Asianet Suvarna News Asianet Suvarna News

ಕೋವಿಡ್‌ 2ನೇ ಅಲೆ: ಸರ್ಕಾರಿ ಶಾಲೆ, ಪೋಷಕರಿಗೆ ಬೇಕಿಲ್ಲ 1-9 ಪರೀಕ್ಷೆ

ಖಾಸಗಿ ಶಾಲೆಗಳಿಂದ ಮಾತ್ರ ಪರೀಕ್ಷೆಗೆ ಒತ್ತಡ| ಸರ್ಕಾರಿ ಶಿಕ್ಷಕರು, ತಜ್ಞರು, ಪೋಷಕರಿಂದ ಮೌಲ್ಯಾಂಕನಕ್ಕೆ ಒಲವು| ಪರೀಕ್ಷೆ ನಡೆಸಲು ಅವಕಾಶ ಕೋರಿ ಈಗಾಗಲೇ ಸರ್ಕಾರಕ್ಕೆ ಪತ್ರ ಬರೆದ ಖಾಸಗಿ ಶಾಲೆಗಳು| ಐದನೇ ತರಗತಿವರೆಗಿನ ಮಕ್ಕಳಿಗೆ ಯಾವುದೇ ಪರೀಕ್ಷೆ ನಡೆಸದಿರುವುದು ಸೂಕ್ತ ಎನ್ನುತ್ತಿರುವ ಬಹಳಷ್ಟು ಪೋಷಕರು| 

Mixed opinions About Examination due to Coronavirus in Karnataka grg
Author
Bengaluru, First Published Apr 4, 2021, 8:45 AM IST

ಬೆಂಗಳೂರು(ಏ.04): ರಾಜ್ಯದಲ್ಲಿ ಈಗ ಕೋವಿಡ್‌ ಎರಡನೇ ಅಲೆ ತೀವ್ರಗೊಳ್ಳುತ್ತಿರುವುದರ ನಡುವೆ 1ರಿಂದ 9ನೇ ತರಗತಿವರೆಗಿನ ಮಕ್ಕಳಿಗೆ ಪರೀಕ್ಷೆ ನಡೆಸಬೇಕೇ, ಬೇಡವೇ ಎಂಬ ಬಗ್ಗೆ ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಖಾಸಗಿ ಶಾಲೆಗಳು ಪರೀಕ್ಷೆ ನಡೆಸಬೇಕೆಂದು ಅಭಿಪ್ರಾಯ ಪಡುತ್ತಿದ್ದರೆ, ಸರ್ಕಾರಿ ಶಿಕ್ಷಕರು ಹಾಗೂ ಪೋಷಕ ವಲಯದಲ್ಲಿ ಭಿನ್ನ ಅಭಿಪ್ರಾಯ ಕೇಳಿಬರುತ್ತಿದೆ.

ಸರ್ಕಾರದ ದಿಢೀರ್‌ ಶಾಲೆ ಬಂದ್‌ ನಿರ್ಧಾರ ಖಂಡಿಸಿರುವ ಖಾಸಗಿ ಶಾಲೆಗಳು ಪರೀಕ್ಷೆ ನಡೆಸಲು ಅವಕಾಶ ಕೋರಿ ಈಗಾಗಲೇ ಸರ್ಕಾರಕ್ಕೆ ಪತ್ರ ಬರೆದಿವೆ. ಪರೀಕ್ಷೆ ನಡೆಸದಿದ್ದರೆ ಇದುವರೆಗೆ ಬೋಧಿಸಿದ ಅಥವಾ ಮಕ್ಕಳು ನಡೆಸಿದ ಅಧ್ಯಯನ ಎರಡೂ ವ್ಯರ್ಥವಾಗುತ್ತದೆ. ಮುಂದಿನ ತರಗತಿಗೆ ತೇರ್ಗಡೆ ಮಾಡಲು ಪರೀಕ್ಷೆ ಅಗತ್ಯ. ಅದು ಮೌಲ್ಯಾಂಕನ ರೀತಿಯೇ ಆಗಿರಲಿ ಸಾಕು. ಆದರೆ, 1ರಿಂದ 9ನೇ ತರಗತಿಗೆ ಪರೀಕ್ಷೆ ನಡೆಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿವೆ.

