ಮಕ್ಕಳಿಗೆ ಎಳ್ಳುಂಡೆ ತಿನ್ನಿಸಿ ಪರೀಕ್ಷೆ ಚರ್ಚೆ: ಪರೀಕ್ಷೆಯೇ ಬದುಕಲ್ಲ, ನಾಯಕನ ಕೆಲಸ ತಪ್ಪು ತಿದ್ದುವುದಲ್ಲ: ಮೋದಿ

ಸಮಯದ ಸದುಪಯೋಗ ಮತ್ತು ನಿರ್ವಹಣೆ ಕುರಿತು ವಿದ್ಯಾರ್ಥಿಗಳಿಗೆ ತಿಳಿಹೇಳಿ ನಿಮ್ಮ ಸಮಯದ ಮೇಲೆ ನಿಯಂತ್ರಣ ಸಾಧಿಸುವ ಮೂಲಕ ಬದುಕಿನ ಮೇಲೆ ನಿಯಂತ್ರಣ ಸಾಧಿಸಿ, ಈ ಕ್ಷಣದಲ್ಲಿ ಬದುಕಿ. ಧನಾತ್ಮಕತೆಯನ್ನು ಹುಡುಕಿ, ನಿಮ್ಮ ಆರೈಕೆಗೂ ಆದ್ಯತೆ ನೀಡಿ' ಎಂಬುದು ಸೇರಿ ಹಲವು ವಿಚಾರಗಳ ಕುರಿತು ಮಕ್ಕಳಿಗೆ ಪಾಠ ಮಾಡಿದ ಪ್ರಧಾನಿ ನರೇಂದ್ರ ಮೋದಿ
 

Life is not a Examination Says PM Narendra Modi to Students

ನವದೆಹಲಿ(ಫೆ.11):  ಜ್ಞಾನ ಮತ್ತು ಪರೀಕ್ಷೆ ಎರಡೂ ಬೇರೆ ಬೇರೆ. ಪರೀಕ್ಷೆಯೇ ಬದುಕು ಅಲ್ಲ. ವಿದ್ಯಾರ್ಥಿಗಳು ತಮಗೆ ತಾವೇ ಸವಾಲು ಹಾಕಿಕೊಳ್ಳಬೇಕು, ಹಿಂದಿನ ಪರೀಕ್ಷೆಗಿಂತ ಮುಂದಿನ ಬಾರಿ ಉತ್ತಮ ಸಾಧನೆಗೆ ಪ್ರಯತ್ನಿಸಬೇಕು. ನಾಯಕನಾದವನ ಕೆಲಸ ಇನ್ನೊ ಬ್ಬರ ತಪ್ಪನ್ನು ತಿದ್ದುವುದಲ್ಲ, ತನ್ನನ್ನು ತಾನು ಇತರರಿಗೆ ಮಾದರಿಯನ್ನಾಗಿ ಮಾಡುವುದು! ಈ ವರ್ಷದ ಮೊದಲ ಹಾಗೂ 8ನೇ ಆವೃತ್ತಿಯ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಮೋದಿ ಅವರು ಹೇಳಿದ ಕಿವಿಮಾತುಗಳು ಇವು.

ಸಾಮಾನ್ಯವಾಗಿ ಟೌನ್‌ಹಾಲ್‌ನಲ್ಲಿ ನಡೆಯುತ್ತಿದ್ದ ಪರೀಕ್ಷೆ ಪೇ ಚರ್ಚಾ ಕಾರ್ಯಕ್ರಮವನ್ನು ಇದೇ ಮೊದಲ ಬಾರಿಗೆ ಅನೌಪಚಾರಿಕವಾಗಿ ಪ್ರಕೃತಿಯ ನಡುವೆ ನಡೆಸಲಾಯಿತು. ದೆಹಲಿಯ ಸುಂದರ್ ಉದ್ಯಾನವನದಲ್ಲಿ ದೇಶದ ವಿವಿಧೆಡೆಯಿಂದ ಆಗಮಿಸಿದ್ದ ಸುಮಾರು 35 ಮಕ್ಕಳ ಜತೆಗೆ ಚರ್ಚೆ ನಡೆಸಿದ್ದು, ಮಕ್ಕಳ ಪ್ರಶ್ನೆಗಳಿಗೆ ಅರ್ಥ ವಾಗುವ ರೀತಿಯಲ್ಲಿ ಉತ್ತರಿಸುವ ಪ್ರಯತ್ನ ನಡೆಸಿದರು. ಒತ್ತಡ ನಿರ್ವಹಣೆ, ಓದಿನಾಚೆಗಿನ ಹವ್ಯಾಸ ಗಳು, ನಾಯಕತ್ವ ಹೀಗೆ ವಿವಿಧ ವಿಚಾರಗಳ ಕುರಿತು ಮಕ್ಕಳ ಜತೆಗೆ ಮೋದಿ ಅವರು ವಿದ್ಯಾರ್ಥಿಗಳ ಜತೆಗೆ ಹರಟಿದರು. 

ಪಿಎಂ ಮೋದಿ ಶಿಕ್ಷಣ,, ಶಾಲಾ-ಕಾಲೇಜು ಮಾಹಿತಿ

ಸಮಯದ ಸದುಪಯೋಗ ಮತ್ತು ನಿರ್ವಹಣೆ ಕುರಿತು ವಿದ್ಯಾರ್ಥಿಗಳಿಗೆ ತಿಳಿಹೇಳಿದ ಅವರು, 'ನಿಮ್ಮ ಸಮಯದ ಮೇಲೆ ನಿಯಂತ್ರಣ ಸಾಧಿಸುವ ಮೂಲಕ ಬದುಕಿನ ಮೇಲೆ ನಿಯಂತ್ರಣ ಸಾಧಿಸಿ, ಈ ಕ್ಷಣದಲ್ಲಿ ಬದುಕಿ. ಧನಾತ್ಮಕತೆಯನ್ನು ಹುಡುಕಿ, ನಿಮ್ಮ ಆರೈಕೆಗೂ ಆದ್ಯತೆ ನೀಡಿ' ಎಂಬುದು ಸೇರಿ ಹಲವು ವಿಚಾರಗಳ ಕುರಿತು ಮಕ್ಕಳಿಗೆ ಪಾಠ ಮಾಡಿದರು. ಈ ವೇಳೆಚಿಣ್ಣರಿಗೆಲ್ಲಾ ಎಳ್ಳುಂಡೆಹಂಚುತ್ತಾ, ಪೋಷಕಾಂಶಗಳ ಮಹತ್ವದ ಕುರಿತು ಚರ್ಚಿಸಿದರು.

ಇದೇ ವೇಳೆ ಮಕ್ಕಳನ್ನು ಪೋಷಕರು ಪ್ರದರ್ಶನದ ವಸ್ತುವನ್ನಾಗಿ ಮಾಡಬಾರದು. ಇತರೆ ಮಕ್ಕಳೊಂದಿಗೆ ತಮ್ಮ ಮಕ್ಕಳನ್ನು ಹೋಲಿಕೆಯೂ ಮಾಡಬಾರದು. ಅದರ ಬದಲು ಅವರಿಗೆ ಬೆಂಬಲ ನೀಡಿ ಎಂದೂ ಸಲಹೆ ನೀಡಿದ್ದಾರೆ.
ನಾಯಕತ್ವದ ಕುರಿತೂ ಮಕ್ಕಳ ಜತೆಗೆ ಮಾತನಾಡಿ ನಾಯಕತ್ವ ಎಂಬುದು ಹೇರಲ್ಪಡಬಾರದು. ನಿಮ್ಮ ಸುತ್ತಮುತ್ತಲಿನ ಜನ ನಿಮ್ಮನ್ನು ಸ್ವೀಕರಿಸಬೇಕು. ಇದಕ್ಕಾಗಿ ನಿಮ್ಮನ್ನು ನೀವು ಬದಲಾಯಿಸಿಕೊಳ್ಳಬೇಕು. ನಾಯಕರಾಗಲು ಟೀಂ ವರ್ಕ್, ತಾಳ್ಮೆ ಮತ್ತು ನಂಬಿಕೆ ಗಳಿಕೆ ಅತಿ ಮುಖ್ಯ ಎಂದು ತಿಳಿಸಿದರು.

ನಾಯಕನ ವ್ಯಾಖ್ಯಾನ ಏನು ಎಂಬ ವಿದ್ಯಾರ್ಥಿಗಳ ಪ್ರಶ್ನೆಗೆ, 'ಕುರ್ತಾ ಪೈಜಾಮ, ಜಾಕೆಟ್ ಹಾಕಿ ಭಾಷಣ ನೀಡುವುದು ಅಲ್ಲ, ನಾಯಕನಾದವನ ಕೆಲಸ ಇನ್ನೊ ಬ್ಬರ ತಪ್ಪನ್ನು ತಿದ್ದುವುದೂ ಅಲ್ಲ. ನಮ್ಮನ್ನು ನಾವು ಇತರರಿಗೆ ಮಾದರಿಯನ್ನಾಗಿ ಮಾಡುವುದಾಗಿದೆ. ಸರಿಯಾದ ಸಮಯಕ್ಕೆ ಬಂದು ತರಗತಿಯನ್ನು ಮಾನಿ ಟರ್‌ಮಾಡುವವನೇಆನಿಯಮಕ್ಕೆ ಬದ್ಧನಾಗಿರದಿದ್ದರೆ ಆತನ ಮಾತನ್ನು ಯಾರಾದರೂ ಕೇಳಲು ಸಿದ್ಧರಿರು ತಾರಾ? ಟೀಚರ್ ನೀಡಿದ ಹೋಮ್ ವರ್ಕ್ ಅನ್ನು ಕ್ಲಾಸ್ ಮಾನಿಟರ್ ಮೊದಲು ಮುಗಿಸಿ ಇತರರಿಗೂ ಹೋಮ್ ವರ್ಕ್ ಮುಗಿಸಲು ನೆರವು ನೀಡಿದರೆ ಆತ ಉತ್ತಮ ನಾಯಕ' ಎಂದರು.

3.30 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಪರೀಕ್ಷಾ ಪೇ ಚರ್ಚಾ

ಇದೇ ಸರಣಿಯ ಮುಂದಿನ ಕಾರ್ಯಕ್ರಮಗಳಲ್ಲಿ ಖ್ಯಾತನಟಿ ದೀಪಿಕಾಪಡುಕೋಣೆ, ಬಾಕ್ಸರ್ ಎಂ.ಸಿ. ಮೇರಿಕೋಮ್ ಮತ್ತು ಆಧ್ಯಾತ್ಮಿಕ ಗುರು ಸದ್ಗುರು ಅವರೂ ತಮ್ಮ ಜೀವನದ ವಿವಿಧ ಅನುಭವ, ಜ್ಞಾನ ವನ್ನು ಮಕ್ಕಳ ಜತೆಗೆ ಪರೀಕ್ಷಾ ಪೇ ಚರ್ಚಾ ವೇದಿಕೆಯಲ್ಲಿ ಹಂಚಿಕೊಳ್ಳಲಿದ್ದಾರೆ.

1 ಜ್ಞಾನ ಮತ್ತು ಪರೀಕ್ಷೆ ಎರಡೂ ಬೇರೆ ಬೇರೆ. ವಿದ್ಯಾರ್ಥಿಗಳು ತಮಗೆ ತಾವೇ ಸವಾಲು ಹಾಕಿಕೊಳ್ಳಬೇಕು, ಹಿಂದಿನ ಪರೀಕ್ಷೆಗಿಂತ ಮುಂದಿನ ಬಾರಿ ಉತ್ತಮ ಸಾಧನೆಗೆ ಪ್ರಯತ್ನಿಸಬೇಕು
2 ನಿಮ್ಮ ಸಮಯದ ಮೇಲೆ ನಿಯಂತ್ರಣ ಸಾಧಿಸುವ ಮೂಲಕ ಬದುಕಿನ ಮೇಲೆ ನಿಯಂತ್ರಣ ಸಾಧಿಸಿ. ಈ ಕ್ಷಣದಲ್ಲಿ ಬದುಕಿ, ಧನಾತ್ಮಕತೆಯನ್ನು ಹುಡುಕಿ
3 ಮಕ್ಕಳನ್ನು ಪೋಷಕರು ಪ್ರದರ್ಶನದ ವಸ್ತುವನ್ನಾಗಿ ಮಾಡಬಾರದು. ಇತರೆ ಮಕ್ಕಳೊಂದಿಗೆ ತಮ್ಮ ಮಕ್ಕಳನ್ನು ಹೋಲಿಸಲೂಬಾರದು. ಅದರ ಬದಲು ಅವರಿಗೆ ಬೆಂಬಲ ನೀಡಿ
4 ನಾಯಕ ಎಂದರೆ ಕುರ್ತಾ ಪೈಜಾಮಾ, ಜಾಕೆಟ್ ಹಾಕಿ ಭಾಷಣ ಮಾಡುವುದಲ್ಲ. ಇನ್ನೊಬ್ಬರ ತಪ್ಪನ್ನು ತಿದ್ದುವುದೂ ಅಲ್ಲ, ನಮ್ಮನ್ನು ನಾವು ಇತರರಿಗೆ ಮಾದರಿಯನ್ನಾಗಿ ಮಾಡುವುದು ವರದಿ

Latest Videos
Follow Us:
Download App:
  • android
  • ios