LKG, UKG, ಅಂಗನವಾಡಿ ನಾಳೆಯಿಂದ ಶುರು

*  ಕೋವಿಡ್‌ ನಿಯಮ ಪಾಲನೆಗೆ ಸ್ಪಷ್ಟಸೂಚನೆ
*  ಅನ್ಯರಿಗೆ ಸ್ವಚ್ಛತೆಗೆ ಆದ್ಯತೆ: ಗೌರವ್‌ ಗುಪ್ತಾ
*  ಬೆಂಗಳೂರಿನಲ್ಲಿ 148 ಜನರಿಗೆ ಸೋಂಕು
 

LKG UKG and Anganwadi will Resumes on Nov 08th in Karnataka grg

ಬೆಂಗಳೂರು(ನ.07): ಕೊರೋನಾ(Coronavirus) ಸೋಂಕು ಪ್ರಕರಣಗಳು ಇಳಿಕೆಯಾಗಿರುವ ಹಿನ್ನೆಲೆ ನ.8ರಿಂದ ಶಿಶುವಿಹಾರ(Kindergarten), ಅಂಗನವಾಡಿ(Anganwadi), ಎಲ್‌ಕೆಜಿ(LKG), ಯುಕೆಜಿ(UKG) ಭೌತಿಕ ತರಗತಿಗಳು ಪುನರಾರಂಭವಾಗುತ್ತಿದ್ದು, ಕೋವಿಡ್‌ ನಿಯಮಗಳ ಕಡ್ಡಾಯ ಪಾಲನೆಗೆ ಸೂಚಿಸಿದ್ದೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತಾ(Gaurav Gupta) ತಿಳಿಸಿದ್ದಾರೆ. 

ಶನಿವಾರ ಬಿಬಿಎಂಪಿ(BBMP) ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ(Karnataka) ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ದೈನಂದಿನ ವೇಳಾಪಟ್ಟಿಯಂತೆ ಅರ್ಧ ದಿನ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳ ಭೌತಿಕ ತರಗತಿಗಳನ್ನು(Offline Classes) ನಡೆಸಲು ಅನುಮತಿ ನೀಡಲಾಗಿದೆ ಎಂದರು.

ಭೌತಿಕ ತರಗತಿಗಳನ್ನು ಆರಂಭಿಸುವ ಮೊದಲು ಶಾಲೆಗಳಲ್ಲಿ(Schools) ಸ್ವಚ್ಛತಾ ಕಾರ್ಯ ನಡೆಸಬೇಕು. ತರಗತಿಗಳಿಗೆ ಹಾಜರಾಗುವ ಮಕ್ಕಳ(Children) ಪಾಲಕರಿಂದ(Parents) ಒಪ್ಪಿಗೆ ಪತ್ರ ತರುವುದನ್ನು ಕಡ್ಡಾಯಗೊಳಿಸಲಾಗಿದೆ. ಶಾಲೆಗೆ ಆಗಮಿಸುವ ಪ್ರತಿಯೊಂದು ಮಗುವಿನ ಆರೋಗ್ಯದ(Health) ಮೇಲೆ ನಿಗಾ ವಹಿಸಲು ಸೂಚಿಸಲಾಗಿದ್ದು, ಮಕ್ಕಳು, ಬೋಧಕರು ಮತ್ತು ಬೋಧಕೇತರ ಸಿಬ್ಬಂದಿ ಹೊರತುಪಡಿಸಿ ಬೇರೆಯವರಿಗೆ ಶಾಲೆ ಆವರಣದೊಳಗೆ ಪ್ರವೇಶ ನೀಡದಂತೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಹೇಳಿದರು.

