ಕರ್ನಾಟಕ ರಾಜ್ಯೋತ್ಸವ: ಸಚಿವ ಸುರೇಶ್ ಕುಮಾರ್ ಬೇಸರ

ಕೊರೋನಾದಿಂದ ಹೋಂ ಕ್ವಾರಂಟೈನ್‌ನಲ್ಲಿದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಡಾಕ್ಟರ್ ಸಲಹೆಯನ್ನು ಉಲ್ಲಂಘಿಷಿ ಒಂದು ತಿಂಗಳು ನಂತರ ಆಚೆ ಬಂದಿದ್ದಾರೆ.

Minister Suresh Kumar reacts about karnataka rajyotsava rbj

ಬೆಂಗಳೂರು, (ನ.01): ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ  ಸಚಿವ ಸುರೇಶ್ ಕುಮಾರ್ ಚಿಕಿತ್ಸೆ ಪಡೆದುಕೊಂಡು ಆಸ್ಪತ್ರೆಯಿಂದ ಮನೆ ವಾಪಸ್ ಆಗಿದ್ದಾರೆ. ಇದೀಗ ವೈದ್ಯರ  ಸೂಚನೆ ಉಲ್ಲಂಘಿಸಿ ಆಚೆ ಸುರೇಶ್ ಕುಮಾರ್ ಅವರು ಆಚೆ ಬಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಒಂದು ತಿಂಗಳ ನಂತರ ಇಂದು (ಭಾನುವಾರ) ಹೊರಗಡೆ ಬಂದಿರುವ ಸುರೇಶ್ ಕುಮಾರ್, ಅವರು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕೊರೋನಾ ನಿಯಮಗಳ ಅಡಿಯಲ್ಲಿಯೇ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಕೊರೋನಾ ಸೋಂಕಿನಿಂದ ಹೋಂ ಕ್ವಾರಂಟೈನ್‌ನಲ್ಲಿದ್ದ ಸಚಿವರು ದಿಢೀರ್ ಆಸ್ಪತ್ರೆಗೆ ಶಿಫ್ಟ್..!

ಈ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸಿರುವ ಸುರೇಶ್ ಕುಮಾರ್, ವೈದ್ಯರು ಇನ್ನೂ ಎರಡು ಮೂರು ದಿನಗಳ ಕಾಲ ಮನೆಯಲ್ಲಿ ಇರಬೇಕು ಎಂದು ಸೂಚಿಸಿದ್ದರು. ಆದರೆ ಇಂದು ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ.  ಅದೂ ನಮ್ಮ ಇಲಾಖೆಯಿಂದ ನಡೆಯುವ ಪ್ರಮುಖ ಕಾರ್ಯಕ್ರಮ. ಮೇಲಾಗಿ ಸ್ವತಃ ರಾಜ್ಯದ ಮುಖ್ಯಮಂತ್ರಿಗಳು ಭಾಗವಹಿಸುವ ಕಾರ್ಯಕ್ರಮ.  ಹೀಗಾಗಿ ನಾನು ವೈದ್ಯರು ಸೂಚನೆಯನ್ನು ಸ್ವಲ್ಪ ಉಲ್ಲಂಘಿಸಲೇ ಬೇಕಾಯಿತು ಎಂದು ಬರೆದುಕೊಂಡಿದ್ದಾರೆ.

ವೈದ್ಯರು ಇನ್ನೂ ಎರಡು ಮೂರು ದಿನಗಳ ಕಾಲ ಮನೆಯಲ್ಲಿ ಇರಬೇಕು ಎಂದು ಸೂಚಿಸಿದ್ದರು. ಆದರೆ ಇಂದು ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ. ಅದೂ...

Posted by Suresh Kumar S on Saturday, October 31, 2020

ಕಳೆದ ವರ್ಷ ಇದೇ ದಿನ ಇಡೀ ಕಂಠೀರವ ಕ್ರೀಡಾಂಗಣ ಶಾಲಾ ಮಕ್ಕಳ ಕಲರವದಿಂದ ತುಂಬಿ ತುಳುಕುತ್ತಿತ್ತು. ಆದರೆ ಕೊರೋನಾ ನಮ್ಮ ಸಂಭ್ರಮವನ್ನು ಇಂದು ಕಸಿದುಕೊಂಡಿತ್ತು.  ಶಾಲಾ ಮಕ್ಕಳಿಲ್ಲದ  ಕಾರ್ಯಕ್ರಮ ಊಹಿಸಿಕೊಳ್ಳಲೂ ಬೇಸರವಾಗುತ್ತದೆ.  ಕೊರೋನಾ  ನಮ್ಮ ಸಂಭ್ರಮವನ್ನು ಕಸಿದು ಕೊಂಡಿರಬಹುದು,  ಆದರೆ ನಮ್ಮ ಸಂಕಲ್ಪವನ್ನಲ್ಲ ಎಂದು ಹೇಳಿದರು.

Latest Videos
Follow Us:
Download App:
  • android
  • ios