ಕರ್ನಾಟಕದ ಶಾಲಾ ಪಠ್ಯ ಪುಸ್ತಕದಲ್ಲಿ ಮತ್ತೊಂದು ಎಡವಟ್ಟು
* ಕರ್ನಾಟಕದ ಶಾಲಾ ಪಠ್ಯ ಪುಸ್ತಕದಲ್ಲಿ ಮತ್ತೊಂದು ಎಡವಟ್ಟು
* ಕರ್ನಾಟಕದ ಪಠ್ಯಪುಸ್ತಕದಲ್ಲಿ ಪೋಸ್ಟ್‌ಮ್ಯಾನ್ ಆದ ಮಲಯಾಳಂ ನಟ
* ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಕಿಡಿ
ಬೆಂಗಳೂರು, (ಜ.31) : ಕರ್ನಾಟಕದ ಶಾಲಾ ಪಠ್ಯ ಪುಸ್ತಕದಲ್ಲಿ (Karnataka School Text Book) ಮತ್ತೊಂದು ಎಡವಟ್ಟು ಆಗಿದೆ. ಪ್ರಸಿದ್ಧ ಮಲಯಾಳಂ ನಟನ ಫೋಟೊವನ್ನು ಪಠ್ಯಪುಸ್ತಕದಲ್ಲಿ ಪೋಸ್ಟ್‌ಮ್ಯಾನ್ ರೀತಿ ಬಿಂಬಿಸಲಾಗಿದೆ.
ಇದು ಬೊಬನ್ ಗಮನಕ್ಕೆ ಬರುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಆ ಫೋಟೊವನ್ನು ಹಂಚಿಕೊಂಡಿದ್ದು, ಪೋಸ್ಟ್‌ಮ್ಯಾನ್ ಫೋಟೋ ಬಗ್ಗೆ ರಾಜ್ಯ ಸರ್ಕಾರದ ಕಾಲೆಳೆದಿದ್ದಾರೆ.
ದುಬಾರಿ ಶುಲ್ಕದ ಭಯಕ್ಕೆ ಮೊದಲ ನೀಟ್ ಸೀಟು ಕೈಬಿಟ್ಟ ವಿದ್ಯಾರ್ಥಿನಿ, ಎರಡನೇ ಬಾರಿ ಪರೀಕ್ಷೆಯಲ್ಲಿ ಯಶಸ್ವಿ!
ಕೊನೆಗೂ ಕರ್ನಾಟಕದಲ್ಲಿ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡೆ. ಹಲವು ವರ್ಷಗಳಿಂದ ಪತ್ರಗಳನ್ನು ತಲುಪಿಸುತ್ತಿದ್ದ ಪೋಸ್ಟ್‌ಮ್ಯಾನ್ ಪ್ರಾರ್ಥನೆ ಈಡೇರಿದೆ." ಎಂದು ಆ ಫೋಟೊಗೆ ಶೀರ್ಷಿಕೆ ಕೊಟ್ಟಿದ್ದಾರೆ. ಈ ಫೋಟೊವನ್ನು ಶೇರ್ ಮಾಡುವಾಗ ತಮ್ಮನ್ನು ತಾವು ಪೋಸ್ಟ್ ಮ್ಯಾನ್ ಎಂದು ಪರಿಚಯಿಸಿಕೊಂಡಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೊ ವೈರಲ್ ಆಗುತ್ತಿದೆ. ನೆಟ್ಟಿಗರು ಈ ಫೋಟೊಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಡಿಕೆ ಸುರೇಶ್ ಕಿಡಿ
ಇನ್ನು ಇದಕ್ಕೆ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸಿದ್ದು, ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಂದಹಾಗೆ ಶಾಲಾ ಪಠ್ಯಕ್ರಮದಲ್ಲಿರುವ ಚಿತ್ರಗಳನ್ನು ಮತ್ತು ಪಠ್ಯಗಳನ್ನು ಶಿಕ್ಷಣ ಇಲಾಖೆಯಲ್ಲಿ ಸಿದ್ದಪಡಿಸಲಾಗುತ್ತಿದೆಯೋ ಅಥವಾ ಕೇಶವಕೃಪದಲ್ಲೋ ಎಂಬುದನ್ನು ಶಿಕ್ಷಣ ಸಚಿವ ನಾಗೇಶ್ ಹಾಗೂ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ (ಟ್ವಾಗ್ ಮಾಡಿ) ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಮೂಲಕ ಬಿಜೆಪಿ ಅವ್ಯವಸ್ಥೆಯಿಂದ ಇಡೀ ದೇಶದ ಎದುರು ರಾಜ್ಯ ತಲೆತಗ್ಗಿಸುವಂತಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಆಡಳಿತದ ಶಾಲಾ ಪಠ್ಯಕ್ರಮದಲ್ಲಿ ಶಿಕ್ಷಣದ ಗುಣಮಟ್ಟ ಸಂಪೂರ್ಣವಾಗಿ ಕುಸಿಯುತ್ತಿದೆ.
> ವಿದ್ಯಾರ್ಥಿಗಳು ಈಗಾಗಲೇ ಕಡಿಮೆ ಪಠ್ಯಕ್ರಮಗಳನ್ನು ಹೊಂದಿದ್ದಾರೆ
> ಜೊತೆಗೆ ಬೋಧನೆಗೆ ಸಂಬಂಧಿಸಿದಂತೆ ಸರ್ಕಾರದ ಮೇಲ್ವಿಚಾರಣೆ ಕೂಡಾ ಇಲ್ಲ.
ಸಧ್ಯದ ಪಠ್ಯಪುಸ್ತಕದಲ್ಲಿನ ಚಿತ್ರಗಳು ಸಮಿತಿಯಿಂದ ಸಂಶೋಧಿಸದೇ ಅಂತರ್ಜಾಲದಲ್ಲಿ ತಗೆದ ಚಿತ್ರಗಳಾಗಿವೆ ಎಂದು ಟ್ವೀಟ್ ಮಾಡಿದ್ದಾರೆ.