ಲಾಕ್‌ಡೌನ್‌ ಇದ್ದರೂ ಉಪನ್ಯಾಸಕರು ಕಾಲೇಜಿಗೆ?

* ನಿತ್ಯವೂ ಬೆಳಗ್ಗೆ 7ರಿಂದ 9ರವರೆಗೆ ಉಪನ್ಯಾಸಕರು ಕಾಲೇಜಿಗೆ ಬಂದು ಕೆಲಸ 
* ಮನೆಗೆ ತೆರಳಿದ ಮೇಲೆ ಆನ್‌ಲೈನ್‌ ಕ್ಲಾಸ್‌ ತೆಗೆದುಕೊಳ್ಳುವಂತೆ ಪ್ರಾಂಶುಪಾಲರ ಆದೇಶ
* ಸಿ.ಬಿ. ಕೊಳ್ಳಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಉಪನ್ಯಾಸಕರು ಕೆಲಸ ನಿರ್ವಹಿಸಿರುವ ಆರೋಪ 
 

Lecturers Working in College During Lockdown in Haveri grg

ಹಾವೇರಿ(ಮೇ.12): ಕೊರೋನಾ ನಿಯಂತ್ರಿಸಲು ಸರ್ಕಾರ ಲಾಕ್‌ಡೌನ್‌ ಘೋಷಣೆ ಮಾಡಿ ಶಾಲಾ​- ಕಾಲೇಜುಗಳಿಗೆ ಸಂಪೂರ್ಣ ರಜೆ ಕೊಟ್ಟಿದ್ದರೂ ಇಲ್ಲಿನ ಕೆಎಲ್‌ಇ ಸಂಸ್ಥೆಯ ಸಿ.ಬಿ. ಕೊಳ್ಳಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಉಪನ್ಯಾಸಕರು ಕೆಲಸ ನಿರ್ವಹಿಸಿರುವ ಆರೋಪ ಕೇಳಿಬಂದಿದೆ.

ಲಾಕ್‌ಡೌನ್‌ ನಡುವೆಯೂ ನಿತ್ಯವೂ ಕಾಲೇಜಿಗೆ ಉಪನ್ಯಾಸಕರನ್ನು ಕರೆಸಿಕೊಂಡು ಕೆಲಸ ಮಾಡಿಕೊಳ್ಳಲಾಗುತ್ತಿದೆ. ಉಪನ್ಯಾಸಕರು ಒಳಗಡೆ ಕೆಲಸ ನಿರ್ವಹಿಸುತ್ತಿದ್ದರೆ, ಪ್ರಾಂಶುಪಾಲರು ಹೊರಗಡೆ ಯಾರಾದರೂ ಬರುತ್ತಾರೋ ಎಂಬುದನ್ನು ನೋಡಿಕೊಳ್ಳುತ್ತಿದ್ದರು. ನಿತ್ಯವೂ ಬೆಳಗ್ಗೆ 7ರಿಂದ 9ರವರೆಗೆ ಉಪನ್ಯಾಸಕರು ಕಾಲೇಜಿಗೆ ಬಂದು ಕೆಲಸ ನಿರ್ವಹಿಸಿ ಬಳಿಕ ಮನೆಗೆ ತೆರಳಿ ಆನ್‌ಲೈನ್‌ ಕ್ಲಾಸ್‌ ತೆಗೆದುಕೊಳ್ಳುವಂತೆ ಪ್ರಾಂಶುಪಾಲರು ಆದೇಶ ಮಾಡಿದ್ದಾರೆ ಎನ್ನಲಾಗಿದೆ.

ಜವಾಹರ ನವೋದಯ ವಿದ್ಯಾಲಯ ಸೆಲೆಕ್ಷನ್ ಟೆಸ್ಟ್ ಮುಂದೂಡಿಕೆ

ಲಾಕ್‌ಡೌನ್‌ ಅವಧಿಯಲ್ಲಿ ಕಾಲೇಜಿಗೆ ಬರೋದಿಲ್ಲ ಎಂದರೆ ನಮಗೆ ತೊಂದರೆ ಕೊಡುತ್ತಾರೆ. ಈಗಾಗಲೇ ಕಾಲೇಜಿನ ಸಿಬ್ಬಂದಿಯೊಬ್ಬರಿಗೆ ಕೊರೋನಾ ಪಾಸಿಟಿವ್‌ ಬಂದಿದೆ. ನಮಗೆ ಕೆಲಸ ಇಲ್ಲದಿದ್ದರೂ ಕಾಲೇಜಿಗೆ ಬರುವಂತೆ ಒತ್ತಡ ಹಾಕಲಾಗುತ್ತಿದೆ ಎಂದು ಉಪನ್ಯಾಸಕರೊಬ್ಬರು ದೂರಿದ್ದಾರೆ. ಆದರೆ, ಪ್ರಾಂಶುಪಾಲ ಚನ್ನಪ್ಪ ಬಿ. ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

Latest Videos
Follow Us:
Download App:
  • android
  • ios