Asianet Suvarna News Asianet Suvarna News

ಈ ಪುಟಾಣಿ ಮಕ್ಕಳು ಓದುವುದರಲ್ಲೂ ಸೈ, ವಿವಿಧ ಖಾದ್ಯ ತಯಾರಿಗೂ ಎತ್ತಿದ ಕೈ!

  • ಆವೆಮರಿಯಾ ಶಾಲೆಯಲ್ಲಿ ಪುಟಾಣಿ ಬಾಣಸಿಗರು!
  • ಶಿರಸಿಯಲ್ಲಿ ವಿದ್ಯಾರ್ಥಿಗಳಿಗೆ ತಿಂಡಿ-ತಿನಿಸು ತಯಾರಿಸುವ ಸ್ಪರ್ಧೆ
  • 225 ಮಕ್ಕಳು ಭಾಗಿ
little Chef at Ave Maria High School sirsi rav
Author
First Published Sep 24, 2022, 9:03 AM IST

ಶಿರಸಿ ಸೆ.(24) : ನಗರದ ಆವೆಮರಿಯಾ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಶುಕ್ರವಾರ ಪುಟಾಣಿ ಬಾಣಸಿಗರಿಂದ ತುಂಬಿತ್ತು. ಶಾಲೆಯ ಆವರಣದಲ್ಲಿಯೇ ವಿವಿಧ ಖಾದ್ಯಗಳನ್ನು ಸಿದ್ಧಪಡಿಸಿದ್ದರು! ಹೌದು. ಶಾಲಾ ಮಕ್ಕಳಿರುವಾಗಲೇ ಅವರಿಗೆ ಅಡುಗೆ ಬಗ್ಗೆಯೂ ಆಸಕ್ತಿ ಮೂಡಿಸುವ ಸಲುವಾಗಿ ಆವೆಮರಿಯಾ ಶಾಲೆ ವಿದ್ಯಾರ್ಥಿಗಳಿಗಾಗಿ ತಿಂಡಿ-ತಿನಿಸು ತಯಾರಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಕೊರೋನಾದಿಂದಾಗಿ ಕಳೆದ ಮೂರು ವರ್ಷಗಳಿಂದ ಯಾವುದೇ ಚಟುವಟಿಕೆಯಿಲ್ಲದೇ ಬೇಸರಿಸಿಕೊಂಡಿದ್ದ ಆವೆಮರಿಯಾ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.

New Education Policy: ಎಸ್ಸೆಸ್ಸೆಲ್ಸಿ, ಪಿಯು ಪರೀಕ್ಷಾ ಮಂಡಳಿ ವಿಲೀನ

ನಾಲ್ಕರಿಂದ ಏಳನೆಯ ತರಗತಿ ವರೆಗಿನ 225 ಮಕ್ಕಳು ಭಾಗವಹಿಸಿದ್ದರು. ನಾಲ್ಕನೆಯ ತರಗತಿಯ ಮಕ್ಕಳಿಗೆ ವಿವಿಧ ಹಣ್ಣುಗಳ ಜ್ಯೂಸ್‌, ಐದನೇ ತರಗತಿಗೆ ಅವಲಕ್ಕಿ ಖಾದ್ಯ ತಯಾರಿಕೆ, ಆರನೇ ತರಗತಿಗೆ ಮಸಾಲೆ ಮಂಡಕ್ಕಿ ಹಾಗೂ ಏಳನೆಯ ತರಗತಿಯ ಮಕ್ಕಳಿಗಾಗಿ ಫ್ರುಟ್‌ ಸಲಾಡ್‌ ಮಾಡುವ ಸ್ಪರ್ಧೆ ಏರ್ಪಡಿಸಲಾಗಿತ್ತು.

