ಮಕ್ಕಳೇ, ಏನೇನ್‌ ಕೊಟ್ಟಿದ್ದಾರೆ ಟೀಚರ್‌ ಊಟಾ ಮಾಡೋಕೆ, ಚಕ್ಕಿ ಕೊಟ್ಟಿದ್ದಾರಾ ಎಂದು ಸಚಿವ ಹಾಲಪ್ಪ ಆಚಾರ್‌ ಅಂಗನವಾಡಿ ಕೇಂದ್ರದ ಮಕ್ಕಳನ್ನು ವಿಚಾರಿಸಿದರು. ತಾಲೂಕಿನ ಗುದ್ನೇಪ್ಪನಮಠ, ದ್ಯಾಂಪೂರು ಗ್ರಾಮದ ಅಂಗನವಾಡಿ ಕೇಂದ್ರಗಳಿಗೆ ದಿಢೀರ್‌ ಭೇಟಿ ನೀಡಿದರು.

ಕುಕನೂರು (ಸೆ.2) : ಮಕ್ಕಳೇ, ಏನೇನ್‌ ಕೊಟ್ಟಿದ್ದಾರೆ ಟೀಚರ್‌ ಊಟಾ ಮಾಡೋಕೆ, ಚಕ್ಕಿ ಕೊಟ್ಟಿದ್ದಾರಾ ಎಂದು ಸಚಿವ ಹಾಲಪ್ಪ ಆಚಾರ್‌ ಅಂಗನವಾಡಿ ಕೇಂದ್ರದ ಮಕ್ಕಳನ್ನು ವಿಚಾರಿಸಿದರು.ತಾಲೂಕಿನ ಗುದ್ನೇಪ್ಪನಮಠ, ದ್ಯಾಂಪೂರು ಗ್ರಾಮದ ಅಂಗನವಾಡಿ ಕೇಂದ್ರಗಳಿಗೆ ದಿಢೀರ್‌ ಭೇಟಿ ನೀಡಿ ಮಕ್ಕಳೊಂದಿಗೆ ಬೆರೆತ ಅವರು, ಅಂಗನವಾಡಿ ಕೇಂದ್ರದಲ್ಲಿ ಏನೇನೂ ನಿಮಗೆ ಆಹಾರ ನೀಡುತ್ತಾರೆ. ಹೇಗಿರುತ್ತದೆ, ಊಟಾ ಮಾಡ್ತೀರಾ ಎಂದು ಆಹಾರದ ಗುಣಮಟ್ಟದ ಬಗ್ಗೆ ಪರಿಶೀಲಿಸಿದರು. ನಂತರ ಆಹಾರ ಸಾಮಗ್ರಿಗಳು ಅಂಗನವಾಡಿ ಕೇಂದ್ರಗಳಿಗೆ ಸರಿಯಾಗಿ ಬರುತ್ತದೆ ಎಂದು ಪರಿಶೀಲಿಸಿದರು. ನಂತರ ಮಕ್ಕಳೇ ಏನೇನೂ ಕಲ್ತಿದ್ದೀರಾ ಎಂದು ಕೇಳಿ ಮಕ್ಕಳೊಂದಿಗೆ ಚಂದಮಾಮಾ ಹಾಡು ಹಾಡಿಸಿ ಮಕ್ಕಳ ಜತೆ ಬೆರೆತರು.

