲ್ಲಿದೆ ವಿವರ..
NEET UG 2022 ಫಲಿತಾಂಶ: ಸ್ಕೋರ್‌ಕಾರ್ಡ್ ಪರಿಶೀಲಿಸಲು ಕ್ರಮಗಳು
ಹಂತ 1: ಅಧಿಕೃತ ವೆಬ್‌ಸೈಟ್ neet.nta.nic.in ಭೇಟಿ ನೀಡಿ
ಹಂತ 2: "Result – NEET (UG) 2022" ಲಿಂಕ್ ಅನ್ನು ಕ್ಲಿಕ್ ಮಾಡಿ
ಹಂತ 3: NEET 2021 ಪ್ರವೇಶ ಪರೀಕ್ಷೆಗಾಗಿ ನಿಮ್ಮ ರುಜುವಾತುಗಳನ್ನು ನಮೂದಿಸಿ ಮತ್ತು ಲಾಗ್ ಇನ್ ಮಾಡಿ.
ಹಂತ 4: NEET 2022 ಫಲಿತಾಂಶ ಪ್ರದರ್ಶನವಾಗುತ್ತದೆ
ಹಂತ 5: ಡೌನ್‌ಲೋಡ್ ಮಾಡಿದ ನಂತರ ಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟ್‌ಔಟ್ ತೆಗೆದುಕೊಳ್ಳಿ.