Karnataka| ರಾಜ್ಯದಲ್ಲಿ 18 ತಿಂಗಳ ಬಳಿಕ ಅಂಗನವಾಡಿ ಆರಂಭ

ಪ್ರಮುಖವಾಗಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಮತ್ತು ಸಹಾಯಕಿಯರು ಎರಡು ಡೋಸ್‌ ಲಸಿಕೆ(Vaccine) ಪಡೆದಿರಬೇಕು. ಅಂಗನವಾಡಿ ಕೇಂದ್ರದ ಒಳ ಆವರಣ ಮತ್ತು ಸುತ್ತಮುತ್ತಲಿನ ಆವರಣವನ್ನು ಸ್ವಚ್ಛವಾಗಿಟ್ಟಿರಬೇಕು. ಅಂಗನವಾಡಿ ಕೇಂದ್ರದಲ್ಲಿನ ಪೀಠೋಪಕರಣ, ಮಕ್ಕಳು ಕುಳಿತುಕೊಳ್ಳಲು ಉಪಯೋಗಿಸಿದ ಜಮಾಖಾನ, ಡೆಸ್ಕ್‌, ಕುರ್ಚಿಗಳು ಅಂಗನವಾಡಿ ಪ್ರಾರಂಭಕ್ಕೂ ಮೊದಲೇ ಶುಚಿಗೊಳಿಸಿರಬೇಕು. ಅಂಗನವಾಡಿ ಕೇಂದ್ರದ ಕಿಟಕಿ ಬಾಗಿಲುಗಳನ್ನು ತೆರೆದಿಡಬೇಕು ಎಂದು ಸೂಚಿಸಿರುವುದಾಗಿ ತಿಳಿಸಿದರು.

ಬಿಬಿಎಂಪಿ ಮಾರ್ಗಸೂಚಿಗಳು

ಶಿಶುವಿಹಾರ ಮತ್ತು ಆಟದ ಮನೆಗಳಲ್ಲಿ ಮುಖಗವುಸನ್ನು(Mask) ಕಡ್ಡಾಯವಾಗಿ ಧರಿಸಬೇಕು. ಕೈ ತೊಳೆದುಕೊಳ್ಳಲು ಸೋಪು ಇಟ್ಟಿರಬೇಕು. ಶೌಚಾಲಯ, ಶಿಶುವಿಹಾರಗಳ ಮತ್ತು ಆಟದ ಮನೆಯ ನೆಲ, ಗೋಡೆ, ಕಿಟಕಿ, ಬಾಗಿಲು ಮುಂತಾದವುಗಳನ್ನು ಸೋಪಿನ ದ್ರಾವಣದಲ್ಲಿ ಸ್ವಚ್ಛಗೊಳಿಸಬೇಕು. ಶಿಶು ವಿಹಾರ ಮತ್ತು ಆಟದ ಮನೆಯ ಕೇಂದ್ರಗಳನ್ನು ತೆರೆಯುವ ಬಗ್ಗೆ ಬಿಬಿಎಂಪಿ ವಲಯ ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಹಾಲು, ತರಕಾರಿ, ದಿನಸಿ ಪ್ಯಾಕೆಟ್‌ಗಳನ್ನು ಹರಿಯುವ ನೀರಿನಿಂದ ಸ್ವಚ್ಛಗೊಳಿಸಬೇಕು. ತಯಾರಿಸಿದ ಆಹಾರವನ್ನು ಸ್ವಚ್ಛ ಮತ್ತು ಮುಚ್ಚಿದ ಪಾತ್ರೆಯಲ್ಲಿ ಸಂಗ್ರಹಿಸಿಡಬೇಕು ಎಂಬಿತ್ಯಾದಿ ನಿಯಮಗಳನ್ನು ಅನುಸರಿಸುವಂತೆ ಮಾರ್ಗಸೂಚಿಗಳನ್ನು(Guidelines) ಬಿಬಿಎಂಪಿ ಬಿಡುಗಡೆ ಮಾಡಿದೆ.

ರಾಜ್ಯದಲ್ಲಿ ಕೊರೋನಾ ನಿಯಂತ್ರಣದಲ್ಲಿದೆ. ಪ್ರಾಥಮಿಕ ಶಾಲೆಗಳನ್ನು ಸರ್ಕಾರ ಹಂತ ಹಂತವಾಗಿ ಆರಂಭ ಮಾಡಿತ್ತು. ಈಗ ಎಲ್‌ ಕೆಜಿಗೂ ಅವಕಾಶ ನೀಡಿದ್ದು ಪೂರ್ಣ ಪ್ರಮಾಣದಲ್ಲಿ ಎಲ್ಲ ಶೈಕ್ಷಣಿಕ ಚಟುವಟಿಕೆ ಆರಂಭವಾದಂತೆ ಆಗಿದೆ.

