ಮೈಸೂರು, (ಸೆ.12): ಮೈಸೂರಿನ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ಡ್ರಗ್ ಸೇವನೆ ಎನ್ನುವ ಶ್ರೀರಾಮನ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪಕ್ಕೆ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಖಂಡಿಸಿದ್ದಾರೆ.

8 ಮತ್ತು 9ನೇ ತರಗತಿ ಮಕ್ಕಳವರೆಗೆ ಡ್ರಗ್ಸ್ ಪ್ರವೇಶ ಮಾಡಿದೆ. ಮೈಸೂರಿನ ಶಾಲೆಯಲ್ಲಿ ಒಬ್ಬ ಹುಡುಗ ಪೆನ್ ಮೂಸಿ ನೋಡುತ್ತಿದ್ದ. ಅದರೊಳಗೆ ಡ್ರಗ್ಸ್ ಇತ್ತು. ತನಿಖೆ ಮಾಡಿದ್ರೆ 10 ಜನ ವಿದ್ಯಾರ್ಥಿ ಆ ಜಾಲದಲ್ಲಿ ಇರುವುದು ಗೊತ್ತಾಯಿತು ಎಂದು ಪ್ರಮೋದ್ ಮುತಾಲಿಕ್ ಆರೋಪ ಮಾಡಿದ್ದರು,

"

ಐಸ್‌ಕ್ರೀಂ, ಹಣ್ಣಿಗೆ ಡ್ರಗ್ಸ್‌ ಸವರಿ ಶಾಲಾ ಮಕ್ಕಳಿಗೆ ನೀಡಿಕೆ: ಶಿಕ್ಷಣ ಸಚಿವ ಶಂಕೆ

ಇದಕ್ಕೆ ಇಂದು (ಶನಿವಾರ)  ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಘು ಆಚಾರ್, ಒಂದು ವಿದ್ಯಾಸಂಸ್ಥೆ ಕಟ್ಟ ಬೇಕಾದರೆ ಸಾವಿರಾರು ಜನರ ಶ್ರಮವಿದೆ. ಕೇವಲ ಒಬ್ಬ, ಇಬ್ಬರು ವಿದ್ಯಾರ್ಥಿ ಡ್ರಗ್ ತೆಗೆದುಕೊಂಡರೆ ಇಡೀ ವಿದ್ಯಾಸಂಸ್ಥೆಯ ಬಗ್ಗೆಯೇ ಅಪಪ್ರಚಾರ ಮಾಡೋದು ತಪ್ಪು. ನಿಮ್ಮ ಹತ್ತಿರ ದಾಖಲೆ ಇದ್ರೆ ಸಿಸಿಬಿ ಪೊಲೀಸರಿಗೆ ಕೊಡಿ ಎಂದು ಪ್ರಮೋದ್ ಮುತಾಲಿಕ್‌ಗೆ ಸವಾಲು ಹಾಕಿದರು.

 ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಲಿ. ಆದರೆ ಕೇವಲ ಪ್ರಚಾರಕ್ಕೋಸ್ಕರ ಮಾತನಾಡುವ ಚಾಳಿ ಬಿಡಿ. ಸಮಾಜದಲ್ಲಿ ಒಂದು ಸಮುದಾಯವನ್ನು ಟಾರ್ಗೆಟ್ ಮಾಡೋದು ವಿಷಾದ ಎಂದು ಪ್ರಮೋದ್ ಮುತಾಲಿಕ್ ಹೇಳಿಕೆಗೆ ರಘು ಆಚಾರ್ ತಿರುಗೇಟು ನೀಡಿದರು.

'ಡ್ರಗ್ಸ್​ ದಂಧೆಯಲ್ಲಿ ರಾಜಕಾರಣಿಗಳು, ಸಾಕ್ಷಿ ಸಮೇತ 32 ಜನರ ಲಿಸ್ಟ್ ಗೃಹ ಸಚಿವರ ಕೈ ಸೇರಲಿದೆ '

ರಾಜ್ಯ ಸರ್ಕಾರ ಡ್ರಗ್ಸ್ ಮಾಫಿಯಾ ಕುರಿತು ಕ್ರಮಕ್ಕೆ ಮುಂದಾಗಿದೆ. ಸಿಎಂ ಬಿಎಸ್‌ವೈ ಹಾಗೂ ಗೃಹ ಸಚಿವರು ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ಮಾಡುತ್ತಿದ್ದಾರೆ. ನನಗೆ ತಿಳಿದ ಮಟ್ಟಿಗೆ ಯಾವ ರಾಜಕಾರಣಿಗಳೂ ಡ್ರಗ್ಸ್ ತೆಗೆದುಕೊಂಡಿದ್ದನ್ನು ನೋಡಿಲ್ಲ. 32 ರಾಜಕಾರಣಿಗಳು ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿರುವ ಮುತಾಲಿಕ್ ಅವರು ಅಂತಹ ರಾಜಕಾರಣ ಹೆಸರನ್ನು ಮಾಧ್ಯಮಗಳ ಮುಂದೆ ಬಹಿರಂಗ ಮಾಡಬೇಕಿತ್ತು. ರಾಜಕಾರಣಿಗಳನ್ನು ರಕ್ಷಣೆ ಮಾಡುವ ಸಲುವಾಗಿ 32 ಜನ ರಾಜಕಾರಣಿಗಳ ಹೆಸರನ್ನು ಲಕೋಟೆಯಲ್ಲಿ ಗೃಹ ಸಚಿವರಿಗೆ ನೀಡಿದ್ದಾರಾ..? ಎಂದು ಪ್ರಶ್ನಿಸಿದರು.

ಇನ್ನು ಇದೇ ವೇಳೆ ಡ್ರಗ್ಸ್ ದಂಧೆಯಲ್ಲಿ ಶಾಸಕ ಜಮೀರ್ ಅಹಮದ್ ಹೆಸರು ಕೇಳಿ ಬರುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿರುವ ರಘ ಆಚಾರ್, ಜಮೀರ್ ಅಹಮದ್ ಮಾತ್ರವಲ್ಲ ಯಾರು ತಪ್ಪು ಮಾಡಿದ್ದರೂ ಅದೂ ತಪ್ಪೇ. ಜಮೀರ್ ಅಹಮದ್ ಮೇಲಿನ ಆರೋಪ ಸಾಬೀತಾಗಿದೆಯಾ.?ಕೇವಲ ಆರೋಪ ಮಾಡಲಾಗುತ್ತಿದೆ ಎಂದರು.