ಇತ್ತ ಸರ್ಕಾರಿ ಶಾಲೆಗಳಲ್ಲಿ 1ರಿಂದ 5ನೇ ತರಗತಿವರೆಗಿನ ಮಕ್ಕಳಿಗೆ ಇದುವರೆಗೂ ಶಾಲೆಗಳನ್ನು ತೆರೆಯಲಾಗಿಲ್ಲ. ಇನ್ನು ಆನ್‌ಲೈನ್‌ ತರಗತಿಯಂತೂ ಮರೀಚಿಕೆ. ಹಾಗಾಗಿ ಆ ಮಕ್ಕಳು ಈ ವರ್ಷ ಕಲಿಕೆಯಿಂದ ವಂಚಿತರಾಗಿದ್ದಾರೆ. ಅಂತಹ ಮಕ್ಕಳಿಗೆ ಯಾವ ಆಧಾರದಲ್ಲಿ ಪರೀಕ್ಷೆ ನಡೆಸಲು ಸಾಧ್ಯ ಎನ್ನುವುದು ಶಿಕ್ಷಕರು, ತಜ್ಞರು ಮತ್ತು ಪೋಷಕರ ವಲಯದಲ್ಲಿ ಕೇಳಿಬರುತ್ತಿವ ಅಭಿಪ್ರಾಯ.

2017, 18ರ ವೈದ್ಯ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

ಅಧಿಕಾರಿಗಳ ವಲಯದ್ದೂ ಇದೇ ಅಭಿಪ್ರಾಯವಾಗಿದೆ, ಆದರೆ, 6ರಿಂದ 9ನೇ ತರಗತಿ ಮಕ್ಕಳಿಗೆ ಕೆಲ ತಿಂಗಳ ಕಾಲ ವಿದ್ಯಾಗಮ ನಂತರ ತರಗತಿ ಚಟುವಟಿಕೆಗಳು ನಡೆದಿರುವುದರಿಂದ ಪ್ರತಿ ವರ್ಷದಂತೆ ವಾರಗಟ್ಟಲೆ ಲಿಖಿತ ಪರೀಕ್ಷೆ ಬದಲು ಪರ್ಯಾಯ ರೀತಿಯಲ್ಲಿ ಪರೀಕ್ಷೆ ನಡೆಸುವುದು ಸೂಕ್ತ ಎನ್ನುತ್ತಾರೆ ಪೋಷಕರು.

ಇನ್ನು, ಖಾಸಗಿ ಶಾಲಾ ಮಕ್ಕಳ ಪೋಷಕರಲ್ಲಿ ಒಂದು ವರ್ಗ ಪರೀಕ್ಷೆ ಅಪೇಕ್ಷಿಸಿದರೆ, ಇನ್ನೊಂದು ವರ್ಗ ಬೇಡ ಎನ್ನುತ್ತಿದೆ. ನಗರ ಪ್ರದೇಶದ ಶಾಲೆಗಳು ಮಾತ್ರ ಆನ್‌ಲೈನ್‌ ತರಗತಿಗಳನ್ನು ಸಮರ್ಪಕ ರೀತಿಯಲ್ಲಿ ನಡೆಸಿವೆ. ಆ ಪೋಷಕರು ಪರೀಕ್ಷೆಯೂ ಆನ್‌ಲೈನ್‌ನಲ್ಲೇ ಇರುತ್ತದೆ. ಹಾಗಾಗಿ ಪರೀಕ್ಷೆಗೆ ನಮ್ಮದೇನೂ ಆಕ್ಷೇಪವಿಲ್ಲ ಎನ್ನುತ್ತಾರೆ. ಆದರೆ, ಗ್ರಾಮೀಣ ಭಾಗದ ಖಾಸಗಿ ಶಾಲೆಗಳಲ್ಲಿ ಆನ್‌ಲೈನ್‌ ತರಗತಿ ಅಷ್ಟಕ್ಕಷ್ಟೆ. ಬಹು ಸಂಖ್ಯೆಯ ಮಕ್ಕಳಿರುವ ಸರ್ಕಾರಿ ಶಾಲೆಯಲ್ಲೂ 1ರಿಂದ 5ನೇ ತರಗತಿ ಮಕ್ಕಳಿಗೆ ಯಾವುದೇ ರೀತಿಯಲ್ಲೂ ಪಠ್ಯ ಬೋಧನೆ ನಡೆದಿಲ್ಲ. ಹಾಗಾಗಿ ಪರೀಕ್ಷೆ ನಡೆಸಿದರೆ ಎಲ್ಲರಿಗೂ ನಡೆಸಬೇಕಾಗುತ್ತದೆ. ಎಲ್ಲರಿಗೂ ಪರೀಕ್ಷೆ ನಡೆಸಲು ತಾಂತ್ರಿಕ ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ಈ ಐದನೇ ತರಗತಿವರೆಗಿನ ಮಕ್ಕಳಿಗೆ ಯಾವುದೇ ಪರೀಕ್ಷೆ ನಡೆಸದಿರುವುದು ಸೂಕ್ತ ಎನ್ನುತ್ತಾರೆ ಬಹಳಷ್ಟು ಪೋಷಕರು.