Karnataka: ಶಾಲೆಗೆ ಬಾರದ ವಿದ್ಯಾರ್ಥಿಗಳ ಕರೆತನ್ನಿ, ಸ್ಕೂಲ್‌ ಮುಖವನ್ನೇ ನೋಡದ ಸಾವಿರಾರು ಮಕ್ಳು..!

ಬೆಂಗಳೂರಿನಲ್ಲಿ 148 ಜನರಿಗೆ ಸೋಂಕು

ಬೆಂಗಳೂರು(Bengaluru) ನಗರದಲ್ಲಿ ಕೋವಿಡ್‌(Covid19) ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, ಶನಿವಾರ(ನ.06) 148 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಯಾವುದೇ ಸಾವಿನ ವರದಿಯಾಗಿಲ್ಲ.

ಹೊಸ ಪ್ರಕರಣಗಳ ಪತ್ತೆಯಿಂದ ಈವರೆಗಿನ ಸೋಂಕಿತರ ಸಂಖ್ಯೆ 12,52,680ಕ್ಕೆ ಏರಿಕೆಯಾಗಿದೆ. ಇದೇ ವೇಳೆ 94 ಪುರುಷರು, 69 ಮಹಿಳೆಯರು ಸೇರಿದಂತೆ 163 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ ಬಿಡುಗಡೆಯಾದವರ ಸಂಖ್ಯೆ 12,30,020ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಈವರೆಗೆ 16,293 ಮಂದಿ ಮೃತಪಟ್ಟಿದ್ದಾರೆ(Death). ನಗರದಲ್ಲಿ ಸದ್ಯ 6366 ಸಕ್ರಿಯ ಸೋಂಕಿತ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ(Department of Health) ವರದಿ ಮಾಹಿತಿ ನೀಡಿದೆ.

ಕಳೆದ ಹತ್ತು ದಿನಗಳಿಂದ ಹಗದೂರು ವಾರ್ಡ್‌ನಲ್ಲಿ ನಿತ್ಯ ಸರಾಸರಿ 5 ಮತ್ತು ಬೇಗೂರು ವಾರ್ಡ್‌ನಲ್ಲಿ 4 ಸೋಂಕಿತ ಪ್ರಕರಣಗಳೂ ಪತ್ತೆಯಾಗುತ್ತಿವೆ. ಬೆಳ್ಳಂದೂರು, ಎಚ್‌ಎಸ್‌ಆರ್‌ ಲೇಔಟ್‌, ಕೋರಮಂಗಲ, ವರ್ತೂರು ವಾರ್ಡ್‌ಗಳಲ್ಲಿ ತಲಾ 3 ಮತ್ತು ಹೊರಮಾವು, ರಾಮಮೂರ್ತಿ ನಗರ, ರಾಜರಾಜೇಶ್ವರಿ ನಗರ, ನ್ಯೂ ತಿಪ್ಪಸಂದ್ರ ವಾರ್ಡ್‌ನಲ್ಲಿ ನಿತ್ಯ ತಲಾ 2 ಸೋಂಕಿತ ಪ್ರಕರಣ ಪತ್ತೆಯಾಗುತ್ತಿವೆ.

68 ಮೈಕ್ರೋ ಕಂಟೈನ್ಮೆಂಟ್‌

ಪಾಲಿಕೆಯ ಎಂಟು ವಲಯಗಳಲ್ಲಿ ಮೈಕ್ರೋ ಕಂಟೈನ್ಮೆಂಟ್‌(Micro Containment) ಸಂಖ್ಯೆ 67ಕ್ಕೆ ಏರಿಕೆಯಾಗಿದೆ. ಬೊಮ್ಮನಹಳ್ಳಿ 25, ದಕ್ಷಿಣ ವಲಯ 13, ಯಲಹಂಕ 12, ಪಶ್ಚಿಮ 8, ಮಹದೇವಪುರ 5,ಪೂರ್ವ 3, ರಾಜರಾಜೇಶ್ವರಿ ನಗರ 2 ಮೈಕ್ರೋ ಕಂಟೈನ್ಮೆಂಟ್‌ಗಳನ್ನು ಗುರುತಿಸಲಾಗಿದೆ. ದಾಸರಹಳ್ಳಿ ವಲಯ ಮೈಕ್ರೋ ಕಂಟೈನ್ಮೆಂಟ್‌ ಮುಕ್ತವಾಗಿದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
 

Latest Videos
Follow Us:
Download App:
  • android
  • ios