Hijab Controversy: ಡಿಗ್ರಿ ಕಾಲೇಜಿಗೂ ಸಮವಸ್ತ್ರ: ಸಚಿವ ಅಶ್ವತ್ಥ್ ಹೇಳಿದ್ದಿಷ್ಟು
* ಪದವಿ ಕಾಲೇಜುಗಳಿಗೆ ಅಂಥ ಯಾವುದೇ ನಿಯಮ ಇಲ್ಲ
* ವಿದ್ಯಾರ್ಥಿಗಳು ಇಷ್ಟದ ವಸ್ತ್ರ ಧರಿಸಿಕೊಂಡು ಹೋಗಬಹುದು
* ಕಾನೂನು ಉಲ್ಲಂಘಿಸಿದವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ
ಚಾಮರಾಜನಗರ(ಫೆ.16): ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಹಿಜಾಬ್ ಹಾಕಲು ಅವಕಾಶವಿಲ್ಲ, ಅಲ್ಲಿ ಸಮವಸ್ತ್ರ ಕಡ್ಡಾಯ. ಆದರೆ, ಪದವಿ ಕಾಲೇಜುಗಳಿಗೆ ಅಂಥ ಯಾವುದೇ ನಿಯಮ ಇಲ್ಲ. ಅಲ್ಲಿ ವಿದ್ಯಾರ್ಥಿಗಳು(Students) ಇಷ್ಟದ ವಸ್ತ್ರ ಧರಿಸಿಕೊಂಡು ಹೋಗಬಹುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ(CN Ashwath Narayan) ತಿಳಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶಾಲೆ ಮತ್ತು ಪಿಯು ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಯಾವುದೇ ಕಾರಣಕ್ಕೂ ಅವಕಾಶ ಇಲ್ಲ. ಕಾನೂನನ್ನು ಎಲ್ಲರೂ ಗೌರವಿಸಬೇಕು, ಕಾನೂನು ಉಲ್ಲಂಘಿಸಿದವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ಇದೇ ವೇಳೆ ಹಿಜಾಬ್ ವಿಚಾರವಾಗಿ ಗದ್ದಲ ಮಾಡುತ್ತಿರುವವರಿಗೆ ಎಚ್ಚರಿಸಿದರು.
Hijab Row: ಹಿಜಾಬ್- ಕೇಸರಿ ಶಾಲು ಧರಿಸಿ ಬಂದ್ರೆ ಕಾಲೇಜಿಗೆ ನೋ ಎಂಟ್ರಿ: ರಘುಪತಿ ಭಟ್
ಬುಧವಾರದಿಂದ ರಾಜ್ಯದಲ್ಲಿ(Karnataka) ಕಾಲೇಜುಗಳು ಆರಂಭವಾಗಲಿವೆ. ಯಾವುದೇ ಕಾರಣಕ್ಕೂ ಶಾಲಾ-ಕಾಲೇಜುಗಳಿಗೆ ಹೊರಗಿನವರಿಗೆ ಅವಕಾಶ ಇಲ್ಲ. ಹೊರಗಿನವರು ಶಾಲಾ- ಕಾಲೇಜಿನೊಳಗೆ ಪ್ರವೇಶಿಸದಂತೆ ನೋಡಿಕೊಳ್ಳುವುದು ಪ್ರಾಂಶುಪಾಲರು, ಅಧ್ಯಾಪಕರ ಕರ್ತವ್ಯ ಎಂದು ತಿಳಿಸಿದರು.
ಹಿಜಾಬ್ ವಿವಾದ ತಡೆಗೆ ಪಿಯುಸಿಗೂ ಸಮವಸ್ತ್ರ?
ಬೆಂಗಳೂರು: ಕರಾವಳಿ ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜೊಂದರಲ್ಲಿ ಉದ್ಭವಿಸಿರುವ ‘ಹಿಜಾಬ್’ (ಶಿರವಸ್ತ್ರ) ವಿವಾದ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಪಿಯು ಕಾಲೇಜು ವಿದ್ಯಾರ್ಥಿಗಳಿಗೂ ಸಮವಸ್ತ್ರ(Uniform) ಪರಿಚಯಿಸಬಹುದಾ ಎಂಬ ಬಗ್ಗೆ ಸರ್ಕಾರದ ಮುಂದೆ ಪ್ರಸ್ತಾವನೆ ಇಡಲು ಇಲಾಖೆ ಮುಂದಾಗಿದೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್(BC Nagesh) ಅವರೊಂದಿಗೆ ಇಲಾಖೆಯ ಮುಂದಿನ ಸಭೆಯಲ್ಲಿ ಈ ವಿಷಯ ಕುರಿತು ಚರ್ಚಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಪದೇ ಪದೇ ಇಂತಹ ವಿವಾದಗಳಾಗುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ತೆರೆ ಎಳೆಯುವ ಅಗತ್ಯವಿದ್ದು, ಇದಕ್ಕಾಗಿ ಏನು ಕ್ರಮ ಕೈಗೊಳ್ಳಬಹುದು? ಶಾಲಾ ಹಂತದಲ್ಲಿ ಇರುವಂತೆ ಪಿಯು ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೂ(Students) ಸಮವಸ್ತ್ರ ಪರಿಚಯಿಸಬಹುದಾ ಎಂಬ ಬಗ್ಗೆ ಗಂಭೀರ ಚರ್ಚೆ ನಡೆಸಲು ಇಲಾಖೆಯ ನಿರ್ದೇಶಕರಾದ ಸ್ನೇಹಲ್ ಸಿದ್ಧತೆ ಮಾಡಿಕೊಂಡಿದ್ದಾರೆ.