ಅಭಿವೃದ್ಧಿಗೆ ಆದ್ಯತೆ ನೀಡದ ಕಾಂಗ್ರೆಸ್‌: ಸಚಿವ ಹಾಲಪ್ಪ ಆಚಾರ್‌

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ಯಾರು ಎಂದು ಟೀಚರ್‌ ಮಕ್ಕಳಿಗೆ ಪ್ರಶ್ನಿಸಿದಾಗ, ಮಕ್ಕಳು ಹಾಲಪ್ಪ ಆಚಾರ್‌ ಎಂದು ಉತ್ತರಿಸಿದರು. ಅವರನ್ನು ನೋಡಿದ್ದೀರಾ ಎಂದು ಸಚಿವ ಹಾಲಪ್ಪ ಆಚಾರ್‌ ಮಕ್ಕಳನ್ನು ಮರ ಪ್ರಶ್ನಿಸಿದರು. ಮಕ್ಕಳು ನೀವೇ ಎಂದು ಸಚಿವರತ್ತ ಕೈ ತೋರಿಸಲು, ಮಕ್ಕಳು ಸ್ಪೀಡ್‌ ಇದ್ದಾರೆ ಎಂದು ಸಚಿವರು ನಗೆ ಬೀರಿದರು.

ಶಾಲೆಗೆ ಭೇಟಿ: ಗುದ್ನೇಪ್ಪನ ಮಠದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಚಿವ ಹಾಲಪ್ಪ ಆಚಾರ್‌ ಭೇಟಿ ನೀಡಿ ಶಾಲೆಯ ಬಿಸಿಯೂಟ ಸವೆದು ಗುಣಮಟ್ಟಪರಿಶೀಲಿಸಿದರು. ಶಾಲೆಯ ಮಕ್ಕಳ, ಶಿಕ್ಷಕರ ಹಾಜರಾತಿ ಪರಿಶೀಲಿಸಿ ಶಿಕ್ಷಕರ, ಮಕ್ಕಳ ಗೈರಿಗೆ ಕಾರಣ ಕೇಳಿದರು. 100 ಮಕ್ಕಳಲ್ಲಿ ಬರೀ 60 ಮಕ್ಕಳು ಶಾಲೆಗೆ ಹಾಜರಾಗಿದ್ದು, ಶಿಕ್ಷಕರು ಮಕ್ಕಳು ಗೈರಾಗದಂತೆ ಗಮನಹರಿಸಲು ಸೂಚಿಸಿದರು.

ಹಾಜರಾತಿ ಪುಸ್ತಕ ಪರಿಶೀಲನೆ: ನಂತರ ಶಿಕ್ಷಕರ ಹಾಜರಾತಿ, ಮಕ್ಕಳ ಹಾಜರಾತಿ ಪುಸ್ತಕ ಪರಿಶೀಲಿಸಿದರು. ಎಷ್ಟುಜನ ಶಿಕ್ಷಕರಿದ್ದೀರಿ ಎಂದು ಮುಖ್ಯೋಪಾಧ್ಯಾಯ ಖಾಜಾಸಾಬ್‌ ಹೊಸಳ್ಳಿ ಅವರನ್ನು ವಿಚಾರಿಸಿದರು. ನಾಲ್ಕು ಜನ ಶಿಕ್ಷಕರಲ್ಲಿ ಇಬ್ಬರೇ ಶಿಕ್ಷಕರು ಶಾಲೆಯಲ್ಲಿರುವುದನ್ನು ಕಂಡ ಅವರು, ಉಳಿದ ಇನ್ನಿಬ್ಬರ ಶಿಕ್ಷಕರ ಬಗ್ಗೆ ಹಾಜರಾತಿ ಪುಸ್ತಕ ಪರಿಶೀಲಿಸಿದರು. ನಂತರ ಮಕ್ಕಳ ಕಲಿಕೆ ಬಗ್ಗೆ ಕೈಗೊಂಡ ನಾನಾ ಕ್ರಮ ಹಾಗೂ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಪ್ರಗತಿ ಪರಿಶೀಲನೆ ಮಾಡಿದರು. ಸಿಡಿಪಿಒ ಸಿಂಧು ಯಲಿಗಾರ, ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ಮುಖಂಡ ಬಸವನಗೌಡ ತೊಂಡಿಹಾಳ ಇತರರಿದ್ದರು.'ಬಿಪಿಎಲ್‌ ಕಾರ್ಡ್‌ ಹೊಂದಿದ ಪ್ರತಿ ಕುಟುಂಬಕ್ಕೂ ಮನೆ'