ಕೋವಿಡ್‌ನಿಂದ 1ರಿಂದ 9ನೇ ತರಗತಿ ಮಕ್ಕಳ ಶೈಕ್ಷಣಿಕ ಚಟುವಟಿಕೆ ಪರಿಪೂರ್ಣವಾಗಿ ನಡೆದಿಲ್ಲ. ನಗರ ಭಾಗದ ಖಾಸಗಿ ಶಾಲೆಗಳು ಆನ್‌ಲೈನ್‌ ಪಾಠ ಮಾಡಿದ್ದರೆ, ಗ್ರಾಮೀಣದಲ್ಲಿ ಅದೂ ಸರಿಯಾಗಿ ನಡೆದಿಲ್ಲ. ಶುಲ್ಕ ಕಟ್ಟಲಾಗದ, ಸೌಲಭ್ಯಗಳಿಲ್ಲ ಸಾಕಷ್ಟುಮಕ್ಕಳು ಆನ್‌ಲೈನ್‌ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ 1ರಿಂದ 5ನೇ ತರಗತಿ ಮಕ್ಕಳು ಸಂಪೂರ್ಣ ವಂಚಿತರಾಗಿದ್ದಾರೆ. ಉಳಿದವರಿಗೆ ಕೆಲ ತಿಂಗಳು ತರಗತಿ ಪಾಠಗಳು ನಡೆದಿವೆ. ಹಾಗಾಗಿ ಪರೀಕ್ಷೆ ನಡೆಸದಿರುವುದೇ ಸೂಕ್ತ ಎಂದು ಖಾಸಗಿ ಶಾಲೆಗಳ ಪೋಷಕರ ಸಂಘದ ಸಮನ್ವಯ ಸಮಿತಿ ಬಿ.ಎಸ್‌.ಯೋಗಾನಂದ ತಿಳಿಸಿದ್ದಾರೆ.

ಕಲಿಕೆ ನಿರಂತರವಾಗಿರಬೇಕು ಮತ್ತು ಅದಕ್ಕೆ ತಕ್ಕಂತೆ ಮಕ್ಕಳ ಮೌಲ್ಯಮಾಪನವೂ ನಡೆಯಬೇಕು. ಶಾಲೆಗೆ ಬಾರದ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಎಲ್ಲರನ್ನೂ ಉತ್ತೀರ್ಣಗೊಳಿಸಿದರೆ, ನಿರಂತರವಾಗಿ ಆನ್‌ಲೈನ್‌ ತರಗತಿಗೆ ಹಾಜರಾಗಿ ಓದಿರುವ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ವೈಜ್ಞಾನಿಕವಾಗಿಯೂ ಇದು ಸರಿಯಲ್ಲ ಎಂದು ಕ್ಯಾಮ್ಸ್‌ ಕಾರ್ಯದರ್ಶಿ ಡಿ.ಶಶಿಕುಮಾರ್‌ ಹೇಳಿದ್ದಾರೆ. 
 

Follow Us:
Download App:
  • android
  • ios