ತಮ್ಮ ಅಮ್ಮಂದಿರಿಂದ ಅಷ್ಟೊಇಷ್ಟೊಕಲಿತುಕೊಂಡಿದ್ದ ಮಕ್ಕಳು ತಮಗೆ ವಹಿಸಿದ್ದ ಪಾನೀಯ ಮತ್ತು ತಿಂಡಿ ತಿನಿಸುಗಳನ್ನು ಮಾಡಲು ಟೊಮ್ಯಾಟೋ, ಈರುಳ್ಳಿ, ಕೊತ್ತಂಬರಿ, ಮೆಣಸು, ಉಪ್ಪು, ಸಕ್ಕರೆ, ವಿವಿಧ ರೀತಿಯ ಹಣ್ಣು, ಮಂಡಕ್ಕಿ ಅವಲಕ್ಕಿ ಸೇರಿದಂತೆ ಇದನ್ನು ಮಾಡಲು ಮಿಕ್ಸರ್‌ ಸಮೇತವಾಗಿ ಶಾಲೆಗೆ ಬಂದು ಸ್ಪರ್ಧೆಯಲ್ಲಿ ಪಾಲ್ಗೊಂಡರು.

ತಿನ್ನುವ ಪದಾರ್ಥದ ಮೇಲೆ ಕೂದಲು ಬೀಳಬಾರದೆಂದು ತಲೆಗೆ ಪ್ಲಾಸ್ಟಿಕ್‌ ಕಟ್ಟಿಕೊಂಡಿದ್ದರು. ಕೈಯಿಗೆ ತಾಗುವ ಕೊಳೆ ಪದಾರ್ಥಕ್ಕೆ ತಾಗಬಾರದೆಂದು ಕೈಯಿಗೆ ಗ್ಲೌಸ್‌ ಹಾಕಿದ್ದರು. ಮೈಯಿಗೆ ಪದಾರ್ಥ ತಾಗಬಾರದೆಂದು ಎಪ್ರಾನ್‌ ಧರಿಸಿ ಪಕ್ಕಾ ದೊಡ್ಡ ಹೊಟೇಲ್‌ಗಳಲ್ಲಿರುವ ಬಾಣಸಿಗರಂತೆ ತಿಂಡಿ ತಿನಿಸುಗಳನ್ನು ಮಾಡಿ ಎಲ್ಲರಿಂದ ಸೈ ಎನಿಸಿಕೊಂಡರು.

Education: ಹಾಸ್ಟೆಲ್‌ಗಳಲ್ಲಿ ಹೆಚ್ಚುವರಿ ಶೇ.25 ರಷ್ಟುಸಂಖ್ಯಾಬಲ ಹೆಚ್ಚಳ

ಮಕ್ಕಳು ಪಾಲಕರಲ್ಲಿ ತಮಗೆ ಬೇಕಾದ ತಿಂಡಿಯನ್ನು ಕೇಳುತ್ತಾರೆ. ಆದರೆ ಅದನ್ನು ಮಾಡುವಾಗ ತಾಯಂದಿರು ಪಡುವ ಕಷ್ಟಮಕ್ಕಳಿಗೆ ತಿಳಿಯುವುದಿಲ್ಲ. ಅದನ್ನು ತಿಳಿದುಕೊಂಡು ಅದರಲ್ಲಿ ಭಾಗಿಯಾಗಿ ಮಾಡುವುದನ್ನು ಕಲಿತರೆ ಮಕ್ಕಳಿಗೂ ಒಳ್ಳೆಯದು, ಪಾಲಕರಿಗೂ ಒಳ್ಳೆಯದು. ಮಕ್ಕಳು ಅಡುಗೆ ಮಾಡುವಾಗ ಸ್ವಚ್ಛತೆಯನ್ನು ಹೇಗೆ ಅನುಸರಿಸಬೇಕು ಎನ್ನುವುದನ್ನು ಕೂಡಾ ಕಲಿಯಬೇಕಾಗುತ್ತದೆ.

-ಮೋನಿಕಾ, ಮುಖ್ಯ ಶಿಕ್ಷಕಿ, ಆವೆಮರಿಯಾ ಶಾಲೆ

Follow Us:
Download App:
  • android
  • ios