ಈ ಸಾಲಿನಲ್ಲಿ 550 ಕೋಟಿ ರು. ಬಿಡುಗಡೆ| ಶುಲ್ಕ ನೀಡಿಕೆ ತಡವಾಗಿದ್ದರೆ ದೂರು ಕೊಡಿ| ಕಳೆದ ಜೂನ್‌ನಲ್ಲಿ ಮೊದಲ ಕಂತಿನ 275 ಕೋಟಿ ರು., ಸೆಪ್ಟಂಬರ್‌ನಲ್ಲಿ ಎರಡು ಮತ್ತು ಮೂರನೇ ಕಂತಿನ 137 ಕೋಟಿ ರು., ಡಿ.10ರಂದು ಕೊನೆಯ ಕಂತಿನ 137.50 ಕೋಟಿ ರು. ಮರುಪಾವತಿ ಶುಲ್ಕದ ಅನುದಾನ ಬಿಡುಗಡೆ|
ಬೆಂಗಳೂರು(ಡಿ.28): ಖಾಸಗಿ ಶಾಲೆಗಳಿಗೆ ಆರ್‌ಟಿಇ (ಶೈಕ್ಷಣಿಕ ಹಕ್ಕು) ಅಡಿ ದಾಖಲಾದ ಮಕ್ಕಳ ಶುಲ್ಕ ಸರ್ಕಾರದಿಂದ ಮರುಪಾವತಿಯಾಗಿಲ್ಲ ಎಂಬ ಆರೋಪ ಸುಳ್ಳು. 2020-21ನೇ ಸಾಲಿನಲ್ಲಿ ಒಟ್ಟು 550 ಕೋಟಿ ರು. ಆರ್‌ಟಿಇ ಮರುಪಾವತಿ ಶುಲ್ಕವನ್ನು ಬಿಡುಗಡೆ ಮಾಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
‘ಯಾವುದೇ ಶಾಲೆಗೆ ಆರ್‌ಟಿಇ ಮರುಪಾವತಿ ಶುಲ್ಕ ನೀಡಿಕೆ ವಿಳಂಬವಾಗಿದ್ದರೆ ಅದನ್ನು ತಮ್ಮ ಗಮನಕ್ಕೆ ತಂದರೆ ನ್ಯಾಯ ಒಗಿಸುವ ಜೊತೆಗೆ ವಿಳಂಬಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇನೆ ಎಂದು ಕೂಡ ಸಚಿವರು ಪ್ರಕಟಣೆ ನೀಡಿದ್ದಾರೆ.
ಐದು ಸರ್ಕಾರಿ ಶಾಲೆ ದತ್ತು ಪಡೆದ ಸಚಿವ ಜಾರಕಿಹೊಳಿ
ರಾಜ್ಯದಲ್ಲಿ ಆರ್‌ಟಿಇ ಆರಂಭವಾದಾಗಿನಿಂದ ಇದುವರೆಗೂ ಆರ್‌ಟಿಇ ಅಡಿ ಪ್ರವೇಶ ಪಡೆದ ಮಕ್ಕಳಿಗೆ ಸಂಬಂಧಿಸಿದಂತೆ ಖಾಸಗಿ ಶಾಲೆಗಳಿಗೆ ಎಷ್ಟೆಷ್ಟು ಕೋಟಿ ರು. ಅನುದಾನ ನೀಡಲಾಗಿದೆ ಎಂದು ವಿವರಿಸಿರುವ ಸಚಿವರು, ‘ಪ್ರಸಕ್ತ ಸಾಲಿನಲ್ಲೂ ನಮ್ಮ ಸರ್ಕಾರ ಆರ್ಥಿಕ ಸಂಕಷ್ಟದ ನಡುವೆಯೂ 550 ಕೋಟಿ ರು. ಮರುಪಾವತಿ ಹಣವನ್ನು ಈಗಾಗಲೇ ಶಾಲೆಗಳಿಗೆ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಕಳೆದ ಜೂನ್‌ನಲ್ಲಿ ಮೊದಲ ಕಂತಿನ 275 ಕೋಟಿ ರು., ಸೆಪ್ಟಂಬರ್‌ನಲ್ಲಿ ಎರಡು ಮತ್ತು ಮೂರನೇ ಕಂತಿನ 137 ಕೋಟಿ ರು., ಡಿ.10ರಂದು ಕೊನೆಯ ಕಂತಿನ 137.50 ಕೋಟಿ ರು. ಮರುಪಾವತಿ ಶುಲ್ಕದ ಅನುದಾನ ಬಿಡುಗಡೆ ಮಾಡಲಾಗಿದೆ. ಈ ಹಿಂದಿನ ಯಾವುದೇ ಶೈಕ್ಷಣಿಕ ಸಾಲಿನಲ್ಲೂ ಇಷ್ಟುಶೀಘ್ರವಾಗಿ ಬಿಡುಗಡೆ ಮಾಡಿದ ಉದಾಹರಣೆಗಳಿಲ್ಲ’ ಎಂದು ಅವರು ಹೇಳಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 28, 2020, 12:08 PM IST