Hijab-Saffron Row: ಹರಪನಹಳ್ಳಿ ಕಾಲೇಜಿನಲ್ಲಿ ಕೇಸರಿ ಬಣ್ಣದ ಧಿರಿಸೇ ಯುನಿಫಾರಂ..!
ಈ ಸಂಬಂಧ ‘ಕನ್ನಡಪ್ರಭ’ದೊಂದಿಗೆ(Kannada Prabha) ಮಾತನಾಡಿದ್ದ ಅವರು, ಕೆಲ ಕಾಲೇಜಿನಲ್ಲಿ ಉಂಟಾಗಿರುವ ಹಿಜಾಬ್(Hijab) ವಿವಾದವನ್ನು ಮುಂದಿನ ಸಭೆಯಲ್ಲಿ ನಮ್ಮ ಇಲಾಖಾ ಸಚಿವರ ಗಮನಕ್ಕೆ ತರಲಾಗುವುದು. ಸಮವಸ್ತ್ರ ವಿಚಾರದ ಪ್ರಸ್ತಾವನೆಯನ್ನು ಅವರ ಮುಂದೆ ಇಟ್ಟು ಚರ್ಚಿಸಲಾಗುವುದು. ಒಟ್ಟಿನಲ್ಲಿ ವಿವಾದವನ್ನು ಬಗೆಹರಿಸಲು ಏನು ಮಾಡಬಹುದು ಎಂಬ ಬಗ್ಗೆ ಸಚಿವರೊಂದಿಗೆ ಚರ್ಚಿಸಿ ಅವರ ಸಲಹೆ, ಸೂಚನೆಗಳ ಅನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು.
ಪಿಯು ಮಂಡಳಿಗೆ ಕಾಲೇಜಿನ ಪತ್ರ:
ಉಡುಪಿಯ(Udupi) ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮುಸ್ಲಿಂ(Muslim) ಸಮುದಾಯದ ವಿದ್ಯಾರ್ಥಿನಿಯರು ‘ಹಿಜಾಬ್’ ಧರಿಸಿ ಬರುವ ಕುರಿತು ಉಂಟಾಗಿರುವ ವಿವಾದ ಮೂರು ವಾರ ಕಳೆದರೂ ತಣ್ಣಗಾಗಿಲ್ಲ. ಇದು ವಿದ್ಯಾರ್ಥಿಗಳು ಮತ್ತು ಕಾಲೇಜಿನ ಆಡಳಿತ ಮಂಡಳಿ ನಡುವೆ ಹಟ-ಬಿಕ್ಕಟ್ಟು ಸೃಷ್ಟಿಸಿದೆ. ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದು ನಮ್ಮ ಹಕ್ಕು, ಹಿಜಾಬ್ ಧರಿಸಿ ತರಗತಿಗೆ ಬರಲು ಅವಕಾಶ ನೀಡುವಂತೆ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಹಿಜಾಬ್ ಧರಿಸಿ ತರಗತಿಗೆ ಹಾಜರಾಗಿ ಪಾಠ ಕೇಳುವ ನಿಯಮ ನಮ್ಮಲ್ಲಿಲ್ಲ ಎಂದು ಕಾಲೇಜು ಹೇಳಿದೆ. ಇದರಿಂದ ಬಿಕ್ಕಟ್ಟು ಮುಂದುವರೆದಿದೆ.
ಈ ಮಧ್ಯೆ, ಇಲಾಖೆ ಮೂಲಗಳ ಪ್ರಕಾರ ಕಾಲೇಜಿನ ಪ್ರಾಂಶುಪಾಲರು ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದು, ವಿದ್ಯಾರ್ಥಿಗಳ ವಸ್ತ್ರ ಸಂಹಿತೆ ವಿಚಾರದಲ್ಲಿ ಸೂಕ್ತ ನಿರ್ದೇಶನ ನೀಡುವಂತೆ ಕೋರಿದ್ದಾರೆ. ಅಂತಿಮವಾಗಿ ಬೋರ್ಡ್ ಕೈಗೊಳ್ಳುವ ನಿರ್ಧಾರಕ್ಕಾಗಿ ಕಾಲೇಜು ಕಾಯುತ್ತಿದೆ.