SSLC, PUC ಪರೀಕ್ಷೆ ನಡೆಸಬೇಕೋ? ಬೇಡವೋ? ಮಹತ್ವದ ಸಲಹೆ ಕೊಟ್ಟ ಸಚಿವ ಅಶೋಕ್
* SSLC, PUC ಪರೀಕ್ಷೆ ನಡೆಸಬೇಕೋ? ಬೇಡವೋ? ಎನ್ನುವ ಬಗ್ಗೆ ಅಶೋಕ್ ಬಳಿ ಸಲಹೆ ಕೇಳಿದ ಸುರೇಶ್ ಕುಮಾರ್
* ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆ ಬಗ್ಗೆ ಸಚಿವ ಅಶೋಕ್ ಅಭಿಪ್ರಾಯ
* ಪರೀಕ್ಷೆ ನಡೆಸುವ ಬಗ್ಗೆ ಸಲಹೆ ಕೊಟ್ಟ ಅಶೋಕ್
ಬೆಂಗಳೂರು, (ಜೂನ್.02): ಕೇಂದ್ರ ಸರ್ಕಾರ ಸಿಬಿಎಸ್‌ಇ 12ನೇ ತರಗತಿಯ ಪರೀಕ್ಷೆಗಳನ್ನು ರದ್ದು ಮಾಡಿದೆ. ಇದರ ಬೆನ್ನಲ್ಲೇ ಮಧ್ಯಪ್ರದೇಶ, ಗುಜರಾತ್ ಸೇರಿದಂತೆ ಹಲವು ರಾಜ್ಯಗಳು 12ನೇ ಕ್ಲಾಸ್ ಪರೀಕ್ಷೆಗಳನ್ನು ರದ್ದು ಮಾಡಿವೆ.
ಆದ್ರೆ, ಕರ್ನಾಟಕದಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ಬಗ್ಗೆ ಇನ್ನೂ ಗೊಂದಲ ಮುಂದುವರೆದಿದ್ದು, ಈ ಬಗ್ಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ತಜ್ಞರು ಹಾಗೂ ಅಧಿಕಾರಿಗಳ ಜೊತೆ ನಿರಂತರ ಚರ್ಚೆಗಳನ್ನ ಮಾಡುತ್ತಿದ್ದಾರೆ.
ಮುಂದುವರೆದ SSLC, PUC ಪರೀಕ್ಷೆ ಗೊಂದಲ: ಶಿಕ್ಷಣ ಸಚಿವರಿಂದ ಹೊರಬಿತ್ತು ಮಹತ್ವದ ಸ್ಪಷ್ಟನೆ
ಅಶೋಕ್ ಸಲಹೆ ಕೇಳಿದ ಸುರೇಶ್
ಹೌದು....ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಕಂದಾಯ ಸಚಿವ ಆರ್ ಅಶೋಕ್ ಅವರನ್ನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆ ಬಗ್ಗೆ ಸಲಹೆ ಕೇಳಿದ್ದು, ಇದಕ್ಕೆ ಅಶೋಕ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಈ ಬಗ್ಗೆ ಅಶೋಕ್ ಸುದಿಗಾರರೊಂದಿಗೆ ಹಂಚಿಕೊಂಡಿದ್ದು, ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆ ಬಗ್ಗೆ ಸುರೇಶ್ ಕುಮಾರ್ ನನ್ನ ಸಲಹೆ ಕೇಳಿದ್ರು. ಪರೀಕ್ಷೆ ಇಲ್ಲದೇ ಪಾಸ್ ಮಾಡಿದ್ರೆ ಹೇಗೆ ? ಕೇಳಿದ್ದು, ಇದಕ್ಕೆ ನಾನು ಸಲಹೆ ಕೊಟ್ಟಿದ್ದೇನೆ..
ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ. ನಾಳೆ ನೌಕರಿಗೆ ಕಷ್ಟ ಆಗುತ್ತದೆ. ಪರೀಕ್ಷೆ ಇಲ್ಲದೇ ಪಾಸ್ ಮಾಡ್ತಾ ಹೋದ್ರೆ ಮುಂದೆ ವಿದ್ಯಾರ್ಥಿಗಳಿಗೆ ಕಷ್ಟ . ಪಿಯುಸಿ, ಎಸ್ ಎಸ್ ಎಲ್ ಮಕ್ಕಳ ಭವಿಷ್ಯದ ಟರ್ನಿಂಗ್ ಪಾಯಿಂಟ್. ಪ್ರಮುಖ ವಿಷಯಗಳನ್ನು ಒಟ್ಟಾಗಿ ನಡೆಸುವ ಬಗ್ಗೆ ಸಲಹೆ ನೀಡಿದ್ದೇನೆ (ಕನ್ನಡ + ಇಂಗ್ಲಿಷ್) ಪರೀಕ್ಷೆ ನಡೆಸುವ ಬಗ್ಗೆ ಶಿಕ್ಷಣ ತಜ್ಞರ ಅಭಿಪ್ರಾಯ ಪಡೆದು ಮಾಡ್ತೇವೆ. ಒಂದು ಗಂಟೆಯ ಸಮಯ ನಿಗದಿ ಮಾಡಿ ಪರೀಕ್ಷೆ ನಡೆಸುವ ಸಲಹೆ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು.