SSLC ಬಹು ಆಯ್ಕೆ ಪರೀಕ್ಷೆ: ವಿದ್ಯಾರ್ಥಿಗಳಿಂದ ಶಿಕ್ಷಣ ಸಚಿವರಿಗೆ ಪತ್ರ

* ಪ್ರತಿಭಾವಂತ ವಿದ್ಯಾರ್ಥಿಗಳಿಂದ ಭಾರೀ ವಿರೋಧ 
* ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬರವಣಿಗೆ ರೂಪದಲ್ಲೇ ಪರೀಕ್ಷೆ ನಡೆಸಬೇಕು 
* ಬಹು ಆಯ್ಕೆಯ ಪರೀಕ್ಷೆಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯ 

Letter from the students to the Minister of Education About SSLC Exam grg

ವಿಜಯಪುರ(ಜೂ.13): ಎಸ್‌ಎಸ್‌ಎಲ್‌ಸಿಯ ಬಹು ಆಯ್ಕೆ (ಮಲ್ಟಿಪಲ್‌ ಚಾಯ್ಸ್‌) ಪರೀಕ್ಷೆಗೆ ನಗರದ ವಿಕಾಸ ಪ್ರೌಢಶಾಲೆಯ 44ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಜೊತೆಗೆ ಪ್ರತಿಭಾವಂತ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ 500 ಅಂಕಗಳಿಗೆ ಬರವಣಿಗೆ ರೂಪದಲ್ಲೇ ಪರೀಕ್ಷೆ ನಡೆಸಬೇಕು ಎಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರಿಗೆ ಪತ್ರ ಬರೆದು ಒತ್ತಾಯಿಸಲಾಗಿದೆ. 

ಬಹು ಆಯ್ಕೆಯ ಪರೀಕ್ಷೆಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ. ಹೀಗಾಗಿ ಒಂದೊಮ್ಮೆ ಬಹು ಆಯ್ಕೆ ಮೂಲಕವೇ ಪರೀಕ್ಷೆ ನಡೆಸಿದ್ದೇ ಆದರೆ, ಅಂಥ ಪರೀಕ್ಷೆಯನ್ನು ತಾವು ಬಹಿಷ್ಕರಿಸುತ್ತೇವೆ ಎಂದು ತಮ್ಮ ಪತ್ರದಲ್ಲಿ ವಿದ್ಯಾರ್ಥಿಗಳು ಉಲ್ಲೇಖಿಸಿದ್ದಾರೆ.   

ಶಾಲೆ ಫೀಸ್ ವಸೂಲಿಗೆ ಖಾಸಗಿ ಶಾಲೆಗಳ ಜತೆ ಫೈನಾನ್ಸ್​ಗಳು ಶಾಮೀಲು: ಸಚಿವ ವಾರ್ನಿಂಗ್ 

ಕೊರೋನಾ ಸೋಂಕು ನಿಯಂತ್ರಣಕ್ಕೆ ಬಂದ ಬಳಿಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ನಡೆಸುವುದಾಗಿ ಇತ್ತೀಚೆಗೆ ಘೋಷಿಸಿದ್ದ ಸಚಿವ ಸುರೇಶ್‌ ಕುಮಾರ್‌, ಬಹು ಆಯ್ಕೆ ರೂಪದಲ್ಲಿ ಪ್ರಶ್ನೆಗಳು ಇರಲಿವೆ ಎಂದಿದ್ದರು.
 

Latest Videos
Follow Us:
Download App:
  • android
  • ios